ಕನ್ನಡ ಸುದ್ದಿ  /  ಕ್ರಿಕೆಟ್  /  ರಿಜ್ವಾನ್‌ಗೆ ಆಟದ ಅರಿವಿಲ್ಲ, ಇಫ್ತಿಕಾರ್‌ಗೆ ಬ್ಯಾಟಿಂಗ್​ ಗೊತ್ತೇ ಇಲ್ಲ: ಪಾಕ್ ಕ್ರಿಕೆಟಿಗರಿಗೆ ಜಾಡಿಸಿದ ವಾಸೀಂ ಅಕ್ರಮ್

ರಿಜ್ವಾನ್‌ಗೆ ಆಟದ ಅರಿವಿಲ್ಲ, ಇಫ್ತಿಕಾರ್‌ಗೆ ಬ್ಯಾಟಿಂಗ್​ ಗೊತ್ತೇ ಇಲ್ಲ: ಪಾಕ್ ಕ್ರಿಕೆಟಿಗರಿಗೆ ಜಾಡಿಸಿದ ವಾಸೀಂ ಅಕ್ರಮ್

Wasim Akram Slams PAK Batters : ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಕಳಪೆ ಪ್ರದರ್ಶನ ತೋರಿದ ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್ (Iftikhar ahmed) ಅವರಿಗೆ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಮ್ ಬೆಂಡೆತ್ತಿದ್ದಾರೆ.

ರಿಜ್ವಾನ್‌ಗೆ ಆಟದ ಅರಿವಿಲ್ಲ, ಇಫ್ತಿಕಾರ್‌ಗೆ ಬ್ಯಾಟಿಂಗ್​ ಗೊತ್ತೇ ಇಲ್ಲ: ಪಾಕ್ ಕ್ರಿಕೆಟಿಗರಿಗೆ ಜಾಡಿಸಿದ ವಾಸೀಂ ಅಕ್ರಮ್
ರಿಜ್ವಾನ್‌ಗೆ ಆಟದ ಅರಿವಿಲ್ಲ, ಇಫ್ತಿಕಾರ್‌ಗೆ ಬ್ಯಾಟಿಂಗ್​ ಗೊತ್ತೇ ಇಲ್ಲ: ಪಾಕ್ ಕ್ರಿಕೆಟಿಗರಿಗೆ ಜಾಡಿಸಿದ ವಾಸೀಂ ಅಕ್ರಮ್

1999ರ ಏಕದಿನ ವಿಶ್ವಕಪ್‌ನ ಫೈನಲ್ ತಲುಪಿದ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ (Pakistan Cricket Team) ನಾಯಕರಾಗಿದ್ದ ಲೆಜೆಂಡರಿ ವೇಗಿ ವಾಸೀಂ ಅಕ್ರಮ್ (Wasim Akram) ಅವರು, 2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ 6 ರನ್‌ಗಳಿಂದ ಆಘಾತಕಾರಿ ಸೋಲು ಅನುಭವಿಸಿದ ನಂತರ ಮೊಹಮ್ಮದ್ ರಿಜ್ವಾನ್ (Mohammed Rizwan) ಮತ್ತು ಇಫ್ತಿಕಾರ್ ಅಹ್ಮದ್ ಅವ​ರನ್ನು ಕಟುವಾಗಿ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಭಾನುವಾರ (ಜೂನ್ 9) ನಡೆದ ಪಂದ್ಯದಲ್ಲಿ ಭಾರತ ತಂಡ ನೀಡಿದ 119 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಎ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧದ ಸೋಲು ವಾಸೀಂ ಅಕ್ರಮ್​ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೆನ್ ಇನ್ ಗ್ರೀನ್ ಬ್ಯಾಟರ್ಸ್​ ಕಳಪೆ ಪ್ರದರ್ಶನದ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ.

