ಕನ್ನಡ ಸುದ್ದಿ  /  Cricket  /  Mark Boucher And Hardik Pandya Refuses To Answer Question Why Mumbai Indians Decide Rohit Sharma Not To Lead In Ipl Jra

ಮುಂಬೈ ಇಂಡಿಯನ್ಸ್ ನಾಯಕತ್ವದಿಂದ‌ ರೋಹಿತ್‌ ಕೆಳಗಿಳಿಸಲು ಕಾರಣವೇನು; ಪ್ರಶ್ನೆಗೆ ಉತ್ತರಿಸದೆ ಮೌನ ವಹಿಸಿದ ಹಾರ್ದಿಕ್‌, ಬೌಚರ್

Rohit sharma: ಐಪಿಎಲ್‌ 2024ರ ಆವೃತ್ತಿಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ಮಾರ್ಕ್ ಬೌಚರ್ ಭಾಗವಹಿಸಿದರು. ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವ ನಿರ್ಧಾರದ ಬಗ್ಗೆ ಮುಂಬೈ ಮುಖ್ಯ ಕೋಚ್ ಅವರ ಬಳಿ ಕೇಳಲಾಯಿತು. ಅವರ ಪ್ರತಿಕ್ರಿಯೆ ಹೀಗಿತ್ತು.

ರೋಹಿತ್‌ ಕೆಳಗಿಳಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸದೆ ಮೌನ ವಹಿಸಿದ ಹಾರ್ದಿಕ್‌, ಬೌಚರ್
ರೋಹಿತ್‌ ಕೆಳಗಿಳಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸದೆ ಮೌನ ವಹಿಸಿದ ಹಾರ್ದಿಕ್‌, ಬೌಚರ್ (PTI)

ಪ್ರಸಕ್ತ ಆವೃತ್ತಿಯ ಐಪಿಎಲ್‌ (IPL 2024) ಆರಂಭಕ್ಕೂ ಮುನ್ನ ತಂಡಗಳ ನಡುವೆ ಆಟಗಾರರ ಟ್ರೇಡಿಂಗ್‌ ನಡೆಯಿತು. ಈ ವೇಳೆ ನಡೆದ ಅಚ್ಚರಿಯ ವಿದ್ಯಮಾನವೇ, ಮುಂಬೈ ಇಂಡಿಯನ್ಸ್‌ ನಾಯಕತ್ವ ಬದಲಾವಣೆ. ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯರನ್ನು (Hardik Pandya) ಮರಳಿ ಮುಂಬೈ ತಂಡಕ್ಕೆ ಕರೆಸಿಕೊಳ್ಳಲಾಯ್ತು. ಅಷ್ಟೇ ಅಲ್ಲ, ರೋಹಿತ್‌ ಶರ್ಮಾರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ನೀಡಲಾಯ್ತು. ಫ್ರಾಂಚೈಸಿಯ ಈ ನಿರ್ಧಾರವು, ಅಭಿಮಾನಿಗಳ ಪಾಲಿಗೆ ಇನ್ನೂ ಗೊಂದಲಾದ ಗೂಡಾಗಿದೆ. ಈ ನಿರ್ಧಾರಕ್ಕೆ ಸೂಕ್ತ ಹಾಗೂ ಒಪ್ಪುವಂಥ ಕಾರಣವನ್ನು ಫ್ರಾಂಚೈಸಿ ಇನ್ನೂ ಕೊಟ್ಟಿಲ್ಲ.

ಸದ್ಯ, ಐಪಿಎಲ್‌ 2024ರ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳ ಆಟಗಾರರು ಒಟ್ಟು ಸೇರುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ಕೂಡಾ, ಹೊಸ ಜವಾಬ್ದಾರಿಯೊಂದಿಗೆ ನಾಯಕನಾಗಿ ಮುಂಬೈ ಶಿಬಿರ ಸೇರಿದ್ದಾರೆ. ಇತ್ತೀಚೆಗೆ ಫ್ರಾಂಚೈಸಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಪತ್ರಕರ್ತರು, ನಾಯಕತ್ವ ಬದಲಾವಣೆ ಕುರತಾಗಿ ಪ್ರಶ್ನೆ ಇಟ್ಟರು.

