ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಶಮಿ ಬ್ಯಾನ್? ಕೇಳಿಬಂತು ಬಹುದೊಡ್ಡ ಆರೋಪ, ಅದಕ್ಕಿಲ್ಲಿದೆ ಸಾಕ್ಷಿ!
ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಶಮಿ ಬ್ಯಾನ್? ಕೇಳಿಬಂತು ಬಹುದೊಡ್ಡ ಆರೋಪ, ಅದಕ್ಕಿಲ್ಲಿದೆ ಸಾಕ್ಷಿ!

ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಶಮಿ ಬ್ಯಾನ್? ಕೇಳಿಬಂತು ಬಹುದೊಡ್ಡ ಆರೋಪ, ಅದಕ್ಕಿಲ್ಲಿದೆ ಸಾಕ್ಷಿ!

Mohammed Shami: ವ್ಯಕ್ತಿಯೊಬ್ಬರು ಮೊಹಮ್ಮದ್ ಶಮಿ ಮೇಲೆ ವಂಚನೆ ಆರೋಪ ಮಾಡಿದ್ದಾರೆ. ಶಮಿ ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಹೇಳಲಾಗಿದೆ. ಬಿಸಿಸಿಐ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಶಮಿ ಬ್ಯಾನ್? ಕೇಳಿಬಂತು ಬಹುದೊಡ್ಡ ಆರೋಪ
ಟೀಂ ಇಂಡಿಯಾದಿಂದ ವೇಗಿ ಮೊಹಮ್ಮದ್ ಶಮಿ ಬ್ಯಾನ್? ಕೇಳಿಬಂತು ಬಹುದೊಡ್ಡ ಆರೋಪ

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಸುಮಾರು ಒಂದು ವರ್ಷದ ನಂತರ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅದ್ಭುತ ಪುನರಾಗಮನ ಮಾಡಿದ್ದಾರೆ. ಸದ್ಯ ಇವರನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸ್ಟ್ರೇಲಿಯಾಕ್ಕೆ ಕಳುಹಿಸುವ ಕುರಿತು ಚರ್ಚೆ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಎರಡನೇ ಟೆಸ್ಟ್‌ಗೂ ಮೊದಲು ಭಾರತ ತಂಡವನ್ನು ಸೇರಿಕೊಳ್ಳಬಹುದು. ಇದರ ಬೆನ್ನಲ್ಲೇ ಅವರಿಗೆ ಹೊಸದೊಂದು ಕಂಟಕ ಎದುರಾಗಿದ್ದು, ಸಂಕಷ್ಟದಲ್ಲಿ ಸಿಲುಕಿರುವಂತಿದೆ.

ವ್ಯಕ್ತಿಯೊಬ್ಬರು ಶಮಿ ಮೇಲೆ ವಂಚನೆ ಆರೋಪ ಮಾಡಿದ್ದು, ತಮ್ಮ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಹೇಳಲಾಗಿದೆ. ಬಿಸಿಸಿಐ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಿರುವಾಗ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಶಮಿ ಆಸ್ಟ್ರೇಲಿಯಕ್ಕೆ ತೆರಳಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ.

ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ಹಲವು ಆರೋಪಗಳಿಗೆ ಬಲಿಯಾಗಿದ್ದರು. ಅವರ ಪತ್ನಿ ಹಸಿನ್ ಜಹಾನ್ ಕೂಡ ಕೌಟುಂಬಿಕ ಹಿಂಸೆ ಮತ್ತು ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಬಿಸಿಸಿಐ ಫಿಕ್ಸಿಂಗ್ ವಿಚಾರದಲ್ಲಿ ಅವರಿಗೆ ಕ್ಲೀನ್ ಚೀಟ್ ನೀಡಿದೆ. ಇದೀಗ 8 ವರ್ಷಗಳಿಂದ ವಯಸ್ಸನ್ನು ಮರೆಮಾಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವ್ಯಕ್ತಿಯೊಬ್ಬರು ಡ್ರೈವಿಂಗ್ ಲೈಸೆನ್ಸ್‌ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದು ಶಮಿ ಅವರದ್ದು ಎಂದು ಹೇಳಿಕೊಂಡಿದ್ದಾರೆ, ಅದರಲ್ಲಿರುವ ಪ್ರಕಾರ ಶಮಿ ವಯಸ್ಸು 42, ಆದರೆ ಶಮಿ ಅವರ ಪ್ರಸ್ತುತ ಅಧಿಕೃತ ವಯಸ್ಸು 34 ವರ್ಷಗಳು.

ಇಲ್ಲಿದೆ ನೋಡಿ ಆ ಪೋಸ್ಟ್​

ವ್ಯಕ್ತಿಯ ಈ ಹೇಳಿಕೆಯ ನಂತರ, ಫೋಟೋ ವೈರಲ್ ಆಗುತ್ತಿದೆ. ಆದರೆ, ಈ ಫೋಟೋ ಮತ್ತು ಅದರಲ್ಲಿ ನೀಡಿರುವ ಮಾಹಿತಿ ಅಸಲಿಯೇ ಅಥವಾ ಅದನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಶಮಿ ಅಥವಾ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ.

ಭಾರತದಲ್ಲಿ ಅನೇಕ ಬಾರಿ ಕ್ರಿಕೆಟಿಗರು ತಮ್ಮ ವಯಸ್ಸಿನ ಬಗ್ಗೆ ಮೋಸ ಮಾಡಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಅಂಡರ್-19 ದಿನಗಳಲ್ಲಿ, ಆಟಗಾರರು ತಂಡದಲ್ಲಿ ಆಯ್ಕೆ ಮಾಡಲು ತಮ್ಮ ವಯಸ್ಸನ್ನು ಒಂದು ಅಥವಾ ಎರಡು ವರ್ಷ ಕಡಿಮೆ ಎಂದು ಘೋಷಿಸುತ್ತಾರೆ. ಆದರೆ ಭಾರತದಲ್ಲಿ ಇದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ. ಯಾವುದೇ ಕ್ರಿಕೆಟಿಗರು ಈ ರೀತಿ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಬಿಸಿಸಿಐ ತುಂಬಾ ಕಟ್ಟುನಿಟ್ಟಾಗಿದ್ದು, ಈಗಾಗಲೇ ಹಲವು ಆಟಗಾರರನ್ನು ಬ್ಯಾನ್ ಮಾಡಿದೆ. ಇದು ನಿಜ ಎಂದು ಸಾಬೀತಾದರೆ ಶಮಿ ಕೂಡ ಬ್ಯಾನ್ ಆಗುವ ಸಾಧ್ಯತೆ ಇದೆ.

ಮೊಹಮ್ಮದ್ ಶಮಿ ಪ್ರದರ್ಶನ

ರಣಜಿ ಟ್ರೋಫಿಯಲ್ಲಿ ಶಮಿ ಪಂದ್ಯದ ಎಲ್ಲಾ 4 ದಿನಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಬೌಲಿಂಗ್ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 4 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಪ್ರದರ್ಶನ ನೀಡಿ ತಂಡವನ್ನು 11 ರನ್​​ಗಳ ರೋಚಕ ಜಯದತ್ತ ಮುನ್ನಡೆಸಿದರು.

Whats_app_banner