ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು: ಮೈಕ್ ಹೆಸನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು: ಮೈಕ್ ಹೆಸನ್

ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು: ಮೈಕ್ ಹೆಸನ್

Mike Hesson:‌ ನಾವು ಹರಾಜಿನಲ್ಲಿ ಚಾಹಲ್‌ ಅವರನ್ನು ಖರೀದಿಸಲು ಸಿದ್ಧರಾಗಿದ್ದೆವು. ಅದಕ್ಕಾಗಿ ಮುಂಚಿತವಾಗಿ ಗಂಟೆಗಳ ಕಾಲ ಚರ್ಚಿಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಹರಾಜಿನ ನಂತರ ನಾನು ಚಾಹಲ್ ಜೊತೆಗೆ ಮಾತನಾಡಿದ್ದೆ. ಅವರು ಅಸಮಾಧಾನಗೊಂಡಿದ್ದರು. ಅವರು ಯಾವುದನ್ನೂ ಕೇಳಲು ಆಸಕ್ತಿ ಹೊಂದಿರಲಿಲ್ಲ ಎಂದು ಮೈಕ್ ಹೆಸನ್‌ ಹೇಳಿದ್ದಾರೆ.

ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು
ಯುಜ್ವೇಂದ್ರ ಚಾಹಲ್ ಹತಾಶೆಗೊಂಡಿದ್ದರು, ಆರ್‌ಸಿಬಿಯಿಂದ ಅಸಮಾಧಾನಗೊಂಡಿದ್ದರು

ಐಪಿಎಲ್ 2022ರ ಆವೃತ್ತಿಗೂ ಮುನ್ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಸ್ಟಾರ್‌ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ನಿರ್ಗಮನವು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ಎಂಟು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದಲ್ಲಿ ಆಡಿದ್ದ ಯೂಜಿ, ತಂಡದಿಂದ ಹೊರಬಿದ್ದ ಬೆನ್ನಲ್ಲೇ ನಿರಾಶೆಗೊಂಡಿದ್ದರು. ಸದ್ಯ ಈ ವಿದ್ಯಮಾನ ನಡೆದು ವರ್ಷ ಕಳೆದಿದೆ. ಈ ನಡುವೆ ಮೈಕ್ ಹೆಸನ್ ಹೊಸ ಹೇಳಿಕೆ ನೀಡಿದ್ದಾರೆ.

ಭಾರತದ ಪ್ರಮುಖ ಲೆಗ್ ಸ್ಪಿನ್ನರ್, ಆರ್‌ಸಿಬಿ ತಂಡದಿಂದ ನಿರ್ಗಮಿಸಿದ ಬಳಿಕ, ಆ ಕುರಿತು ಮಾತನಾಡಿದ್ದರು. ಫ್ರಾಂಚೈಸಿಯು ತನ್ನೊಂದಿಗೆ ಸರಿಯಾಗಿ ಸಂವಹನ ನಡೆಸದಿರುವು ತನಗೆ ದುಃಖ ತಂದಿರುವುದಾಗಿ ಅವರು ಹೇಳಿದ್ದರು.

ಇದನ್ನೂ ಓದಿ | ಕೇವಲ 100 ರೂಪಾಯಿಗೆ ಡಬ್ಲ್ಯೂಪಿಎಲ್ ಪಂದ್ಯ ವೀಕ್ಷಿಸಿ; ಆನ್‌ಲೈನ್ ಟಿಕೆಟ್ ಬುಕ್‌ ಮಾಡಲು ಇಲ್ಲಿದೆ ಟಿಪ್ಸ್

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್, ‘ಅನ್‌ವೈಂಡ್ ವಿತ್ ಕ್ರಿಕೆಟ್.ಕಾಮ್’ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ. ಆರ್‌ಸಿಬಿ ತಂಡವು ಚಹಾಲ್ ಅವರನ್ನು ಮತ್ತೆ ಏಕೆ ತಂಡಕ್ಕೆ ಕರೆತರಲು ಸಾಧ್ಯವಾಗಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ನಾವು ಹರಾಜಿನಲ್ಲಿ ಹರ್ಷಲ್ ಪಟೇಲ್ ಮತ್ತು ಯುಜಿ ಇಬ್ಬರನ್ನೂ ಮತ್ತೆ ಖರೀದಿಸಲು ಬಯಸಿದ್ದೆವು. ಹೀಗಾಗಿ ನಾವು ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡೆವು. ಕೇವಲ ಮೂರು ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ, ಅವರನ್ನು ಖರೀದಿಸಲು ನಮಗೆ ಹೆಚ್ಚುವರಿ ನಾಲ್ಕು ಕೋಟಿ ಸಿಕ್ಕಿತು” ಎಂದು ಹೆಸನ್ ಹೇಳಿದರು.

