ಡ್ಯಾರಿಲ್ ಮಿಚೆಲ್‌ಗೆ ಅವಮಾನಿಸಿದ ಎಂಎಸ್ ಧೋನಿ; ಸಿಂಗಲ್ ನಿರಾಕರಿಸಿದ ಮಾಹಿಯನ್ನು ಸ್ವಾರ್ಥಿ ಎಂದು ಜರಿದ ಫ್ಯಾನ್ಸ್
MS Dhoni : ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ತೋರಿದ ದುರ್ವತನೆಯ ಹಿನ್ನೆಲೆ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ (MS Dhoni), ಸಹ ಆಟಗಾರ ಡ್ಯಾರಿಲ್ ಮಿಚೆಲ್‌ಗೆ (Daryl Mitchell) ಅವಮಾನಿಸಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಫಿನಿಷರ್ ಎನಿಸಿರುವ ಮಾಹಿ, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಸಿಎಸ್ಕೆ ಮಾಜಿ ನಾಯಕ ತೋರಿದ ದುರ್ವತನೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತ್ತು. ಹೀಗಾಗಿ ಪಂಜಾಬ್ಗೆ 20 ಓವರ್ಗಳಲ್ಲಿ 163 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತು. 17.5 ಓವರ್ಗಳಲ್ಲೇ ಪಿಬಿಕೆಎಸ್ ಚೇಸ್ ಮಾಡಿ ಗೆದ್ದಿತು.
ಸಿಂಗಲ್ ನಿರಾಕರಿಸಿದ ಎಂಎಸ್ ಧೋನಿ
ಸಿಎಸ್ಕೆ ತನ್ನ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಮಾಹಿ, ಅರ್ಷದೀಪ್ ಬೌಲಿಂಗ್ನಲ್ಲಿ ಬೌಂಡರಿ ಸಿಡಿಸಿದ್ದರು. ನಂತರ ಎರಡು ಎಸೆತಗಳನ್ನು ಡಾಟ್ ಮಾಡಿದರು. ಆದರೆ ಮೂರನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಅದು ಸಿಕ್ಸರ್ ಅಥವಾ ಬೌಂಡರಿ ಹೋಗಲಿಲ್ಲ. ಸೀದಾ ಫೀಲ್ಡರ್ ಕೈ ಸೇರಿತ್ತು. ಆದರೆ ಸುಲಭವಾದ ರನ್ ಗಳಿಸಲು ಅವಕಾಶ ಇತ್ತು. ಆದರೆ ಧೋನಿ ಸಿಂಗಲ್ ರನ್ ನಿರಾಕರಿಸಿ ಮಿಚೆಲ್‌ಗೆ ಅವಮಾನಿಸಿದರು.
ಇದೇ ವೇಳೆ ಸಿಂಗಲ್ಗಾಗಿ ಡ್ಯಾರಿಲ್ ಮಿಚೆಲ್ ಅವರು ಸ್ಟ್ರೈಕರ್ನ ತುದಿಗೆ ಓಡಿದರು. ಆದರೆ ಎಂಎಸ್ ಧೋನಿ, ನಿಂತಲ್ಲೆ ನಿಂತು ವಾಪಸ್ ಹೋಗುವಂತೆ ಕಳುಹಿಸಿದರು. ಇದರಿಂದ ಡ್ಯಾರಿಲ್ ಮಿಚೆಲ್ ನಾನ್ ಸ್ಟ್ರೈಕರ್ ಸ್ಥಾನಕ್ಕೆ ಮತ್ತೆ ಮರಳಿದರು. ಈ ವೇಳೆ ಕೂದಲೆಳೆಯ ಅಂತರದಲ್ಲಿ ರನೌಟ್ ಆಗುವನ್ನು ತಪ್ಪಿಸಿಕೊಂಡರು. ನಾಲ್ಕನೇ ಎಸೆತ ಕೂಡ ಡಾಟ್ ಮಾಡಿದ ಧೋನಿ, 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಧೋನಿ, ರನೌಟ್ ಆಗಿ ಹೊರ ನಡೆದರು.
