ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಬೆದರಿಕೆ; ಸಾರ್ವಜನಿಕರ ಕೊಲೆ ಪಕ್ಕಾ ಎಂದ ಉಗ್ರರು, ಅತಿದೊಡ್ಡ ಭದ್ರತೆಗೆ USA ಸಜ್ಜು
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಬೆದರಿಕೆ; ಸಾರ್ವಜನಿಕರ ಕೊಲೆ ಪಕ್ಕಾ ಎಂದ ಉಗ್ರರು, ಅತಿದೊಡ್ಡ ಭದ್ರತೆಗೆ Usa ಸಜ್ಜು

ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಬೆದರಿಕೆ; ಸಾರ್ವಜನಿಕರ ಕೊಲೆ ಪಕ್ಕಾ ಎಂದ ಉಗ್ರರು, ಅತಿದೊಡ್ಡ ಭದ್ರತೆಗೆ USA ಸಜ್ಜು

India vs Pakistan: ಜೂನ್ 9ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್​ ಪಂದ್ಯಕ್ಕೆ ಐಸಿಸ್ ಉಗ್ರರು ಬೆದರಿಯೊಡ್ಡಿದ್ದಾರೆ. ಹಾಗಾಗಿ, ಅತಿದೊಡ್ಡ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಬೆದರಿಕೆ; ಸಾರ್ವಜನಿಕರ ಕೊಲೆ ಪಕ್ಕಾ ಎಂದ ಉಗ್ರರು, ಅತಿದೊಡ್ಡ ಭದ್ರತೆಗೆ ಸಜ್ಜು
ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಐಸಿಸ್ ಬೆದರಿಕೆ; ಸಾರ್ವಜನಿಕರ ಕೊಲೆ ಪಕ್ಕಾ ಎಂದ ಉಗ್ರರು, ಅತಿದೊಡ್ಡ ಭದ್ರತೆಗೆ ಸಜ್ಜು

India vs Pakistan: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಜೂನ್ 9ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಉಗ್ರ ಸಂಘಟನೆ ‘ಲೋನ್​ ವುಲ್ಫ್’ (ಒಂಟಿ ತೋಳ) ದಾಳಿ ಬೆದರಿಕೆ ಕರೆ ನೀಡಿದೆ. ಹಾಗಾಗಿ ಆತಂಕ ಹೆಚ್ಚಾದ ಹಿನ್ನೆಲೆ ಪಂದ್ಯ ನಡೆಯುವ ನ್ಯೂಯಾರ್ಕ್​ನ ನಸ್ಸಾ ಕೌಂಟಿ ಕ್ರಿಕೆಟ್ ಮೈದಾನಕ್ಕೆ ಭದ್ರತೆ ಬಿಗಿಗೊಳಿಸುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆದರಿಕೆ ಕರೆ ಬಂದ ತಕ್ಷಣ ಪರಿಸ್ಥಿತಿಗಳನ್ನು ಅವಲೋಕಿಸಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪಂದ್ಯಗಳು ಸುಗಮವಾಗಿ ಜರುಗಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ನ್ಯೂಯಾರ್ಕ್ ರಾಜ್ಯಪಾಲ ಕ್ಯಾಥಿ ಹೊಚುಲ್‌ ಮಾಹಿತಿ ನೀಡಿದ್ದಾರೆ. ರಾಜ್ಯಪಾಲರ ಕಚೇರಿ ಬೆದರಿಕೆ ಕರೆಯನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ, ಅದರ ಕುರಿತು ಕೆಲಸಗಳು ನಡೆಯುತ್ತಿವೆ.

ಯುಎಸ್ಎ ಮೊದಲ ಬಾರಿಗೆ ಕ್ರಿಕೆಟ್ ದೊಡ್ಡ ಟೂರ್ನಿಯೊಂದನ್ನು ಆಯೋಜಿಸುತ್ತಿದೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 8 ಪಂದ್ಯಗಳು ನಡೆಯಲಿವೆ. ಈ ಪೈಕಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಕೂಡ ಒಂದು. ಈ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಜನಸಂದಣಿಯನ್ನು ಸೇರಿಸುತ್ತದೆ. ಏಷ್ಯಾದ ದೈತ್ಯರ ನಡುವಿನ ಗ್ರೂಪ್ ಎ ಮುಖಾಮುಖಿಗೆ ದೊಡ್ಡ ಜನಸಮೂಹವನ್ನು ನಿರೀಕ್ಷಿಸಬಹುದು.

