ಕನ್ನಡ ಸುದ್ದಿ  /  Cricket  /  Miw Vs Dcw Match 1 Wpl 2024 Predicted Playing Xi Live Streaming Detail Weather Chinnaswamy Pitch Report Head To Head Prs

ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಫೈಟ್; ಉಭಯ ತಂಡಗಳ ಬಲಿಷ್ಠ ಪ್ಲೇಯಿಂಗ್ XI ಹೀಗಿದೆ ನೋಡಿ

MIW vs DCW : ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯಕ್ಕೂ ಪಿಚ್​ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ ಇಲೆವೆನ್, ಹವಾಮಾನ ವರದಿ, ಲೈವ್​ಸ್ಟ್ರೀಮಿಂಗ್ ವಿವರವನ್ನು ಈ ಮುಂದೆ ನೋಡೋಣ.

ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಫೈಟ್
ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಫೈಟ್

ಮಹಿಳಾ ಪ್ರೀಮಿಯರ್ ಲೀಗ್ (WPL 2024)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು (MIW vs DCW) ಕಾದಾಟಕ್ಕೆ ಸಿದ್ಧಗೊಂಡಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಉಭಯ ತಂಡಗಳು ಸಹ ಬಲಿಷ್ಠವಾಗಿದ್ದು, ಎರಡನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆದ್ದು ಅಭಿಯಾನ ಆರಂಭಿಸಲು ಪಣತೊಟ್ಟಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಹಾಗಾದರೆ ಪಿಚ್​ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ ಇಲೆವೆನ್, ಹವಾಮಾನ ವರದಿ, ಲೈವ್​ಸ್ಟ್ರೀಮಿಂಗ್ ವಿವರವನ್ನು ಈ ಮುಂದೆ ನೋಡೋಣ.

ಪಿಚ್ ವರದಿ

ಚಿನ್ನಸ್ವಾಮಿ ಕ್ರೀಡಾಂಗಣದ ಚಿಕ್ಕ ಬೌಂಡರಿಗಳು ಮತ್ತು ಎತ್ತರದ ಪ್ರದೇಶಗಳು ಸೀಮಿತ-ಓವರ್‌ಗಳ ಸ್ವರೂಪಗಳಲ್ಲಿ ಬ್ಯಾಟರ್‌ಗಳಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಈ ಮೈದಾನದಲ್ಲಿ ದೊಡ್ಡ ಮೊತ್ತದ ಸ್ಕೋರ್​ ಅನ್ನು ನಿರೀಕ್ಷಿಸಬಹುದಾಗಿದೆ. ಆದರೆ ಬೌಲರ್ಸ್ ವಿಕೆಟ್ ಪಡೆಯಲು ಕೊಂಚ ಕಷ್ಟಪಡಬೇಕಾಗುತ್ತದೆ.

ಹವಾಮಾನ ವರದಿ

ಬೆಂಗಳೂರಿನ ಹವಾಮಾನ ಮುನ್ಸೂಚನೆಯು ಆಹ್ಲಾದಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಮಳೆಯಿಲ್ಲ. ಅಕ್ಯುವೆದರ್ ಪ್ರಕಾರ, ಕನಿಷ್ಠ ತಾಪಮಾನ ಸುಮಾರು 22 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗರಿಷ್ಠ ತಾಪಮಾನವು ಸರಿಸುಮಾರು 32 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ.

ಲೈವ್ ಸ್ಟ್ರೀಮಿಂಗ್ ವಿವರ

ಮಹಿಳಾ ಪ್ರೀಮಿಯರ್ ಲೀಗ್ 2024 ರ ಉದ್ಘಾಟನಾ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಪಂದ್ಯವನ್ನು ಮಾತ್ರವಲ್ಲ, ಟೂರ್ನಿಯನ್ನು ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್​ 18ನಲ್ಲಿ ವೀಕ್ಷಿಸಬಹುದು.

ಮುಖಾಮುಖಿ ದಾಖಲೆ

ಮುಂಬೈ ಮತ್ತು ಡೆಲ್ಲಿ ಮಹಿಳಾ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಆದರೆ ಮುಂಬೈ ಲೀಗ್​ನಲ್ಲಿ 1 ಪಂದ್ಯ, ಫೈನಲ್​ನಲ್ಲಿ ಡೆಲ್ಲಿ ಎದುರು ಗೆದ್ದಿದೆ. ಒಂದು ಪಂದ್ಯದಲ್ಲಿ ಮಾತ್ರ ಮೆಗ್​ ಲ್ಯಾನಿಂಗ್ ಪಡೆ, ಅಂಬಾನಿ ಬ್ರಿಗೇಡ್ ಎದುರು ಜಯಿಸಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ 11

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಟಾಲಿ ಸೀವರ್, ಹೇಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್, ಶಬ್ನಿಮ್ ಇಸ್ಮಾಯಿಲ್, ಅಮನ್‌ದೀಪ್ ಕೌರ್, ಸೈಕಾ ಇಶಾಕ್, ಇಸ್ಸಿ ವಾಂಗ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11

ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್,, ಆಲಿಸ್ ಕ್ಯಾಪ್ಸೆ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಮರಿಝನ್ನೆ ಕಪ್, ಶಿಖಾ ಪಾಂಡೆ, ಅನ್ನಾಬೆಲ್ ಸದರ್ಲ್ಯಾಂಡ್, ರಾಧಾ ಯಾದವ್, ಟೈಟಾಸ್ ಸಾಧು, ಪೂನಮ್ ಯಾದವ್.