ನೀನು ಸ್ವಾರ್ಥಿ; ಅಭಿಮಾನಿಗಳಿಂದ ಆಕ್ರೋಶ
ಬ್ಯಾಟಿಂಗ್ ವೇಳೆ ಧೋನಿ ತೋರಿದ ವರ್ತನೆಯಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿ ಅವರು ಅದ್ಬುತ ಆಟಗಾರನನ್ನು ಅವಮಾನಿಸಿದ್ದಾರೆ. ಅಂತಹ ಆಟಗಾರನ ಸಿಂಗಲ್ ರನ್ ನಿರಾಕರಿಸಿದ್ದು ತಪ್ಪು. ಅವರೇ 2 ರನ್ ಓಡಿದ್ದಾರೆ. ಧೋನಿ ಆಗಿರುವ ಕಾರಣ ಅಭಿಮಾನಿಗಳು ಸುಮ್ಮನಿದ್ದಾರೆ. ಬೇರೆ ಆಟಗಾರರು ಇದ್ದಿದ್ದರೆ, ಗ್ರಹಚಾರ ಬಿಡಿಸಲಾಗುತ್ತಿತ್ತು ಎಂದು ಕೆಲವರು ಹೇಳಿದ್ದರೆ, ಇನ್ನೂ ಕೆಲವರು ಇದನ್ನೇ ಸ್ವಾರ್ಥ ಎನ್ನುವುದು ಎಂದು ಕಿಡಿಕಾರಿದ್ದಾರೆ.
ಇಡೀ ನ್ಯೂಜಿಲೆಂಡ್ಗೆ ಅವಮಾನ, ಧೋನಿಗಿಂತ ಸ್ವಾರ್ಥಿ ಯಾರಿಲ್ಲ
ಡ್ಯಾರಿಲ್ ಮಿಚೆಲ್ ಅವರೊಂದಿಗೆ ಸಿಂಗಲ್ ನಿರಾಕರಿಸಿದ್ದು, ಅತ್ಯಂತ ಮುಜುಗರದ ವಿಷಯ. ಇದು ಮಿಚೆಲ್‌ಗೆ ಮಾತ್ರವಲ್ಲ, ಇಡೀ ನ್ಯೂಜಿಲೆಂಡ್ ಕ್ರಿಕೆಟ್ಗೆ ಅವಮಾನ ಮಾಡಿದಂತೆ ಎಂದು ಮಾಜಿ ನಾಯಕನ ವಿರುದ್ಧ ಕಿಡಿಕಾರಿದ್ದಾರೆ. ನಿಮಗಿಂತ ಸ್ವಾರ್ಥದ ಆಟಗಾರ ಮತ್ತೊಬ್ಬರಿಲ್ಲ. ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದರೆ ಸಾಲದು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.
ಧೋನಿ ಸಿಂಗಲ್ ನಿರಾಕರಿಸಲು ಕಾರಣ ಇಲ್ಲಿದೆ
ಎಂಎಸ್ ಧೋನಿ ಸಿಂಗಲ್ ತೆಗೆದುಕೊಳ್ಳದಿರಲು ಕಾರಣ ಇದೆ. ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಆಗಿದೆ. ಹಾಗಾಗಿ, ತಾನು ಕ್ರೀಸ್ನಲ್ಲಿ ಉಳಿದು ತನ್ನ ನೆಚ್ಚಿನ ಅಭಿಮಾನಿಗಳನ್ನು ರಂಜಿಸುವ ಉದ್ದೇಶ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಪ್ರತಿ ಬಾರಿ ಕೊನೆಯ ಎರಡು ಓವರ್ಗಳಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. ಹೀಗಾಗಿ ಮಿಚೆಲ್ ಸಿಂಗಲ್ ನಿರಾಕರಿಸಿದ್ದಾರೆ.