ರಿಜ್ವಾನ್​ಗೆ ಆಟದ ಅರಿವೇ ಇಲ್ಲ ಎಂದ ವಾಸೀಂ ಅಕ್ರಮ್

ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ವಿರುದ್ಧದ 120 ರನ್ ಗುರಿ ಬೆನ್ನಟ್ಟಲು ಪಾಕಿಸ್ತಾನ ವಿಫಲವಾದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಅಕ್ರಮ್, 'ಅವರು ಹಲವು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದರೂ ರಿಜ್ವಾನ್​ಗೆ ಆಟದ ಅರಿವೇ ಇಲ್ಲ ಎಂದು ಬೆಂಡೆತ್ತಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರಿಗೆ ವಿಕೆಟ್ ಪಡೆಯಲೆಂದೇ ಚೆಂಡು ನೀಡಲಾಯಿತು. ಆದರೆ ಅವರ ಎಸೆತಗಳನ್ನು ಎಚ್ಚರಿಕೆಯಿಂದ ಆಡಬೇಕು ಮತ್ತು ಬುದ್ಧಿವಂತಿಕೆಯಿಂದ ಹೇಗೆ ಬ್ಯಾಟ್ ಬೀಸಬೇಕು ಎಂಬುದು ತಿಳಿದಿರಬೇಕು. ಆದರೆ, ರಿಜ್ವಾನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡರು. ಆಟದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರಿಯದೆಯೇ ಬ್ಯಾಟಿಂಗ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಿಜ್ವಾನ್ 43 ಎಸೆತಗಳಲ್ಲಿ 31 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಜಸ್ಪ್ರೀತ್ ಬುಮ್ರಾ ಸ್ವಿಂಗ್​ ಬಾಲ್​ ಅನ್ನು ಹಾಕಿದರು. ಇದು ರಿಜ್ವಾನ್​ ಬ್ಯಾಟ್ ತಪ್ಪಿಸಿ ಕ್ಲೀನ್​ ಬೋಲ್ಡ್ ಆಗಲು ಕಾರಣವಾಯಿತು. 15ನೇ ಓವರ್‌ನ ಮೊದಲ ಎಸೆತದಲ್ಲಿ ಅವರ ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ಪಂದ್ಯವನ್ನು ಟರ್ನ್ ಮಾಡಿತು. ಈ ವೇಳೆ ಪಾಕಿಸ್ತಾನ ತಂಡಕ್ಕೆ ಇಫ್ತಿಕಾರ್​ ಆಸರೆಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪಂದ್ಯ ಫಿನಿಷ್ ಮಾಡುವಲ್ಲಿ ವಿಫಲರಾದರು.

ಇಫ್ತಿಕಾರ್​ಗೆ ಬ್ಯಾಟಿಂಗ್ ಗೊತ್ತೇ ಇಲ್ಲ ಎಂದ ದಿಗ್ಗಜ ಆಟಗಾರ

ಇಫ್ತಿಕಾರ್ ಅಹ್ಮದ್‌ಗೆ ಲೆಗ್ ಸೈಡ್‌ನಲ್ಲಿ ಒಂದು ಶಾಟ್​ವೊಂದನ್ನು ಆಡುತ್ತಾರೆ. ಅವರು ಹಲವು ವರ್ಷಗಳಿಂದ ತಂಡದ ಭಾಗವಾಗಿದ್ದರೂ ಬ್ಯಾಟಿಂಗ್ ಮಾಡುವುದು ಹೇಗೆಂದು ತಿಳಿದಿಲ್ಲ. ಫಖರ್ ಜಮಾನ್, ಆಟದ ಅರಿವಿನ ಬಗ್ಗೆ ಏನೆಂದು ಹೇಳಬೇಕೆಂದು ಗೊತ್ತಿಲ್ಲ. ಆಟಗಾರರು ಕಳಪೆ ಪ್ರದರ್ಶನ ನೀಡುವುದು, ಕೋಚ್‌ಗಳನ್ನು ವಜಾ ಮಾಡುವುದು. ಆಟಗಾರರು ಸರಿಯಾಗಿ ಆಡದಿದ್ದರೆ ಕೋಚ್​​ಗಳು ಏನು ಮಾಡುತ್ತಾರೆ. ಪ್ರಸ್ತುತ ಕೋಚ್​​ಗಳನ್ನು ಉಳಿಸಿಕೊಂಡು ತಂಡವನ್ನೇ ಬದಲಾಯಿಸುವ ಸಮಯ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ತಂಡದಲ್ಲಿ ಕೆಲವು ಆಟಗಾರರು ಮಾತನಾಡಲು ಪದಗಳೇ ಇಲ್ಲ. ಅವರನ್ನು ಮೊದಲು ತಂಡದಿಂದ ವಜಾಗೊಳಿಸಬೇಕು. ಪರಸ್ಪರ ಮಾತನಾಡಲು ಇಷ್ಟಪಡದ ಆಟಗಾರರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್, ಮತ್ತು ನೀವು ನಿಮ್ಮ ದೇಶಕ್ಕಾಗಿ ಆಡುತ್ತೀರಿ ಎಂಬುದು ಆ ಆಟಗಾರರಿಗೆ ಪರಿಜ್ಞಾನ ಇಲ್ಲ. ಈ ಆಟಗಾರರನ್ನು ಮೊದಲು ಮನೆಗೆ ಕಳುಹಿಸಿಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ ದಿಗ್ಗಜ ಆಟಗಾರ.

ಇನ್ನಷ್ಟು ಟಿ20 ವಿಶ್ವಕಪ್​​ 2024 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024