AUS Playing 11: ಭಾರತದ ವಿರುದ್ಧದ 5ನೇ ಟೆಸ್ಟ್​ಗೆ ಆಸ್ಟ್ರೇಲಿಯಾ ಬಲಿಷ್ಠ ಪ್ಲೇಯಿಂಗ್ XI ಪ್ರಕಟ; ಸ್ಟಾರ್ ಆಲ್​ರೌಂಡರ್ ಔಟ್
ಕನ್ನಡ ಸುದ್ದಿ  /  ಕ್ರಿಕೆಟ್  /  Aus Playing 11: ಭಾರತದ ವಿರುದ್ಧದ 5ನೇ ಟೆಸ್ಟ್​ಗೆ ಆಸ್ಟ್ರೇಲಿಯಾ ಬಲಿಷ್ಠ ಪ್ಲೇಯಿಂಗ್ Xi ಪ್ರಕಟ; ಸ್ಟಾರ್ ಆಲ್​ರೌಂಡರ್ ಔಟ್

AUS Playing 11: ಭಾರತದ ವಿರುದ್ಧದ 5ನೇ ಟೆಸ್ಟ್​ಗೆ ಆಸ್ಟ್ರೇಲಿಯಾ ಬಲಿಷ್ಠ ಪ್ಲೇಯಿಂಗ್ XI ಪ್ರಕಟ; ಸ್ಟಾರ್ ಆಲ್​ರೌಂಡರ್ ಔಟ್

Australia Playing XI: ಟೀಮ್ ಇಂಡಿಯಾ ವಿರುದ್ಧದ ಅಂತಿಮ ಅಥವಾ ಐದನೇ ಟೆಸ್ಟ್ ಪಂದ್ಯಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ಲೇಯಿಂಗ್ 11 ಪ್ರಕಟಿಸಿದೆ. ಮಿಚೆಲ್ ಮಾರ್ಷ್ ಸ್ಥಾನ ಕಳೆದುಕೊಂಡಿದ್ದಾರೆ.

AUS Playing 11: ಭಾರತದ ವಿರುದ್ಧದ 5ನೇ ಟೆಸ್ಟ್​ಗೆ ಪ್ಲೇಯಿಂಗ್ XI ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಟಾರ್ ಆಲ್​ರೌಂಡರ್ ಔಟ್
AUS Playing 11: ಭಾರತದ ವಿರುದ್ಧದ 5ನೇ ಟೆಸ್ಟ್​ಗೆ ಪ್ಲೇಯಿಂಗ್ XI ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಟಾರ್ ಆಲ್​ರೌಂಡರ್ ಔಟ್ (ICC- X)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ನಾಳೆಯಿಂದ ಅಂದರೆ ಜನವರಿ 3 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಒಂದು ದಿನ ಮೊದಲೇ ಆಸ್ಟ್ರೇಲಿಯಾ ತಂಡವು ಪ್ಲೇಯಿಂಗ್ 11 ಪ್ರಕಟಿಸಿದ್ದು, ದೊಡ್ಡ ಬದಲಾವಣೆಯೊಂದು ಮಾಡಿದೆ. ಸ್ಟಾರ್ ಆಲ್​ರೌಂಡರ್​ ಮಿಚೆಲ್ ಮಾರ್ಷ್ ಕೈಬಿಡಲಾಗಿದ್ದರೆ, ದೇಶೀಯ ಕ್ರಿಕೆಟ್​ನಲ್ಲಿ ಅಬ್ಬರಿಸಿರುವ 31 ವರ್ಷದ ಬ್ಯೂ ವೆಬ್​ಸ್ಟರ್ ಪದಾರ್ಪಣೆ ಮಾಡಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಆಸ್ಟ್ರೇಲಿಯಾ 2-1ರಲ್ಲಿ ಮುನ್ನಡೆ ಸಾಧಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ನೀಡಿದ ನಂತರ ಮಾರ್ಷ್ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಬಿಜಿಟಿ 2024-25ರಲ್ಲಿ ಅವರು ಈವರೆಗೆ 10.42ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 73 ರನ್ ಗಳಿಸಿದ್ದಾರೆ. ಪರ್ತ್​​ನ ಎರಡು ಇನ್ನಿಂಗ್ಸ್​ಗಳಲ್ಲಿ 47 ರನ್​ ಗಳಿಸಿದ್ದವು. ಸರಣಿಯ ಏಳು ಇನ್ನಿಂಗ್ಸ್​ಗಳಲ್ಲಿ ಕೇವಲ 33 ಓವರ್​ಗಳನ್ನು ಎಸೆದಿದ್ದಾರೆ. ಸರಣಿಯ ಮೊದಲ ಇನ್ನಿಂಗ್ಸ್​​​​ಗಳಲ್ಲಿ 12 ರನ್​​ಗಳಿಗೆ 2 ವಿಕೆಟ್ ಪಡೆದಿದ್ದ ಅವರು, ನಂತರ 28 ಓವರ್​​ಗಳಲ್ಲಿ 127 ರನ್​​ ಬಿಟ್ಟುಕೊಟ್ಟು 1 ವಿಕೆಟ್ ಕಿತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಪ್ಲೇಯಿಂಗ್​ 11ನಿಂದ ಕೈಬಿಡಲಾಗಿದೆ.

