Mohammed Shami: ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  Mohammed Shami: ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್

Mohammed Shami: ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್

Mohammed Shami: 2023ರ ಏಕದಿನ ವಿಶ್ವಕಪ್ ನಂತರ ಮೈದಾನದ ಹೊರಗಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ತನ್ನ ಫಿಟ್​ನೆಸ್​ಗಾಗಿ ವಿಶೇಷ ಆಹಾರ ಕ್ರಮವನ್ನು ಪ್ರಾರಂಭಿಸಿದ್ದಾರೆ.

ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್
ನೆಚ್ಚಿನ ಬಿರಿಯಾನಿಯನ್ನೇ ತಿನ್ನುವುದನ್ನ ಬಿಟ್ಟ ಮೊಹಮ್ಮದ್ ಶಮಿ; ಇದು ಸ್ಟಾರ್ ವೇಗಿಯ ಡಯೆಟ್ ಪ್ಲಾನ್

2023ರ ಏಕದಿನ ವಿಶ್ವಕಪ್​ನಲ್ಲಿ (ODI World Cup 2023) ಗಾಯಗೊಂಡಿದ್ದ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) ಅವರು ಒಂದು ವರ್ಷದ ಬಳಿಕ ಚೇತರಿಕೆ ಕಂಡಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್​ನತ್ತ ಇನ್ನೂ ಮುಖ ಮಾಡಿಲ್ಲ. ದೇಶೀಯ ಕ್ರಿಕೆಟ್​​ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ (SMAT) ಪಶ್ಚಿಮ ಬಂಗಾಳ ಪರ ಕಣಕ್ಕಿಳಿದು ಅದ್ಭುತ ಪ್ರದರ್ಶನ ನೀಡುತ್ತಿರುವ ಅವರು ಶಮಿ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೂಚನೆಯಂತೆ​ ತನ್ನ ಫಿಟ್​ನೆಸ್​ಗಾಗಿ ವಿಶೇಷ ಆಹಾರ ಕ್ರಮವನ್ನು ಪ್ರಾರಂಭಿಸಿದ್ದಾರೆ. 

ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕೊನೆಯದಾಗಿ 2023ರ ನವೆಂಬರ್ 19 ರಂದು ಆಡಿದ್ದರು. ಈ ಟೂರ್ನಿಯಲ್ಲಿ ಗಾಯಗೊಂಡಿದ್ದ ಅವರು ಇಂಗ್ಲೆಂಡ್​ನಲ್ಲಿ ಶಸ್ತ್ರಚಿಕಿತ್ಸೆ ಪಡೆದುಕೊಂಡು 4-5 ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರು. ಚೇತರಿಕೆ ನಂತರ ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನೆಟ್ಸ್​​​ನಲ್ಲಿ ಗಂಟೆಗಟ್ಟಲೇ ಸತತ ಅಭ್ಯಾಸ ನಡೆಸಿದರು. ಪುನಃಶ್ಚೇತನ ಶಿಬಿರದಲ್ಲಿ ತೀವ್ರ ಕಸರತ್ತು ನಡೆಸಿದ್ದರು. ಆದರೆ ತೂಕ ಹೆಚ್ಚಿದ್ದ ಕಾರಣ ಇಳಿಸಿಕೊಳ್ಳಲು ಫಿಸಿಯೋ ಮತ್ತು ಕೋಚ್​ಗಳು​ ವಿಶೇಷ ಆಹಾರ ಪದ್ಧತಿಯನ್ನು ನೀಡಿದ್ದಾರೆ.

ಹಣ್ಣುಗಳನ್ನೇ ತಿನ್ನುತ್ತಿರುವ ವೇಗಿ

ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಿದ್ಧರಾಗಿರುವ ಅನುಭವಿ ಸ್ಟಾರ್ ವೇಗಿ ಎನ್​ಸಿಎ ಸೂಚನೆ ಮೇರೆಗೆ ವಿಶೇಷ ಆಹಾರ ಕ್ರಮವನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ತನ್ನನ್ನು ಸಾಬೀತುಪಡಿಸಲು ದೇಶೀಯ ಕ್ರಿಕೆಟ್​ಗೆ ಮರಳಿರುವ ಶಮಿ, ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳ ಪರ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ, ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್​ನಲ್ಲೂ ಅಬ್ಬರಿಸುತ್ತಿದ್ದಾರೆ. ಈ ನಡುವೆ ಶಮಿ ಅವರನ್ನು ಆಸೀಸ್ ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸುತ್ತಿದೆ. ಹೀಗಾಗಿ ಶಮಿ ಅವರ ಫಿಟ್ನೆಸ್ ಮೇಲೆ ಕಣ್ಣಿಡಲಾಗಿದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಫಿಸಿಯೋಗಳು ಮತ್ತು ಕೋಚ್​​ಗಳು, ಆಯ್ಕೆದಾರರ ತಂಡವು, ಶಮಿ ಆಯ್ಕೆಗೆ ಸಂಬಂಧಿಸಿ ಬಂಗಾಳ ತಂಡ ಪ್ರಯಾಣಿಸಿದ ಕಡೆಯೆಲ್ಲಾ ಸಾಗುತ್ತಿದೆ. ಇವರು ಮೊಹಮ್ಮದ್ ಶಮಿಗೆ ವಿಶೇಷ ಆಹಾರ ಹೊಂದಲು ಸಲಹೆ ನೀಡಿದ್ದಾರೆ. ಹೀಗಾಗಿ, ಈಗ ತಮ್ಮ ಆಹಾರ ಯೋಜನೆ ಬದಲಾಯಿಸಿದ್ದಾರೆ. ಹೊಸ ಆಹಾರ ಯೋಜನೆ ಪ್ರಕಾರ ಶಮಿ ಊಟ ಸಂಪೂರ್ಣವಾಗಿ ನಿಲ್ಲಿಸಿದ್ದು, ಹಣ್ಣುಗಳನ್ನಷ್ಟೇ ಮಾತ್ರ ಸೇವಿಸುತ್ತಿದ್ದಾರೆ. ಬಾಳೆಹಣ್ಣು-ಸೇಬು ಸೇವಿಸುತ್ತಿದ್ದಾರೆ.

ಬಿರಿಯಾನಿ ತಿನ್ನುವುದನ್ನು ನಿಲ್ಲಿಸಿದ ಶಮಿ

ಶಮಿ ಅವರಿಗೆ ಔತಣಕೂಟ ಸಹ ನಿರ್ಬಂಧಿಸಲಾಗಿದ್ದು, ತನ್ನ ಮೆನುವಿನಲ್ಲಿ ಬ್ರೆಡ್ ಮಾತ್ರ ಇರಲಿದೆ. ಅನ್ನ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಿರುವ ವೇಗಿ, ಮಸಾಲೆಯುಕ್ತ ಆಹಾರವನ್ನೂ ನಿಲ್ಲಿಸಿದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ಊಟ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಅವರ ಆಪ್ತ ವಲಯಗಳು ಬಹಿರಂಗಪಡಿಸಿವೆ. ಅವರ ನೆಚ್ಚಿನ ಬಿರಿಯಾನಿಯನ್ನೂ ಊಟದ ಮೆನುವಿನಿಂದ ತೆಗೆದುಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಬಂಗಾಳ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಶಮಿ, ಭಾರತ ತಂಡಕ್ಕೆ ಯಾವಾಗ ಮರಳುತ್ತಾರೆ ಎಂಬುದನ್ನು ಕಾದುನೋಡೋಣ.

Whats_app_banner