ಮುಂಬೈ ತಂಡದ ನಾಯಕತ್ವ ಬದಲಾವಣೆಗೆ ಕಾರಣವೇನು ಎಂಬ ಪ್ರಶ್ನೆಗೆ, ಈ ಇಬ್ಬರೂ ಉತ್ತರಿಸಲು ನಿರಾಕರಿಸಿದರು. ಇದು ಅಭಿಮಾನಿಗಳ ಅಚ್ಚರಿ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಬೌಚರ್‌ ಹಾಗೂ ಪಾಂಡ್ಯ ಇಬ್ಬರೂ ಮೌನವಾಗಿ ಕುಳಿತಿರುವುದನ್ನು ನೋಡಬಹುದು. ರೋಹಿತ್ ಕುರಿತಾಗಿ ಮತ್ತೆ ಪತ್ರಕರ್ತರು ಪ್ರಶ್ನೆಗಳನ್ನು ಮುಂದುವರೆಸಿದರೆ, ಅಂಥಾ ಪ್ರಶ್ನೆಗಳನ್ನು ಪ್ರಶ್ನೆಗಳನ್ನು ಮುಂದುವರಿಸದಂತೆ ಹೇಳಲಾಯ್ತು.

ರೋಹಿತ್ ಬದಲಿಗೆ ಹಾರ್ದಿಕ್‌ ಅವರನ್ನು ನಾಯಕನನ್ನಾಗಿ ಮಾಡಲು ಕಾರಣವೇನು ಎಂದು ಬೌಚರ್ ಅವರಲ್ಲಿ ಕೇಳಲಾಯ್ತು. ಇದಕ್ಕೆ ಬೌಚರ್‌ ಬಳಿ ಉತ್ತರವಿರಲಿಲ್ಲ. ಇದೇ ವೇಳೆ, ಹಾರ್ದಿಕ್‌ಗೆ ಮುಂಬೈ ತಂಡಕ್ಕೆ ಟ್ರೇಡಿಂಗ್‌ ಆಗುವ ಒಪ್ಪಂದದಲ್ಲಿ ನಾಯಕತ್ವದ ಷರತ್ತು ಇತ್ತೇ ಎಂದು ವರದಿಗಾರ ಪಾಂಡ್ಯ ಬಳಿ ಕೇಳಿದ್ದಾರೆ. ಆದರೆ ಆ ಪ್ರಶ್ನೆಗೂ ಪಾಂಡ್ಯ ಉತ್ತರಿಸಿಲ್ಲ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

ರೋಹಿತ್‌ ಶರ್ಮಾ ನನ್ನ ಜೊತೆಗಿರುತ್ತಾರೆ

ಇದೇ ವೇಳೆ, ತನ್ನ ಮತ್ತು ರೋಹಿತ್ ನಡುವೆ ಯಾವುದೇ ರೀತಿಯ ಗೊಂದಲ ಇರುವುದಿಲ್ಲ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ. ಭಾರತೀಯ ನಾಯಕನ ಬಳಿ ನಾಯಕತ್ವ ಕುರಿತ ಸಾಕಷ್ಟು ಅನುಭವವಿದೆ. ಅವರ ಅನುಭವ ತಂಡದ ನೆರವಿಗೆ ಬರುತ್ತದೆ. ಟೂರ್ನಿಯುದ್ದಕ್ಕೂ ಅವರು ತಮಗೆ ಬೆಂಬಲ ನೀಡುತ್ತಾರೆ ಎಂದು ಹಾರ್ದಿಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಖುಷಿ-ಅಚ್ಚರಿ-ನಿರಾಳ, 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ; ಚೊಚ್ಚಲ ಕಿರೀಟ ತೊಟ್ಟ ಆರ್​​ಸಿಬಿ, ‘ಈ ಸಲ ಕಪ್ ನಮ್ದೇ’

“ನನಗೆ ಅವರ ಸಹಾಯ ಬೇಕಾದರೆ ಅವರಲ್ಲಿ ಕೇಳುತ್ತೇನೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ. ಅವರ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಸಾಕಷ್ಟು ಸಾಧಿಸಿದೆ. ಅದು ಇಲ್ಲೂ ಮುಂದುವರೆಯುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು 10 ವರ್ಷಗಳಿಂದ ಜೊತೆಯಾಗಿ ಆಡುತ್ತಿದ್ದೇವೆ. ಅವರ ನಾಯಕತ್ವದ ಅಡಿಯಲ್ಲಿ ನನ್ನ ವೃತ್ತಿಜೀವನ ಮುಂದುವರೆದಿದೆ. ಈ ಋತುವಿನ ಉದ್ದಕ್ಕೂ ನನ್ನ ಹೆಗಲ ಮೇಲೆ ಕೈಯಿಟ್ಟು ಜೊತೆಗಿರುತ್ತಾರೆ ಎಂದು ನನಗೆ ತಿಳಿದಿದೆ” ಎಂದು ಹಾರ್ದಿಕ್ ಹೇಳಿದ್ದಾರೆ.‌

IPL_Entry_Point