ಬಾಂಗ್ಲಾ ವಿರುದ್ಧ 4 ವಿಕೆಟ್ ಪಡೆದು ದಾಖಲೆ ಬರೆದ ಪತಿರಾಣ; ದಿಗ್ಗಜನ ರೆಕಾರ್ಡ್ ಮುರಿದ ಸಿಎಸ್ಕೆ ಆಟಗಾರ
- Bangladesh vs Sri Lanka, Matheesha Pathirana: ಏಷ್ಯಾಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Bangladesh vs Sri Lanka, Matheesha Pathirana: ಏಷ್ಯಾಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರಿನ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 11)
ಏಷ್ಯಾಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದೆ.(AP)
(2 / 11)
ಇನ್ನು ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಶ್ರೀಲಂಕಾ ತಂಡದ ಯುವ ವೇಗಿ ಮತೀಶ ಪತಿರಾಣ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ 29 ವರ್ಷಗಳ ಹಿಂದೆ ಲಂಕಾದ ದಿಗ್ಗಜ ಬೌಲರ್ ಚಮಿಂದಾ ವಾಸ್ ಅವರ ಹಳೆಯ ದಾಖಲೆ ಮುರಿದಿದ್ದಾರೆ.(AFP)
(3 / 11)
ಬೆಂಕಿ ಬೌಲಿಂಗ್ ಮೂಲಕ ಮತೀಶ ಪತಿರಾಣ ಅವರು 7.4 ಓವರ್ಗಳಲ್ಲಿ 32 ರನ್ ನೀಡಿ 4 ವಿಕೆಟ್ ಉರುಳಿಸಿದರು. ಇದರಿಂದ ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ತತ್ತರಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
(4 / 11)
ಶ್ರೀಲಂಕಾ ತಂಡದ ಪರ 4 ವಿಕೆಟ್ ಉರುಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನು ಪತಿರಾಣ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಚಾಮಿಂದಾ ವಾಸ್ ಹೆಸರಿನಲ್ಲಿ ಈ ದಾಖಲೆ ಇತ್ತು.
(5 / 11)
ಚಾಮಿಂದಾ ವಾಸ್ ಅವರು 1994ರಲ್ಲಿ ಜಿಂಬಾಬ್ವೆ ವಿರುದ್ಧ ಕೇವಲ 20 ರನ್ ನೀಡಿ 4 ವಿಕೆಟ್ ಉರುಳಿಸಿದ್ದರು. ಅಂದು ಚಾಮಿಂದಾ ವಾಸ್ ವಯಸ್ಸು 20 ವರ್ಷ, 280 ದಿನಗಳು ಆಗಿತ್ತು.
(6 / 11)
ಆಗಸ್ಟ್ 31ರಂದು ಅಂದರೆ ನಿನ್ನೆ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಪತಿರಾಣ 4 ವಿಕೆಟ್ ಕಬಳಿಸಿದರು. ಅವರಿಗೀಗ 20 ವರ್ಷ, 256 ದಿನಗಳು. ಇದರೊಂದಿಗೆ 29 ವರ್ಷಗಳಿಂದ ವಾಸ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.
(7 / 11)
ಅಷ್ಟೇ ಅಲ್ಲದೆ, ಏಷ್ಯಾಕಪ್ ಟೂರ್ನಿಯಲ್ಲಿ ನಾಲ್ಕು ವಿಕೆಟ್ ಉರುಳಿಸಿದ ಶ್ರೀಲಂಕಾದದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆಯನ್ನೂ ಪತಿರಾಣ ತಮ್ಮದಾಗಿಸಿಕೊಂಡಿದ್ದಾರೆ.
(8 / 11)
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 42.4 ಓವರ್ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯಿತು.(AP)
(9 / 11)
ಬಾಂಗ್ಲಾದೇಶ ಅಲ್ಪಮೊತ್ತಕ್ಕೆ ಆಲ್ಔಟ್ ಆದರೂ ತಂಡದ ಪರ ನಜ್ಮುಲ್ ಹೊಸೈನ್ ಶಾಂಟೋ ಅವರು 122 ಎಸೆತಗಳಲ್ಲಿ 89 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್ಗಳಿಂದ ಅವರಿಗೆ ಉತ್ತಮವಾದ ಸಾಥ್ ಸಿಗಲಿಲ್ಲ.(AFP)
(10 / 11)
ಅಲ್ಪಗುರಿ ಮುನ್ನಡೆಸಿದ ಶ್ರೀಲಂಕಾ 39 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಗೆಲುವು ಸಾಧಿಸಿತು. ಸಮರ ವಿಕ್ರಮ ಅವರು 77 ಎಸೆತಗಳಲ್ಲಿ 54 ರನ್ ಗಳಿಸಿದರು.(AP)
ಇತರ ಗ್ಯಾಲರಿಗಳು