ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ; ನಗೆಪಾಟಲಿಗೀಡಾದ ಮಗಧ ಡಿಎಸ್ ವಿಶ್ವವಿದ್ಯಾಲಯ ಟ್ರೋಲ್
Mahendra Singh Dhoni : ಮಗಧ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಂತ್ರಜ್ಞಾನದ ಮೂಲಕ ರಚಿಸಿದ ಚಾಣಾಕ್ಯನ ಚಿತ್ರವು ಕ್ರಿಕೆಟಿಗ ಎಂಎಸ್ ಧೋನಿಯನ್ನು ಹೋಲುತ್ತಿದೆ. ಈ ಚಿತ್ರವು ಭಾರಿ ವೈರಲ್ ಆಗುತ್ತಿದೆ.
ಆಧುನಿಕ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ತಂತ್ರಜ್ಞಾನದಿಂದ ಏನು ಬೇಕಾದರೂ ಮಾಡಬಹುದಾಗಿದೆ. ಆದರೆ ಅಂತಹ ಸಾಹಸಕ್ಕೆ ಕೈ ಹಾಕಿದ ಮಗಧ ಡಿಎಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಹಾ ಎಡವಟ್ಟೊಂದನ್ನು ಮಾಡಿದ್ದಾರೆ. ವಿಜ್ಞಾನಿಗಳು ಸದ್ಯ ನಗೆಪಾಟಲಿಗೆ ಒಳಗಾಗಿದ್ದು, ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.
ಎಐನಿಂದ (Artificial intelligence) 3ಡಿ ಎಫೆಕ್ಟ್ ಮೂಲಕ ತತ್ವಜ್ಞಾನಿ ಚಾಣಕ್ಯನ ಚಿತ್ರ ಅಭಿವೃದ್ಧಿಪಡಿಸಿ ಟ್ರೋಲ್ ಆಗುತ್ತಿದ್ದಾರೆ. ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಚಿತ್ರವು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು (MS Dhoni) ಹೋಲುವಂತಿದೆ. ಧೋನಿ ಫ್ಯಾನ್ಸ್ ಈ ಚಿತ್ರ ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದಾರೆ.
2011ರ ಏಕದಿನ ವಿಶ್ವಕಪ್ ಜಯಿಸಿದ ನಂತರ ಧೋನಿ ಅವರು ತಲೆ ಕೂದಲು ತೆಗೆಸಿದ್ದರು. ಆಗ ಟ್ರೋಫಿ ಜೊತೆಗೆ ಫೋಟೋ ಕೂಡ ತೆಗಿಸಿಕೊಂಡಿದ್ದರು. ಧೋನಿ ಟ್ರೋಫಿಯೊಂದಿಗಿರುವ ಚಿತ್ರ ಮತ್ತು ಮಗಧ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ 3D ಚಿತ್ರವು ಒಂದೇ ರೀತಿ ಹೋಲುತ್ತದೆ.
ಚಾಣಕ್ಯನನ್ನು ಅಭಿವೃದ್ಧಿಪಡಿಸುವ ಬದಲಿಗೆ ಕ್ರಿಕೆಟ್ ಚಾಣಕ್ಯನನ್ನು ಅಭಿವೃದ್ಧಿಪಡಿಸಿದ್ದೀರಿ ಎಂದು ನೆಟ್ಟಿಗರು ಆ ಚಿತ್ರವನ್ನು ವೈರಲ್ ಮಾಡುತ್ತಿದ್ದಾರೆ. ಈಗ ವಿಜ್ಞಾನಿಗಳು ಸಹ ಗೊಂದಲಕ್ಕೆ ಒಳಗಾಗಿದ್ದಾರೆ. ಧೋನಿ ಫ್ಯಾನ್ಸ್ ತರಹೇವಾರಿ ಕಾಮೆಂಟ್ಗಳ ಮೂಲಕ ಸೈಂಟಿಸ್ಟ್ಗಳನ್ನು ಫುಲ್ ರೋಸ್ಟ್ ಮಾಡುತ್ತಿದ್ದಾರೆ.
ಧೋನಿಯನ್ನೂ ಚಾಣಕ್ಯ ಎನ್ನುತ್ತಾರೆ!
ಕ್ರಿಕೆಟ್ನಲ್ಲಿ ಧೋನಿಯನ್ನೂ ಚಾಣಾಕ್ಯ ಎಂದೇ ಕರೆಯಲಾಗುತ್ತದೆ. ಚಾಣಕ್ಯನಂತೆ ಅತ್ಯಂತ ತಾಳ್ಮೆಯಿಂದ ಯಾವುದೇ ಸಂದರ್ಭವನ್ನು ನಿರ್ವಹಿಸುವ ಧೋನಿ, ಎದುರಾಳಿ ತಂಡಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಾರೆ. ಇದೇ ನಡೆಯಿಂದ ಅದೆಷ್ಟೋ ಪಂದ್ಯಗಳನ್ನು ಗೆದ್ದು ಕೊಟ್ಟ ಕೀರ್ತಿ ಧೋನಿಗಿದೆ.
ಧೋನಿ ಭರ್ಜರಿ ಸಿದ್ಧತೆ
2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಟ್ರೋಫಿ ಗೆದ್ದುಕೊಟ್ಟಿದ್ದ ಧೋನಿ, ಈ ಬಾರಿಯೂ ಮತ್ತೊಂದು ಪ್ರಶಸ್ತಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಶುರುವಾಗಲಿದ್ದು, ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಧೋನಿ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ vs ಆರ್ಸಿಬಿ
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಎಂಎಸ್ ಧೋನಿ, ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮಥೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.