WPL 2024 Eliminator: ಮುಂಬೈ vs ಆರ್ಸಿಬಿ ಪ್ಲೇಯಿಂಗ್ XI ಹೀಗಿದೆ; ಹವಾಮಾನ, ಪಿಚ್, ಲೈವ್ ಸ್ಟ್ರೀಮಿಂಗ್ ವಿವರ
MI vs RCB WPL 2024 Eliminator : ಡಬ್ಲ್ಯುಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್, ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ ನೋಡಿ.

ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮಾರ್ಚ್ 15) ಪಂದ್ಯ ನಡೆಯಲಿದೆ. ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಮುಂಬೈ ಪ್ಲೇಆಫ್ಗೆ ಟಿಕೆಟ್ ಖಚಿತಪಡಿಸಿಕೊಂಡರೆ, ಆರ್ಸಿಬಿ 3ನೇ ಸ್ಥಾನ ಪಡೆದು ನಾಕೌಟ್ಗೆ ಅರ್ಹತೆ ಪಡೆಯಿತು. ಈ 2 ತಂಡಗಳು ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲು ಸಜ್ಜಾಗಿವೆ.
ಡಬ್ಲ್ಯುಪಿಎಲ್ನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಫೈನಲ್ ಪ್ರವೇಶಿಸಲು ಸಜ್ಜಾಗಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡದ ಭರ್ಜರಿ ಪ್ರದರ್ಶನದ ಹೊರತಾಗಿಯೂ ಆರ್ಸಿಬಿ ಒಡ್ಡುವ ಸವಾಲನ್ನು ಎದುರಿಸಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಬೆಂಚ್ ಕಾದಿದ್ದ ಯಾಸ್ತಿಕಾ ಭಾಟಿಯಾ ಅವರು ಪ್ಲೇಯಿಂಗ್ ಇಲೆವೆನ್ಗೆ ಮರಳುವ ನಿರೀಕ್ಷೆ ಇದೆ. ಅವರ ಸೇರ್ಪಡೆಯಿಂದ ತಂಡದಲ್ಲಿ ಕನಿಷ್ಠ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
ಏತನ್ಮಧ್ಯೆ, ಆರ್ಸಿಬಿ ತಮ್ಮ ಮೊದಲ ಪ್ಲೇಆಫ್ನಲ್ಲಿ ಮುಂಬೈಗೆ ಚಮಕ್ ಕೊಡಲು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈ ಋತುವಿನಲ್ಲಿ ಸ್ಮೃತಿ ಮಂಧಾನ, ರಿಚಾ ಘೋಷ್ ಮತ್ತು ಎಲ್ಲಿಸ್ ಪೆರ್ರಿ ಅವರ ಅತ್ಯುತ್ತಮ ಪ್ರದರ್ಶನಗಳಿಂದ ಆರ್ಸಿಬಿ ಉತ್ತೇಜಿತವಾಗಿದೆ. ಆರ್ಸಿಬಿ ಅಂತಿಮ ಗುಂಪು ಹಂತದ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಗೆದ್ದಿತ್ತು. ಇದೀಗ ಎಲಿಮಿನೇಟರ್ನಲ್ಲೂ ಅದೇ ತಂಡದ ಸವಾಲನ್ನು ಎದುರಿಸಲು ರೆಡಿಯಾಗಿದೆ.
ಉಭಯ ತಂಡಗಳ ಸಂಭವನೀಯ ಪ್ಲೇಯಿಂಗ್ XI
ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಟಾಲಿ ಸೀವರ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಅಮನ್ಜೋತ್ ಕೌರ್, ಎಸ್ ಸಜಾನಾ, ಪೂಜಾ ವಸ್ತ್ರಕರ್, ಹುಮೈರಾ ಕಾಜಿ, ಶಬ್ನಿಮ್ ಇಸ್ಮಾಯಿಲ್, ಸಾಯಿಕಾ ಇಶಾಕ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 04
ಮುಂಬೈ ಗೆಲುವು - 03
ಆರ್ಸಿಬಿ ಗೆಲುವು - 01
ಪಿಚ್ ವರದಿ
ಕಳೆದ ವರ್ಷದ ವಿಶ್ವಕಪ್‌ನಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೇಲ್ಮೈ ಅಸಾಧಾರಣವಾಗಿ ಸಮತಟ್ಟಾಗಿತ್ತು. ತಂಡಗಳು ಮೊದಲು ಬ್ಯಾಟಿಂಗ್ ಮಾಡುವಾಗ 400 ರನ್‌ಗಳ ಗಡಿಯನ್ನು ಮೀರಿದ ಹೆಚ್ಚಿನ ಸ್ಕೋರಿಂಗ್ ಪಂದ್ಯಗಳಿಗೆ ಕಾರಣವಾಯಿತು. ಮುಂಬರುವ ಪಂದ್ಯಕ್ಕೂ ಇದೇ ರೀತಿಯ ಪಿಚ್ ಪರಿಸ್ಥಿತಿಗಳನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ, ಏಕದಿನ ವಿಶ್ವಕಪ್‌ನಲ್ಲಿ ಪಿಚ್‌ನ ಪ್ರದರ್ಶನವನ್ನು ಪರಿಗಣಿಸಿ, ಚೇಸ್‌ಗೆ ಆಯ್ಕೆ ಮಾಡುವುದು ಹೆಚ್ಚು ಅನುಕೂಲಕರ ತಂತ್ರವಾಗಿದೆ.
ಹವಾಮಾನ ವರದಿ
ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲದೆ ಯೋಗ್ಯವಾದ ಹವಾಮಾನ ಇರುತ್ತದೆ. ಅಕ್ಯುವೆದರ್ ಪ್ರಕಾರ, ಕನಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿದೆ. ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತದೆ. ಸ್ಥಳದಲ್ಲಿ ಗಾಳಿಯ ವೇಗವು ಗಂಟೆಗೆ 16 ಕಿಮೀ ಆಗಿರುತ್ತದೆ.
ಲೈವ್ ಸ್ಟ್ರೀಮಿಂಗ್ ವಿವರ
ಎಂಐ ಮತ್ತು ಆರ್ಸಿಬಿ ನಡುವಿನ ಮಹಿಳಾ ಪ್ರೀಮಿಯರ್ ಲೀಗ್ 2024ರ ಎಲಿಮಿನೇಟರ್ ಪಂದ್ಯವನ್ನು ಜಿಯೋ ಸಿನಿಮಾವನ್ನು ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಹಾಗೆಯೇ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