ಇಂಡೋ-ಪಾಕ್ ನಡುವಿನ ವಿಶ್ವಕಪ್ ಪಂದ್ಯಕ್ಕೆ ಸಾರ್ವಜನಿಕರನ್ನು ಸಾಮೂಹಿಕ ಹತ್ಯೆ ಮಾಡುವುದಾಗಿ 'ಲೋನ್ ವುಲ್ಫ್ ದಾಳಿ' ಬೆದರಿಕೆ ಹಾಕಿದೆ ಎಂದು ನಸ್ಸೌ ಕೌಂಟಿ ಕಾರ್ಯನಿರ್ವಾಹಕ ಬ್ರೂಸ್ ಬ್ಲೇಕ್ಮನ್ ಮತ್ತು ಪೊಲೀಸ್ ಆಯುಕ್ತ ಪ್ಯಾಟ್ರಿಕ್ ರೈಡರ್ ಮಾಹಿತಿ ನೀಡಿದ್ದಾರೆ. ಪ್ರತಿದಿನ ನಸ್ಸಾವು ಕೌಂಟಿ, ಹಾಗೆಯೇ ಅಮೆರಿಕಾದ್ಯಂತ ಎಲ್ಲಾ ಸುರಕ್ಷತೆಗೆ ಆದ್ಯತೆ ಕೊಟ್ಟು ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ. ಆದರೆ ಇದು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿದೆ.

ದೊಡ್ಡ ಮಟ್ಟದ ಭದ್ರತೆ ನೀಡುತ್ತೇವೆ ಎಂದ ಅಧಿಕಾರಿ

ಆ ನಿಟ್ಟಿನಲ್ಲಿ, ನಾವು ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಕ್ರೀಡಾಂಗಣ ಮತ್ತು ಸುತ್ತಮುತ್ತಲಿನ ಐಸೆನ್ಹೋವರ್ ಪಾರ್ಕ್ ಸುರಕ್ಷಿತವಾಗಿದೆ. ಪಾರ್ಕಿಂಗ್ ಪ್ರದೇಶಗಳು, ವೀಕ್ಷಣಾ ಪ್ರದೇಶಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಮುನ್ನೆಚ್ಚರಿಕೆಯಾಗಿ ನಾವು ಕೌಂಟಿಯ ಉಳಿದ ಭಾಗಗಳಿಗೆ ನಮ್ಮ ಸಾಮಾನ್ಯ ಸಿಬ್ಬಂದಿಗೆ 100 ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ಸೇರಿಸುತ್ತಿದ್ದೇವೆ ಎಂದಿದ್ದಾರೆ.

ಲೋನ್ ವುಲ್ಫ್ ದಾಳಿಯ ಸುಳಿವು ಬಗ್ಗೆ ಕೇಳಿದಾಗ, ಪೊಲೀಸ್ ಆಯುಕ್ತ ರೈಡರ್ ಅವರು ಜೂನ್ 9ರಂದು ನಸ್ಸಾವು ಕೌಂಟಿ ‘ಸುರಕ್ಷಿತ ಸ್ಥಳ’ ಎಂದು ಖಚಿತಪಡಿಸಿಕೊಳ್ಳಲು ‘ದೇಶದ ಇತಿಹಾಸದಲ್ಲೇ ಅತಿದೊಡ್ಡ ಭದ್ರತೆ’ ನೀಡುವುದಾಗಿ ಭರವಸೆ ನೀಡಿದ್ದಾರೆ.

'ಭಾರತ ಮತ್ತು ಪಾಕಿಸ್ತಾನ ದೊಡ್ಡ ಪಂದ್ಯವಾಗಿದೆ. ದೊಡ್ಡಮಟ್ಟದ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಬರಲಿದ್ದಾರೆ. ಹಾಗಾಗಿ ನಸ್ಸಾವು ಕೌಂಟಿಯ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯ ಸಲುವಾಗಿ ಗಂಭೀರವಾಗಿ ಪರಿಗಣಿಸುತ್ತೇವೆ. ಎಲ್ಲಾ ರೀತಿಯ ವಿವರಗಳನ್ನು ಪರಿಶೀಲಿಸುತ್ತೇವೆ. ಕೌಂಟಿಯ ಇತಿಹಾಸದಲ್ಲಿ ನಾವು ಒದಗಿಸಲಿರುವ ಅತಿದೊಡ್ಡ ಭದ್ರತೆ ಇದು ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ಎಂದು ರೈಡರ್ ಹೇಳಿದ್ದಾರೆ.

ಪ್ರೇಕ್ಷಕರ ಸುರಕ್ಷತೆ ಕುರಿತು ಐಸಿಸಿ ಹೇಳಿದ್ದೇನು?

ಈವೆಂಟ್​​ನಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಸಮಗ್ರ ಮತ್ತು ದೃಢವಾದ ಭದ್ರತಾ ಯೋಜನೆಯನ್ನು ಹೊಂದಿದ್ದೇವೆ. ನಾವು ನಮ್ಮ ಆತಿಥೇಯ ದೇಶಗಳ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ನಮ್ಮ ಘಟನೆಗೆ ಗುರುತಿಸಲಾದ ಯಾವುದೇ ಅಪಾಯಗಳನ್ನು ತಗ್ಗಿಸಲು ಸೂಕ್ತ ಯೋಜನೆಗಳು ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಜಾಗತಿಕ ಭೂದೃಶ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಮೌಲ್ಯಮಾಪನ ಮಾಡುತ್ತೇವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ವಕ್ತಾರರು ಹೇಳಿದ್ದಾರೆ.

Whats_app_banner