ಟ್ರಾವಿಸ್ ಹೆಡ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಮೊಹಮ್ಮದ್ ಸಿರಾಜ್; ಇದೆಲ್ಲಾ ಕಾಮನ್ ಎಂದ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಟ್ರಾವಿಸ್ ಹೆಡ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಮೊಹಮ್ಮದ್ ಸಿರಾಜ್; ಇದೆಲ್ಲಾ ಕಾಮನ್ ಎಂದ ರೋಹಿತ್ ಶರ್ಮಾ

ಟ್ರಾವಿಸ್ ಹೆಡ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಮೊಹಮ್ಮದ್ ಸಿರಾಜ್; ಇದೆಲ್ಲಾ ಕಾಮನ್ ಎಂದ ರೋಹಿತ್ ಶರ್ಮಾ

Mohammed Siraj: ಟ್ರಾವಿಸ್ ಹೆಡ್​ ಅವರೊಂದಿಗೆ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ನಡುವಿನ ಸಂಪೂರ್ಣ ವಿವಾದಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.

ಮೊಹಮ್ಮದ್ ಸಿರಾಜ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಟ್ರಾವಿಸ್ ಹೆಡ್; ಇಬ್ಬರ ನಡುವೆ ಜಟಾಪಟಿ ನಡೆದಿದ್ದು ನಿಜ ಎಂದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್ ಜೊತೆಗಿನ ವಿವಾದಕ್ಕೆ ತೆರೆ ಎಳೆದ ಟ್ರಾವಿಸ್ ಹೆಡ್; ಇಬ್ಬರ ನಡುವೆ ಜಟಾಪಟಿ ನಡೆದಿದ್ದು ನಿಜ ಎಂದ ರೋಹಿತ್ ಶರ್ಮಾ

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್​ ಟ್ರಾವಿಸ್ ಹೆಡ್​ ಅವರ ನಡುವಿನ ವಿವಾದ ಸುಖಾಂತ್ಯಗೊಂಡಿದೆ. ಪಂದ್ಯದ 2ನೇ ದಿನದಂದು ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಇದೀಗ ಇಬ್ಬರು ಒಬ್ಬರಿಗೊಬ್ಬರು ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಆಸೀಸ್​ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮಿಂಚುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಯಾರ್ಕರ್​ ಮೂಲಕ ಕ್ಲೀನ್​ ಬೋಲ್ಡ್ ಮಾಡಿದ ಮೊಹಮ್ಮದ್ ಸಿರಾಜ್, ಹೋಯ್ತಾ ಇರು ಎನ್ನುವಂತೆ ಕೈ ಸನ್ನೆ ಮಾಡಿದ್ದರು. ಬಳಿಕ ಹೆಡ್​ ಕೂಡ ಗೊಣಗುತ್ತಾ ಹೊರನಡೆದಿದ್ದರು.

2ನೇ ದಿನದಾಟ ಮುಕ್ತಾಯಗೊಂಡ ಬಳಿಕ ಮಾತನಾಡಿದ್ದ ಟ್ರಾವಿಸ್, ನಾನು ಚೆನ್ನಾಗಿ ಬೌಲಿಂಗ್ ಎಂದು ಹೇಳಿದ್ದೆ. ಆದರೆ ಅದನ್ನೇ ಅವರು ತಪ್ಪಾಗಿ ಅರ್ಥೈಸಿಕೊಂಡರು ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಡ್​​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೆಡ್​ ಸುಳ್ಳು ಹೇಳುತ್ತಿದ್ದಾರೆ. ಹೆಡ್​ ಲಿಪ್ ಸಿಂಕ್ ನೋಡಿದರೆ ಚೆನ್ನಾಗಿ ಬೌಲ್ ಮಾಡಿದ್ದಾರೆ ಎನ್ನುವಂತಿಲ್ಲ. ಅದು ಶುದ್ಧ ಸುಳ್ಳು ಎಂದು ನೆಟ್ಟಿಗೆರು ಆಕ್ರೋಶ ವ್ಯಕ್ತಪಡಿಸಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಬಳಿಕವೂ ಇದೇ ವಿಚಾರವಾಗಿ ಮಾತನಾಡಿದ ಹೆಡ್, ಅದೆಲ್ಲವೂ ತಪ್ಪು ತಿಳುವಳಿಕೆ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ.

ಕ್ಷಮೆಯಾಚಿಸಿದ ಸಿರಾಜ್

ಮೂರನೇ ದಿನದಂದು ಬ್ಯಾಟಿಂಗ್ ನಡೆಸಲು ಕಣಕ್ಕಿಳಿದ ಮೊಹಮ್ಮದ್ ಸಿರಾಜ್, ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಟ್ರಾವಿಸ್ ಹೆಡ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ನನ್ನದೇ ತಪ್ಪಿದೆ. ತಪ್ಪಾಗಿ ಅರ್ಥೈಸಿಕೊಂಡು ಅನಗತ್ಯವಾಗಿ ಮಾತನಾಡಿದೆ. ಕ್ಷಮಿಸಿ ಎಂದು ಸಿರಾಜ್, ಹೆಡ್​ಗೆ ಹೇಳಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಪಂದ್ಯದ ನಂತರವೂ ಇಬ್ಬರು ಪರಸ್ಪರ ಹಗ್ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಸಿರಾಜ್ ಕ್ರೀಡಾಸ್ಪೂರ್ತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದರೊಂದಿಗೆ ಇಬ್ಬರ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ.

ರೋಹಿತ್ ಶರ್ಮಾ ಪ್ರತಿಕ್ರಿಯೆ

ಸಿರಾಜ್-ಹೆಡ್ ನಡುವೆ ನಡೆದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ರೋಹಿತ್​ ಶರ್ಮಾ, ಇಬ್ಬರನ್ನೂ ಹೊಗಳಿದ್ದಾರೆ. ಸಿರಾಜ್ ಅದ್ಭುತವಾಗಿ ಬೌಲಿಂಗ್‌ ಮಾಡಿದರೆ, ಹೆಡ್​ ಅವರು ಅದ್ಭುತವಾಗಿ ಬ್ಯಾಟಿಂಗ್ ನಡೆಸಿದರು. ಆಟದಲ್ಲಿ ಇಂತಹ ಘಟನೆಗಳು ಸಾಮಾನ್ಯ. ನಾನು ಸ್ಲಿಪ್‌ನಲ್ಲಿ ನಿಂತಿದ್ದೆ. ಇಬ್ಬರ ನಡುವೆ ಏನು ವಿನಿಮಯವಾಗಿದೆ ಎಂದು ನನಗೆ ತಿಳಿದಿಲ್ಲ. ಅವರಿಬ್ಬರಲ್ಲಿ ನಿಸ್ಸಂಶಯವಾಗಿ ಕೆಲವು ಪದಗಳು ಬದಲಾಗಿವೆ. ಏನು ಹೇಳಲಾಗಿದೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಟೆಸ್ಟ್​​​ನಲ್ಲಿ ಸೋಲು ಹೀನಾಯ ಸೋಲು ಕಂಡಿದೆ.

ಅಡಿಲೇಡ್​ ಟೆಸ್ಟ್​​ನ ಸಂಕ್ಷಿಪ್ತ ಸ್ಕೋರ್​

ಮೊದಲ ಇನ್ನಿಂಗ್ಸ್​​ನಲ್ಲಿ ಭಾರತ ತಂಡ - 180/10

ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡ - 337/10 (157 ರನ್​ಗಳ ಮುನ್ನಡೆ)

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ - 175/10 (19 ರನ್​ ಗುರಿ)

ಎರಡನೇ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ - 19/00 (10 ವಿಕೆಟ್​ಗಳ ಗೆಲುವು)

Whats_app_banner