ಇದನ್ನೂ ಓದಿ | ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

“ಬಹುಶಃ ನಾನು ಈಗಲೂ ಹತಾಶೆಗೊಂಡ ವಿಷಯವೆಂದರೆ, ಅವರು ಐಪಿಎಲ್‌ನಲ್ಲಿ ಅತ್ಯುತ್ತಮ ಆಟಗಾರನಾಗಿದ್ದರೂ ಹರಾಜಿನ ಅಗ್ರ ಎರಡು ಮಾರ್ಕ್ಯೂ ಪಟ್ಟಿಗಳಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅವರು ಹರಾಜು ಪಟ್ಟಿಯಲ್ಲಿ 65ನೇ ಕ್ರಮಾಂಕದಲ್ಲಿ ಬಂದಿದ್ದರು. ಹೀಗಾಗಿ ನಾವು ಅವರನ್ನು ಪಡೆಯುತ್ತೇವೆ ಎಂದು ಖಾತರಿಪಡಿಸುವುದು ನಿಜಕ್ಕೂ ಕಷ್ಟಕರವಾಗಿತ್ತು” ಎಂದು ಅವರು ಹೇಳಿದ್ದಾರೆ.

ಅಣಕು ಹರಾಜಿನಲ್ಲಿ ಏನೇನಾಯ್ತು ಎಂದು ವಿವರಿಸಿದ ಹೆಸನ್

“ನಾವು ಅಣಕು ಹರಾಜಿನಲ್ಲಿ ಹೆಚ್ಚು ಸಮಯ ಕಳೆದಿದ್ದೇವೆ. ಹರ್ಷಲ್ ಮೊದಲ ಮೂರು ಸೆಟ್‌ಗಳಲ್ಲಿದ್ದರು. ಆದರೆ ಯೂಜಿ ಆರನೇ ಸೆಟ್‌ನಲ್ಲಿದ್ದರು. ನಾವು ನಂತರದ ಹರಾಜಿನಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮೊದಲೇ ತಿಳಿದಿತ್ತು. ನಾವು ನಮ್ಮ ಎಲ್ಲಾ ಹಣವನ್ನು ಉಳಿಸಿ ಆರನೇ ಸೆಟ್‌ಗಾಗಿ ಕಾಯುತ್ತಿದ್ದರೆ, ನಮಗಿಂತ ಹೆಚ್ಚು ಹಣವನ್ನು ಹೊಂದಿರುವ ಇತರ ಐದು ತಂಡಗಳಿವೆ ಎಂಬುದು ನಮಗೆ ತಿಳಿದಿತ್ತು. ಒಂದು ವೇಳೆ ನಾವು ಎಲ್ಲಾ ಬೌಲರ್‌ಗಳನ್ನು ಕೈಬಿಟ್ಟು, ಕೊನೆಗೆ ಯೂಜಿಯನ್ನು ಕೂಡಾ ಖರೀದಿಸಲು ವಿಫಲರಾದೆವು ಎಂದು ಭಾವಿಸೋಣ. ಆಗ ನಾವು ಲೆಗ್-ಸ್ಪಿನ್ನರ್ ಇಲ್ಲದೆ ಉಳಿಯುತ್ತಿದ್ದೆವು" ಎಂದು ಅವರು ಹೇಳಿದ್ದಾರೆ.‌

ಇದನ್ನೂ ಓದಿ | ಮಾರ್ಚ್ 22ರಿಂದ ಐಪಿಎಲ್ 2024ರ ಆವೃತ್ತಿ ಆರಂಭ; ಚುನಾವಣೆ ನಡುವೆಯೂ ಭಾರತದಲ್ಲೇ ನಡೆಯಲಿದೆ ಪಂದ್ಯಾವಳಿ

“ನಾವು ಅಣಕು ಹರಾಜಿನಲ್ಲಿ ಯೂಜಿಯನ್ನು ಹೇಗೆ ಖರೀದಿಸಬಹುದು ಎಂದು ಗಂಟೆಗಳ ಕಾಲ ಚರ್ಚಿಸಿದ್ದೇವೆ. ಹರಾಜಿನ ನಂತರ ನಾನು ಅವರೊಂದಿಗೆ ಮಾತನಾಡಿದ್ದೆ. ಅವರು ಅಸಮಾಧಾನಗೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಹರಾಜು ಹಿಂದಿನ ಲೆಕ್ಕಾಚಾರಗಳನ್ನು ವಿವರಿಸಲು ಪ್ರಯತ್ನಿಸುವುದು ತುಂಬಾ ಕಷ್ಟಕರವಾಗಿತ್ತು. ಅವರು ಯಾವುದನ್ನೂ ಕೇಳಲು ಆಸಕ್ತಿ ಹೊಂದಿರಲಿಲ್ಲ. ಆದರೆ, ನಾನು ಅವನನ್ನು ದೂಷಿಸುವುದಿಲ್ಲ. ಅವರು ಆರ್‌ಸಿಬಿಯನ್ ಆಗಿದ್ದರು. ಹೀಗಾಗಿ ಅವರು ಹತಾಶರಾಗಿದ್ದರು. ಆದರೆ ನಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ನಾನು ಎಲ್ಲರಿಗೂ ಭರವಸೆ ನೀಡಬಲ್ಲೆ” ಎಂದು ಹೆಸನ್‌ ಹೇಳಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner