ಅಪಘಾತವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಶಮಿ; ಹೃದಯ ವೈಶಾಲ್ಯತೆ ಮೆರೆದ ವೇಗಿ, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಪಘಾತವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಶಮಿ; ಹೃದಯ ವೈಶಾಲ್ಯತೆ ಮೆರೆದ ವೇಗಿ, ವಿಡಿಯೋ

ಅಪಘಾತವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಶಮಿ; ಹೃದಯ ವೈಶಾಲ್ಯತೆ ಮೆರೆದ ವೇಗಿ, ವಿಡಿಯೋ

Mohammed Shami: ಉತ್ತರಾಖಾಂಡ್​ನ ನೈನಿತಾಲ್ ಬಳಿ ಕಾರು ಅಪಘಾತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸುವ ಮೂಲಕ ಶಮಿ ಮಾನವೀಯತೆ ಮೆರೆದಿದ್ದಾರೆ.

ಅಪಘಾತವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಮೊಹಮ್ಮದ್ ಶಮಿ.
ಅಪಘಾತವಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಮೊಹಮ್ಮದ್ ಶಮಿ.

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ (ODI World Cup) ಬೊಂಬಾಬ್ ಬೌಲಿಂಗ್ ಪ್ರದರ್ಶನ ಪ್ರದರ್ಶಿಸಿ ಭಾರತ ತಂಡವನ್ನು ಫೈನಲ್​​ವರೆಗೂ ಕರೆ ತರಲು ನೆರವಾದ ವೇಗದ ಬೌಲರ್​ ಮೊಹಮ್ಮದ್ ಶಮಿ (Mohammad Shami), 140 ಕೋಟಿ ಜನರ ಹೃದಯ ಗೆದ್ದಿದ್ದಾರೆ. ಮೈದಾನದ ಹೊರಗೂ ವ್ಯಕ್ತಿಯೊಬ್ಬರ ಜೀವ ಉಳಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಆ ಮೂಲಕ ಮತ್ತೊಮ್ಮೆ ಭಾರತೀಯ ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದಾರೆ.

ಹೌದು, ಕಾರು ಅಪಘಾತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸುವ ಮೂಲಕ ಶಮಿ ಮಾನವೀಯತೆ ಮೆರೆದಿದ್ದಾರೆ. ಈ ಕುರಿತ ವಿಡಿಯೋವನ್ನು ಶಮಿ ಅವರೇ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಘಟನೆ ನಡೆದ ಸ್ಥಳದ ಕುರಿತು ಕೂಡ ಮಾಹಿತಿ ನೀಡಿದ್ದಾರೆ. ಶಮಿ ಅವರ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

‘ಜೀವ ಉಳಿಸಿದ ಖುಷಿ ನನ್ನದು’

ಜೀವ ಉಳಿಸಿದ ಖುಷಿ ನನಗೆ ಸಿಕ್ಕಿದೆ ಎಂದು ಶಮಿ ಇನ್​ಸ್ಟಾ ಪೋಸ್ಟ್​ನಲ್ಲಿ ಬರೆದಿದ್ದಾರೆ. ಒಬ್ಬರ ಜೀವ ಉಳಿಸುವ ಅವಕಾಶ ಸಿಕ್ಕಿದ್ದು ಖುಷಿ ನನ್ನದಾಯಿತು. 2ನೇ ಬಾರಿಗೆ ಜೀವ ಪಡೆದ ಈ ವ್ಯಕ್ತಿ ತುಂಬ ಅದೃಷ್ಟವಂತ. ನಾವು ಹೋಗುತ್ತಿದ್ದ ವೇಳೆ ಉತ್ತರಾಖಂಡ್​ನ ನೈನಿತಾಲ್‌ ಬಳಿ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜೀವ ಸಿಕ್ಕಂತಾಗಿದೆ ಎಂದು ಪೋಸ್ಟ್​ನಲ್ಲಿ ಶಮಿ ಬರೆದಿದ್ದಾರೆ.

ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಅಪಘಾತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಜೀವ ಉಳಿಸಿದ ವಿಡಿಯೋ ಹಂಚಿಕೊಂಡ ಬಳಿಕ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕ್ರಿಕೆಟ್​ಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಮೈದಾನದಲ್ಲಿ ಪ್ರತಿಯೊಬ್ಬರ ವಿಕೆಟ್ ಪಡೆಯುವ ಶಮಿ, ಯಾರೋ ಒಬ್ಬರ ವಿಕೆಟ್ ಉಳಿಸಿದ ಅಪರೂಪದ ದೃಶ್ಯ ಎಂದು ಹೇಳಿದ್ದಾರೆ. ನಿಮ್ಮ ಸೇವೆ ಸಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಮೈದಾನದಲ್ಲಿ ಭಾರತ ತಂಡವನ್ನು ರಕ್ಷಿಸುತ್ತೀರೀ. ಮೈದಾನದ ಹೊರಗೆ ಜನರನ್ನು ರಕ್ಷಿಸುತ್ತೀರಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇರೋ ಒಂದು ಹೃದಯವನ್ನು ಎಷ್ಟು ಸಲ ಗೆಲ್ಲುತ್ತೀರಿ. ಮೈದಾನದ ಹೊರಗೂ, ಒಳಗೂ ನೀವು ಹೀರೋ ಎಂದು ಹಲವರು ಮೆಚ್ಚುಗೆಯ ಕಾಮೆಂಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಮಂದಿ ಲವ್​ ಯು ಎಂದು ಲವ್ ಎಮೋಜಿ ಹಾಕಿದ್ದಾರೆ.

ವಿಶ್ವಕಪ್​ನಲ್ಲಿ ಶಮಿ ಪ್ರದರ್ಶನ

ಏಕದಿನ ವಿಶ್ವಕಪ್​ನಲ್ಲಿ ಮೊಹಮ್ಮದ್ ಶಮಿ ವಿಕೆಟ್ ಬೇಟೆಯಾಡಿದ್ದರು. ಆರಂಭಿಕ 4 ಪಂದ್ಯಗಳಲ್ಲಿ ಅವಕಾಶ ಪಡೆಯದೆ ಬೆಂಚ್​ನಲ್ಲಿದ್ದರು. ಹಾರ್ದಿಕ್​ ಪಾಂಡ್ಯ ಇಂಜುರಿಗೆ ಒಳಗಾದ ನಂತರ ತಂಡದಲ್ಲಿ ಅವಕಾಶ ಪಡೆದ ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಟೂರ್ನಿಯಲ್ಲಿ ಒಟ್ಟು ಆಡಿದ್ದು ಏಳೇ ಪಂದ್ಯಗಳಾದರೂ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಬರೆದರು. 7 ಪಂದ್ಯಗಳಲ್ಲಿ 24 ರನ್ ವಿಕೆಟ್ ಪಡೆದರು.

ಮಾರ್ಷ್ ವಿರುದ್ಧ ಗರಂ

ಏಕದಿನ ವಿಶ್ವಕಪ್ ಟ್ರೋಫಿಯ ಮೇಲೆ ಮಿಚೆಲ್ ಮಾರ್ಷ್ ಕಾಲಿಟ್ಟಿರುವ ಫೋಟೋ ವೈರಲ್ ಆಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಶಮಿ, ನನಗೆ ನೋವಾಗಿದೆ. ವಿಶ್ವದ ಎಲ್ಲಾ ತಂಡಗಳು ಈ ಟ್ರೋಫಿಗಾಗಿ ಕಾದಾಡುತ್ತವೆ. ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಲು ಬಯಸುತ್ತಾರೆ. ಆದರೆ ಅದೇ ಟ್ರೋಫಿಯ ಮೇಲೆ ಕಾಲು ಇಡುವುದು ಬೇಸರ ತರಿಸಿದೆ ಎಂದು ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Whats_app_banner