ಮೊಹಮ್ಮದ್ ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ; ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊಹಮ್ಮದ್ ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ; ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ Xi

ಮೊಹಮ್ಮದ್ ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ; ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

India's Predicted Playing XI: ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಒಂದೆರಡು ಬದಲಾವಣೆ ಕಾಣುವ ಸಾಧ್ಯತೆ ಇದೆ.

ಮೊಹಮ್ಮದ್ ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ; ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಮೊಹಮ್ಮದ್ ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ; ನ್ಯೂಜಿಲೆಂಡ್ ವಿರುದ್ಧದ ಕದನಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಭಾರತ-ನ್ಯೂಜಿಲೆಂಡ್ ತಂಡಗಳು (India vs New Zealand) ಮಾರ್ಚ್ 2ರಂದು ಭಾನುವಾರ ಮುಖಾಮುಖಿಯಾಗಲಿವೆ. ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಉಭಯ ತಂಡಗಳಿಗೆ ಇದು ಔಪಚಾರಿಕ ಪಂದ್ಯವಷ್ಟೆ. ಎ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಇಂಡೋ-ಕಿವೀಸ್ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿವೆ. ಈ ಪಂದ್ಯದಲ್ಲಿ ಸೋತರೂ ಗೆದ್ದರೂ ಯಾವುದೇ ಪ್ರಯೋಜನ ಉಭಯ ತಂಡಗಳಿಗೂ ಇಲ್ಲ! ಅಂತಿಮ ಲೀಗ್ ಪಂದ್ಯಕ್ಕೆ ಭಾರತ ಪ್ಲೇಯಿಂಗ್ 11ನಲ್ಲಿ (India's Predicted Playing XI) ಒಂದೆರಡು ಬದಲಾವಣೆ ಮಾಡುವ ನಿರೀಕ್ಷೆ ಇದೆ.

ಆರಂಭಿಕ ಸ್ಥಾನದಲ್ಲೂ ಬದಲಾವಣೆ?

ಆರಂಭಿಕರೂ ಆದ ನಾಯಕ ರೋಹಿತ್​ ಶರ್ಮಾ (Rohit Sharma) ಮತ್ತು ಉಪನಾಯಕ ಶುಭ್ಮನ್ ಗಿಲ್ (Shubman Gill) ಇಬ್ಬರೂ ಅಭ್ಯಾಸ ಶಿಬಿರದಿಂದ ಹೊರಗುಳಿದಿರುವುದು ಅಚ್ಚರಿ ಮೂಡಿಸಿದೆ. ರೋಹಿತ್​ ಮೊಣಕಾಲು ನೋವಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗೆ ಗಿಲ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವಿವಿಧ ವರದಿಗಳು ಹೇಳುತ್ತಿವೆ. ಸೆಮಿಫೈನಲ್​ ದೃಷ್ಟಿಯನ್ನಿಟ್ಟುಕೊಂಡು ಇಬ್ಬರನ್ನೂ ಪಂದ್ಯಕ್ಕೆ ವಿಶ್ರಾಂತಿ ನೀಡುವ ನಿರೀಕ್ಷೆಯೂ ಇದೆ. ಇದು ಎಷ್ಟು ಸತ್ಯವೆಂದು ಅಧಿಕೃತವಾಗಿ ಟೀಮ್ ಮ್ಯಾನೇಜ್​ಮೆಂಟ್ ಸ್ಪಷ್ಟಪಡಿಸುವ ಅಗತ್ಯ ಇದೆ.

ಒಂದು ವೇಳೆ ರೋಹಿತ್​-ಗಿಲ್​ಗೆ ವಿಶ್ರಾಂತಿ ನೀಡಿದರೆ ಕೆಎಲ್ ರಾಹುಲ್ (KL Rahul) ಮತ್ತು ವಿರಾಟ್ ಕೊಹ್ಲಿ (Virat Kohli) ಇನ್ನಿಂಗ್ಸ್ ಆರಂಭಿಸಬಹುದು ಎಂದು ವರದಿ ಹೇಳುತ್ತಿವೆ. ರೋಹಿತ್​-ಗಿಲ್​ಗೆ ಯಾವುದೇ ವಿಶ್ರಾಂತಿ ನೀಡದೇ ಇದ್ದರೆ ಕೊಹ್ಲಿ ಮತ್ತು ರಾಹುಲ್ ಎಂದಿನಂತೆ ತಮ್ಮ ಸ್ಥಾನಗಳಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ತಂಡದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡು ಬಂದರೆ ಶ್ರೇಯಸ್ ಅಯ್ಯರ್ (Shreyas Iyer) 3ನೇ ಸ್ಥಾನದಲ್ಲಿ ಕಣಕ್ಕಿಳಿಯುವುದರ ಜೊತೆಗೆ ನಾಯಕನಾಗುವ ಸಾಧ್ಯತೆಯೂ ಇದೆ. ರಿಷಭ್ ಪಂತ್ (Rishabh Pant) ಅವಕಾಶ ಪಡೆಯಲಿದ್ದಾರೆ. ವಾಷಿಂಗ್ಟನ್ ಸುಂದರ್​ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಮಿಗೆ ರೆಸ್ಟ್, ಅರ್ಷದೀಪ್​ಗೆ ಅವಕಾಶ

ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಮ್ಮ ಸ್ಥಾನಗಳಲ್ಲಿ ಮುಂದುವರೆಯಲಿದ್ದಾರೆ. ಒಂದು ರಾಹುಲ್​ಗೆ ಆರಂಭಿಕನಾದರೆ ಅಕ್ಷರ್​ ಪಟೇಲ್​ ಐದನೇ ಕ್ರಮಾಂಕಕ್ಕೆ ಬಡ್ತಿ ಪಡೆಯಲಿದ್ದಾರೆ. ಸ್ಪಿನ್ನರ್​ ವಿಭಾಗದಲ್ಲಿ ಕುಲ್ದೀಪ್ ಯಾದವ್ ಕಳೆದ ಪಂದ್ಯದ ಲಯವನ್ನೇ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಆದರೆ ವೇಗದ ವಿಭಾಗದಲ್ಲಿ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲು ಮ್ಯಾನೇಜ್​ಮೆಂಟ್ ಚಿಂತಿಸಿದ್ದು, ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ಸಿಗುತ್ತದೆ ಎಂದು ವರದಿಯಾಗಿದೆ. ಹರ್ಷಿತ್ ರಾಣಾ ತಮ್ಮ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ರೋಹಿತ್-ಗಿಲ್ ಆಡಿದರೆ ತಂಡದಲ್ಲಿ ಶಮಿ ಹೊರತುಪಡಿಸಿ ಬೇರೆ ಬದಲಾವಣೆ ಅಸಾಧ್ಯ ಎನ್ನಲಾಗಿದೆ.

ಭಾರತ ಸಂಭಾವ್ಯ 11 (ಗಿಲ್-ರೋಹಿತ್ ಅಲಭ್ಯರಾದರೆ..)

ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

ಭಾರತ ಸಂಭಾವ್ಯ 11 (ಗಿಲ್-ರೋಹಿತ್ ಲಭ್ಯರಾದರೆ..)

ರೋಹಿತ್​ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner