ತಲಾ ಐದು ಟ್ರೋಫಿ ಗೆದ್ದ ಚೆನ್ನೈ vs ಮುಂಬೈ ನಡುವೆ ಕಾದಾಟ; ಪ್ಲೇಯಿಂಗ್ 11, ಹವಾಮಾನ, ಪಿಚ್ ವರದಿ, ಮುಖಾಮುಖಿ ದಾಖಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ತಲಾ ಐದು ಟ್ರೋಫಿ ಗೆದ್ದ ಚೆನ್ನೈ Vs ಮುಂಬೈ ನಡುವೆ ಕಾದಾಟ; ಪ್ಲೇಯಿಂಗ್ 11, ಹವಾಮಾನ, ಪಿಚ್ ವರದಿ, ಮುಖಾಮುಖಿ ದಾಖಲೆ

ತಲಾ ಐದು ಟ್ರೋಫಿ ಗೆದ್ದ ಚೆನ್ನೈ vs ಮುಂಬೈ ನಡುವೆ ಕಾದಾಟ; ಪ್ಲೇಯಿಂಗ್ 11, ಹವಾಮಾನ, ಪಿಚ್ ವರದಿ, ಮುಖಾಮುಖಿ ದಾಖಲೆ

MI vs CSK IPL 2024 : 17ನೇ ಆವೃತ್ತಿಯ ಐಪಿಎಲ್​ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಪಿಚ್​ ರಿಪೋರ್ಟ್, ಪ್ಲೇಯಿಂಗ್ XI, ಮುಖಾಮುಖಿ ದಾಖಲೆ ವಿವರ ಇಲ್ಲಿದೆ.

ತಲಾ ಐದು ಟ್ರೋಫಿ ಗೆದ್ದ ತಂಡಗಳ ನಡುವೆ ಕಾದಾಟ
ತಲಾ ಐದು ಟ್ರೋಫಿ ಗೆದ್ದ ತಂಡಗಳ ನಡುವೆ ಕಾದಾಟ

ಏಪ್ರಿಲ್ 14ರಂದು ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು (MI vs CSK) ಮುಖಾಮುಖಿಯಾಗುತ್ತಿವೆ. ತಲಾ ಐದು ಟ್ರೋಫಿಗಳನ್ನು ಗೆದ್ದಿರುವ ಉಭಯ ತಂಡಗಳು, ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ನಂತರ ಲಯಕ್ಕೆ ಮರಳಿರುವ ಮುಂಬೈ ಗೆಲುವಿನ ವೇಗ ಮುಂದುವರಿಸಲು ಎದುರು ನೋಡುತ್ತಿದೆ. ಮತ್ತೊಂದೆಡೆ ಸಿಎಸ್​ಕೆ ನಾಲ್ಕನೇ ಗೆಲುವಿಗಾಗಿ ಸಿದ್ಧತೆ ನಡೆಸಿದೆ.

ಈ ಆವೃತ್ತಿಯಲ್ಲಿ ಕಳಪೆ ಆರಂಭದ ನಂತರ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಎರಡು ದೊಡ್ಡ ಗೆಲುವುಗಳೊಂದಿಗೆ ಅದ್ಭುತ ಪುನರಾಗಮನ ಮಾಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ 197 ರನ್ ಗುರಿ ಬೆನ್ನಟ್ಟಿ ಏಳು ವಿಕೆಟ್​ಗಳಿಂದ ಗೆದ್ದಿತು. ಇದರೊಂದಿಗೆ ಬ್ಯಾಟಿಂಗ್​ ಪವರ್​ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಸೂರ್ಯಕುಮಾರ್, ಇಶಾನ್ ಕಿಶನ್, ರೋಹಿತ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

ಮತ್ತೊಂದೆಡೆ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇನ್ ಫಾರ್ಮ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್​ಗಳ ಬೃಹತ್ ಜಯದೊಂದಿಗೆ ಗೆಲುವಿನ ಹಾದಿಗೆ ಮರಳಿತು. ಆದರೆ, ತವರಿನ ಮೈದಾನದಲ್ಲಿ ಮೂರಕ್ಕೆ ಮೂರು ಗೆದ್ದಿರುವ ಚೆನ್ನೈ, ತವರಿನಾಚೆಯ ಪಂದ್ಯಗಳಲ್ಲಿ ಸೋಲು ಕಂಡಿದೆ. ಇದೀಗ ಮತ್ತೊಮ್ಮೆ ತವರಿನ ಹೊರಗಡೆ ಪಂದ್ಯ ನಡೆಯುತ್ತಿದ್ದು, ಸಿಎಸ್​ಕೆ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಎಂಐ vs ಸಿಎಸ್​ಕೆ ಪಂದ್ಯದ ವಿವರ

ಪಂದ್ಯ: ಐಪಿಎಲ್ 2024, 29ನೇ ಟಿ20 ಪಂದ್ಯ

ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ

ದಿನಾಂಕ ಮತ್ತು ಸಮಯ: ಭಾನುವಾರ, ಏಪ್ರಿಲ್ 14 ರಂದು ಸಂಜೆ 7:30ಕ್ಕೆ (ಟಾಸ್ ಸಂಜೆ 7:00 ಗಂಟೆಗೆ)

ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್.

ವಾಂಖೆಡೆ ಸ್ಟೇಡಿಯಂ ಪಿಚ್ ವರದಿ

ವಾಂಖೆಡೆ ಕ್ರಿಕೆಟ್ ಮೈದಾನವು ಬ್ಯಾಟರ್‌ಗಳಿಗೆ ದೊಡ್ಡ ಮೊತ್ತ ಕಲೆಹಾಕಲು ನೆರವಾಗುತ್ತದೆ. ಮೈದಾನದ ಬೌಂಡರಿಗಳು ಚಿಕ್ಕದಾಗಿದ್ದು, ಬ್ಯಾಟರ್‌ಗಳು ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಾರೆ. ಪಂದ್ಯ ಮುಂದುವರೆದಂತೆ ಇಬ್ಬನಿ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಹೀಗಾಗಿ ಚೇಸಿಂಗ್‌ ಮಾಡುವ ತಂಡಗಳಿಗೆ ಅನುಕೂಲ ಜಾಸ್ತಿ. ಇದೇ ಕಾರಣದಿಂದ ಟಾಸ್‌ ಗೆಲ್ಲುವ ತಂಡಗಳು ಚೇಸಿಂಗ್ ಆಯ್ಕೆ ಮಾಡುತ್ತವೆ.

ಚೆನ್ನೈ vs ಮುಂಬೈ ಮುಖಾಮುಖಿ ದಾಖಲೆ

ಒಟ್ಟು ಪಂದ್ಯಗಳು : 36

ಮುಂಬೈ ಗೆಲುವು : 20

ಚೆನ್ನೈ ಗೆಲುವು : 16

ಮುಂಬೈ ಹವಾಮಾನ ವರದಿ

ಕಡಲ ತಡಿ ಮುಂಬೈ ನಗರದಲ್ಲಿ ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು ಸುಮಾರು 30 ಡಿಗ್ರಿಗಳಷ್ಟಿರುವ ಸಾಧ್ಯತೆ ಇದೆ. ಪಂದ್ಯದ ಅಂತ್ಯದ ವೇಳೆಗೆ ಇದು 28 ಡಿಗ್ರಿಗಳಿಗೆ ಇಳಿಯಬಹುದು. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಮುನ್ಸೂಚನೆ ಇಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ XI

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡಾರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮತೀಶಾ ಪತಿರಾಣ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್​ XI

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ.

 

Whats_app_banner