Watch: ಅನಂತ್-ರಾಧಿಕಾ ಪ್ರಿ-ವೆಡ್ಡಿಂಗ್ನಲ್ಲಿ ಎಂಎಸ್ ಧೋನಿ ದಾಂಡಿಯಾ ನೃತ್ಯ; ಪತ್ನಿ ಸಾಕ್ಷಿ, ಡ್ವೇನ್ ಬ್ರಾವೋ ಸಾಥ್
MS Dhoni : ಮುಕೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಸಮಾರಂಭದಲ್ಲಿ ಎಂಎಸ್ ಧೋನಿ ದಾಂಡಿಯಾ ಆಡುವ ಮೂಲಕ ಗಮನ ಸೆಳೆದಿದ್ದಾರೆ. ದಾಂಡಿಯಾ ಅಂದರೆ ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ.
ಗುಜರಾತ್‍ನ ಜಾಮ್‌ನಗರದಲ್ಲಿ ನಡೆಯುತ್ತಿರುವ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ) ಮತ್ತು ರಾಧಿಕಾ ಮರ್ಚೆಂಟ್ (Anant Ambani Radhika Merchant) ಅವರ ವಿವಾಹ ಪೂರ್ವ ಸಮಾರಂಭಕ್ಕೆ ದೇಶ-ವಿದೇಶಗಳ ಗಣ್ಯರು ಹಾಜರಿ ಹಾಕಿದ್ದಾರೆ. ಅದರಲ್ಲೂ ಕ್ರಿಕೆಟಿಗ ಕಲವರ ಹೆಚ್ಚಾಗಿರುವುದು ವಿಶೇಷ. ರೋಹಿತ್ ಶರ್ಮಾ, ಎಂಎಸ್ ಧೋನಿ, ಕೀರಾನ್ ಪೊಲಾರ್ಡ್, ಸಚಿನ್ ತೆಂಡೂಲ್ಕರ್, ಡ್ವೇನ್ ಬ್ರಾವೋ ಸೇರಿದಂತೆ ಪ್ರಮುಖರೇ ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಅನಂತ್-ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂಭ್ರಮ ಇಡೀ ದೇಶವನ್ನೇ ಆವರಿಸಿಕೊಂಡಿದೆ. ಅದ್ಧೂರಿ ಸಮಾರಂಭದಲ್ಲಿ ಕ್ರೀಡೆ ಮತ್ತು ಸಿನಿಮಾ ಕಲಾವಿದರು ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಸದಾ ಶಾಂತವಾಗಿರುವ ಧೋನಿ ಸಮಾರಂಭದಲ್ಲಿ ದಾಂಡಿಯಾ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಭಾರಿ ಆಗುತ್ತಿದೆ. ದಾಂಡಿಯಾ ಅಂದರೆ ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ.
ಧೋನಿ ಭರ್ಜರಿ ನೃತ್ಯ
ಧೋನಿ ಅವರು ಪತ್ನಿ ಸಾಕ್ಷಿ ಸಿಂಗ್ ಮತ್ತು ಮಾಜಿ ಕ್ರಿಕೆಟಿಗ ಡ್ವೇನ್ ಬ್ರಾವೋ ಒಟ್ಟಿಗೆ ದಾಂಡಿಯಾ ಆಡಿದ್ದಾರೆ. ಧೋನಿಯದ್ದು ಮಾತ್ರವಲ್ಲ ಹಲವು ಕ್ರಿಕೆಟಿಗರ ವಿಡಿಯೋ, ಫೋಟೋಗಳು ಕೂಡ ನೆಟ್ಸ್ನಲ್ಲಿ ಹರಿದಾಡುತ್ತಿವೆ. ಭಾರತದ ಮಾಜಿ ನಾಯಕ ಧೋನಿ ಗುಜರಾತಿ ಜಾನಪದ ನೃತ್ಯ ದಾಂಡಿಯಾಗೆ ಹೆಜ್ಜೆ ಹಾಕಿ ಆನಂದಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಅನಂತ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ಗೌತಮ್ ಅದಾನಿ ಮತ್ತು ಕುಮಾರ್ ಮಂಗಳಂ ಬಿರ್ಲಾ ಸೇರಿದಂತೆ ಅನೇಕ ಕ್ರಿಕೆಟಿಗರು ಮತ್ತು ಬಾಲಿವುಡ್ ಚಲನಚಿತ್ರ ತಾರೆಯರು ಭಾಗವಹಿಸಿದ್ದಾರೆ. ಧೋನಿ ಬಾಲಿವುಡ್ ತಾರೆಯರಾದ ಸಲ್ಮಾನ್ ಮತ್ತು ರಣವೀರ್ ಸಿಂಗ್, ತೆಲುಗು ಸಿನಿಮಾ ನಟ ರಾಮ್ ಚರಣ್ ಜೊತೆ ಕೂಡ ಸಂವಾದ ನಡೆಸಿದ್ದು ಗಮನ ಸೆಳೆಯಿತು.
ಧೋನಿ 2024ರ ಐಪಿಎಲ್ಗೆ ಸಜ್ಜಾಗುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಾಖಲೆಯ ಆರನೇ ಪ್ರಶಸ್ತಿ ಗೆದ್ದುಕೊಡಲು ಸಿದ್ಧರಾಗಿದ್ದಾರೆ. 2023ರ ಸೀಸನ್ನಲ್ಲಿ ಸಿಎಸ್ಕೆಗೆ ಟ್ರೋಫಿ ಗೆದ್ದುಕೊಟ್ಟ ಮಾಹಿ, ಈ ಸಮಾರಂಭದ ನಂತರ ಯಲ್ಲೋ ಆರ್ಮಿ ತರಬೇತಿ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಈಗಾಗಲೇ ಚೆನ್ನೈ ತರಬೇತಿ ಶಿಬಿರ ಆರಂಭವಾಗಿದ್ದು, ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ.
ದೀಪಕ್ ಚಹಾರ್, ಋತುರಾಜ್ ಗಾಯಕ್ವಾಡ್, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ನಿಶಾಂತ್ ಸಿಂಧು ಮತ್ತು ಶೇಕ್ ರಶೀದ್ ಸೇರಿದಂತೆ ಪ್ರಮುಖರು ಈಗಾಗಲೇ ಶಿಬಿರದಲ್ಲಿದ್ದಾರೆ. ಸೂಪರ್ ಕಿಂಗ್ಸ್ ತಮ್ಮ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಈ ಆವೃತ್ತಿಯ ನಂತರ ಧೋನಿ ಕ್ರಿಕೆಟ್ಗೆ ವಿದಾಯ ಹೇಳಬಹುದು ಎನ್ನಲಾಗುತ್ತಿದೆ. 2022ರ ಆವೃತ್ತಿಯ ನಂತರ ಐಪಿಎಲ್‌ನಿಂದ ನಿವೃತ್ತರಾದ ಬ್ರಾವೋ ಮತ್ತೆ ಫ್ರಾಂಚೈಸಿಯ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಎಂಎಸ್ ಧೋನಿ, ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮಥೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.