ಬ್ಯೂ ವೆಬ್​ಸ್ಟರ್ ಪ್ರದರ್ಶನ

ಬ್ಯೂ ವೆಬ್​ಸ್ಟರ್​ ಪರ್ತ್​ ಟೆಸ್ಟ್​ ನಂತರವೇ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದರು. ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶೆಫೀಲ್ಡ್ ಶೀಲ್ಡ್​​ನಲ್ಲಿ ಅತ್ಯುತ್ತಮ ಆಲ್​ರೌಂಡರ್​ ಆಗಿರುವ ಅವರು ಕಳೆದ ಆವೃತ್ತಿಯಲ್ಲಿ 58.62ರ ಬ್ಯಾಟಿಂಗ್ ಸರಾಸರಿಯಲ್ಲಿ 938 ರನ್, 29.30ರ ಬೌಲಿಂಗ್ ಸರಾಸರಿಯಲ್ಲಿ 30 ವಿಕೆಟ್​ ಪಡೆದಿದ್ದಾರೆ. ಈ ಟ್ರೋಫಿ ಇತಿಹಾಸಲ್ಲಿ ಒಂದೇ ಆವೃತ್ತಿಯಲ್ಲಿ 900ಕ್ಕೂ ಹೆಚ್ಚು ರನ್ ಮತ್ತು 30 ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ಆಟಗಾರ. ಪ್ರಸಕ್ತ ಆವೃತ್ತಿಯಲ್ಲಿ 4 ಪಂದ್ಯಗಳಲ್ಲಿ ಒಂದು ಶತಕ, ಅರ್ಧಶತಕ ಸೇರಿದಂತೆ 50.50 ಸರಾಸರಿಯಲ್ಲಿ 303 ರನ್ ಗಳಿಸಿದ್ದಾರೆ. 9 ವಿಕೆಟ್ ಪಡೆದಿದ್ದಾರೆ.

ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ನಾಯಕ ಪ್ಯಾಟ್ ಕಮಿನ್ಸ್, ಐದನೇ ಟೆಸ್ಟ್​ಗೆ ಮಿಚೆಲ್ ಮಾರ್ಷ್ ಬದಲಿಗೆ ಬ್ಯೂ ವೆಬ್​ಸ್ಟರ್ ಪದಾರ್ಪಣೆ ಮಾಡಲಿದ್ದಾರೆ. ಈ ಸರಣಿಯಲ್ಲಿ ಮಿಚಿ ಅವರು ನಿರೀಕ್ಷಿಸಿದ ರನ್ ಅಥವಾ ವಿಕೆಟ್ ಗಳಿಸಲು ಸಾಧ್ಯವಾಗಲಿಲ್ಲ. ಸದ್ಯ ವೆಬ್​ಸ್ಟರ್ ಪ್ರದರ್ಶನ ಅದ್ಭುತವಾಗಿದ್ದು, ಸಿಡ್ನಿ ಟೆಸ್ಟ್​ನಲ್ಲಿ ಮಿಂಚಲಿದ್ದಾರೆ ಎಂಬ ಭರವಸೆ ಇದೆ ಎಂದರು. ಇದೇ ವೇಳೆ ಮಿಚೆಲ್ ಸ್ಟಾರ್ಕ್ ಗಾಯದ ಕುರಿತು ಹೇಳಿದ ಕಮಿನ್ಸ್, ಯಾವುದೇ ಅಪಾಯ ಇಲ್ಲ ಎಂದು ಕಮಿನ್ಸ್ ದೃಢಪಡಿಸಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆ ಕಂಡಿಲ್ಲ.

5ನೇ ಟೆಸ್ಟ್​​​ಗೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11

ಸ್ಯಾಮ್ ಕಾನ್ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್​ಸ್ಟರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner