ಅವಳು ನನಗೆ ತಂಗಿ ಇದ್ದಂತೆ; ಆಶಾ ಭೋಸ್ಲೆ ಮೊಮ್ಮಗಳ ಜತೆಗೆ ಡೇಟಿಂಗ್ ವದಂತಿ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಸ್ಪಷ್ಟನೆ
Mohammed Siraj: ತಮ್ಮ ವಿರುದ್ಧ ಕೇಳಿಬಂದ ಡೇಟಿಂಗ್ ವದಂತಿಗೆ ಸಂಬಂಧಿಸಿ ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು ಜನೈ ಭೋಸ್ಲೆ ಮತ್ತು ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಮೌನ ಮುರಿದಿದ್ದಾರೆ.

ಮೊಹಭಾರತದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರು ಇತ್ತೀಚೆಗೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರೊಂದಿಗಿದ್ದ ಹಂಚಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಇದು ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಹುಟ್ಟು ಹಾಕಿತ್ತು. ಇದೀಗ ವದಂತಿಗಳ ಬಗ್ಗೆ ಜನೈ ಮತ್ತು ಸಿರಜ್ ಮೌನ ಮುರಿದಿದ್ದಾರೆ. ಗಾಳಿ ಸುದ್ದಿ ಹರಡಿದ ಬೆನ್ನಲ್ಲೇ ಇನ್ಸ್ಟಾ ಸ್ಟೋರಿಯಲ್ಲಿ ಸಿರಾಜ್ ಜತೆಗಿನ ಫೋಟೋ ಹಂಚಿಕೊಂಡು, ‘ಮೇರೆ ಪ್ಯಾರೆ ಭಾಯ್ (ನನ್ನ ಪ್ರೀತಿಯ ಸಹೋದರ)’ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಜನೈ ಹಂಚಿಕೊಂಡಿದ್ದ ಇನ್ಸ್ಟಾಗ್ರಾಂ ಸ್ಟೋರಿಯನ್ನು ಮರು ಪೋಸ್ಟ್ ಮಾಡಿದ ಸಿರಾಜ್, 'ಮೇರಿ ಬೆಹೆನ್ ಕೆ ಜೈಸಿ ಕೋಯಿ ಬೆಹ್ನಾ ನಹೀಂ. ಬಿನಾ ಇಸ್ಕೆ ಕಹೀಂ ಭೀ ಮುಝೇ ರೆಹನಾ ನಹೀಂ. ಜೈಸೆ ಹೈ ಚಾಂಡ್ ಸಿತಾರೋನ್ ಮೇ, ಮೇರಿ ಬೆಹ್ನಾ ಹೈ ಏಕ್ ಹಜಾರೋ ಮೇ (ನನ್ನ ಸಹೋದರಿಯಂತೆ ಯಾರೂ ಇಲ್ಲ. ಅವಳಿಲ್ಲದೆ ನಾನು ಎಲ್ಲಿಯೂ ಇರಲು ಬಯಸುವುದಿಲ್ಲ. ನಾನು ಅವಳಿಲ್ಲದೆ ಎಲ್ಲಿಯೂ ಇರಲು ಬಯಸುವುದಿಲ್ಲ. ಆಕಾಶದಲ್ಲಿರುವ ನಕ್ಷತ್ರಗಳಂತೆ ನನ್ನ ತಂಗಿ ಸಾವಿರಾರು ನಕ್ಷತ್ರಗಳಲ್ಲಿ ಒಬ್ಬಳು ಎಂದು ಕ್ಯಾಪ್ಶನ್ ಬರೆದಿದ್ದಾರೆ. ಇದಕ್ಕೆ ಜನೈ ಕೆಂಪು ಹೃದಯದ ಎಮೋಜಿಗಳನ್ನು ಹಾಕಿ ರಿಪ್ಲೈ ಕೊಟ್ಟಿದ್ದಾರೆ.
ವದಂತಿಗಳಿಗೆ ಕಾರಣವೇನು?
ಇತ್ತೀಚೆಗೆ ಜನೈ ಭೋಸ್ಲೆ ಅವರು ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತನ್ನ ವಿಶೇಷ ದಿನವನ್ನು ತನ್ನ ಕುಟುಂಬ ಮತ್ತು ಆಪ್ತ ಸ್ನೇ ಹಿತರೊಂದಿಗೆ ಆಚರಿಸಿದರು. ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಆಯೋಜಿಸಿದ್ದ ಗಾಯಕಿಯೂ ಆಗಿರುವ ಜನೈ, ತಮ್ಮ ಇನ್ಸ್ಟಾಗ್ರಾಂನಲ್ಲಿ ಪಾರ್ಟಿಗೆ ಸಂಬಂಧಿಸಿದ ಫೋಟೋಗಳನ್ನು ಶೇರ್ ಮಾಡಿದ್ದರು. ಕ್ರಿಕೆಟಿಗ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲದೆ, ಬಾಲಿವುಡ್ ಸೆಲೆಬ್ರಿಟಿಗಳು ಸಹ ಪಾರ್ಟಿಯಲ್ಲಿ ಭಾಗವಾಗಿದ್ದರು.
ಈ ಪೋಸ್ಟ್ನಲ್ಲಿ ನಟರಾದ ಜಾಕಿ ಶ್ರಾಫ್, ಅಭಯ್ ವರ್ಮಾ, ಆಯೆಷಾ ಖಾನ್ ಮತ್ತು ಕ್ರಿಕೆಟಿಗರಾದ ಸುಯಾಶ್ ಪ್ರಭುದೇಸಾಯಿ, ಸಿದ್ದೇಶ್ ಲಾಡ್, ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದರು. ಫೋಟೋವೊಂದರಲ್ಲಿ ಸಿರಾಜ್ ಮತ್ತು ಜನೈ ತುಂಬಾ ಆಪ್ತರಾಗಿ ಪರಸ್ಪರ ಮುಖ ನೋಡಿಕೊಳ್ಳುತ್ತಾ ನಗುತ್ತಿರುವ ಫೋಟೋ ಕಂಡ ನೆಟ್ಟಿಗರು, ಇಬ್ಬರು ಮದುವೆಯಾಗುತ್ತಾರೆ ಎಂದು ವದಂತಿ ಹಬ್ಬಿಸಿದ್ದಾರೆ. ನೀವು ಸಿರಾಜ್ ಅವರನ್ನು ಮದುವೆಯಾಗಲಿದ್ದೀರಾ? ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಜನೈ ಮತ್ತು ಸಿರಾಜ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ? ಎಂದು ಕಾಮೆಂಟ್ ಮಾಡಲಾಗಿದೆ.
ಪ್ರಸ್ತುತ ರಣಜಿ ಆಡುತ್ತಿರುವ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಫೆಬ್ರವರಿ 19ರಿಂದ ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದಿಂದ ಕೈಬಿಡಲಾಗಿದೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಅವರಿಗೆ ಅವಕಾಶ ಸಿಕ್ಕಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 20 ವಿಕೆಟ್ ಉರುಳಿಸಿದ್ದ ಸಿರಾಜ್, ರಣಜಿ ಟ್ರೋಫಿಯ ನಂತರ 18ನೇ ಆವೃತ್ತಿಯ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಲಿದ್ದಾರೆ. ಕಳೆದ ಬಾರಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಸಿರಾಜ್, ಈ ಸಲ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ.
