ಋತುರಾಜ್ ಗಾಯಕ್ವಾಡ್ ಐಪಿಎಲ್​ನಿಂದ ಔಟ್, ಸಿಎಸ್​ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್
ಕನ್ನಡ ಸುದ್ದಿ  /  ಕ್ರಿಕೆಟ್  /  ಋತುರಾಜ್ ಗಾಯಕ್ವಾಡ್ ಐಪಿಎಲ್​ನಿಂದ ಔಟ್, ಸಿಎಸ್​ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್

ಋತುರಾಜ್ ಗಾಯಕ್ವಾಡ್ ಐಪಿಎಲ್​ನಿಂದ ಔಟ್, ಸಿಎಸ್​ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್

MS Dhoni: ಋತುರಾಜ್ ಗಾಯಕ್ವಾಡ್ ಗಾಯಗೊಂಡು 2025ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಎಂಎಸ್ ಧೋನಿ ನೇಮಕಗೊಂಡಿದ್ದಾರೆ.

ಋತುರಾಜ್ ಗಾಯಕ್ವಾಡ್ ಔಟ್, ಸಿಎಸ್​ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್
ಋತುರಾಜ್ ಗಾಯಕ್ವಾಡ್ ಔಟ್, ಸಿಎಸ್​ಕೆಗೆ ಮತ್ತೆ ಎಂಎಸ್ ಧೋನಿ ನಾಯಕ; 6ನೇ ಟ್ರೋಫಿ ಲೋಡಿಂಗ್ (PTI)

ಮಹೇಂದ್ರ ಸಿಂಗ್ ಧೋನಿ ಅವರು ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಮೊಣಕೈ ಮುರಿತದ ಕಾರಣ ಋತುರಾಜ್ ಗಾಯಕ್ವಾಡ್ ಅವರು ಇಡೀ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ಚೆನ್ನೈ ತಂಡವನ್ನು ಮಾಹಿ ಮೂರನೇ ತಂಡವನ್ನು ಮುನ್ನಡೆಸಲಿದ್ದಾರೆ. ಸತತ ನಾಲ್ಕು ಸೋಲು ಕಂಡಿರುವ ಸಿಎಸ್​ಕೆಗೆ ತನ್ನ ಮುಂದಿನ ಪಂದ್ಯಗಳಿಗೂ ಮುನ್ನ ಹೊಸ ಜೋಶ್ ಸಿಕ್ಕಿದೆ. ಏಪ್ರಿಲ್ 11ರಂದು ನಡೆಯುವ ಪಂದ್ಯಕ್ಕೆ ಧೋನಿ ನಾಯಕತ್ವ ವಹಿಸಲಿದ್ದಾರೆ. ಇದರ ಬೆನ್ನಲ್ಲೇ 6ನೇ ಟ್ರೋಫಿ ಲೋಡಿಂಗ್ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

2025ರಲ್ಲಿ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಯೆಲ್ಲೋ ಆರ್ಮಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ ಸತತ ನಾಲ್ಕರಲ್ಲಿ ಮಕಾಡೆ ಮಲಗಿದೆ. ಪರಿಣಾಮ ಕೇವಲ 2 ಅಂಕ ಸಂಪಾದಿಸಿ 9ನೇ ಸ್ಥಾನದಲ್ಲಿದೆ. ಇದೀಗ ಮಾಹಿ ನಾಯಕತ್ವದಲ್ಲಿ ಏಪ್ರಿಲ್ 11 ರಂದು ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳುವ ಕನಸಿನಲ್ಲಿದೆ. ಮತ್ತೊಂದೆಡೆ ಧೋನಿಗೆ ನಾಯಕತ್ವ ನೀಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದೆ. ರಿಟೈರ್​ಮೆಂಟ್ ವಯಸ್ಸಲ್ಲಿ ಅವರಿಗೆ ಕ್ಯಾಪ್ಟನ್ಸಿ ಕೊಡುವ ಅವಶ್ಯತೆ ಇರಲಿಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯ.

2024ರಲ್ಲಿ ಋತುರಾಜ್​ಗೆ ನಾಯಕತ್ವ ಹಸ್ತಾಂತರ

2024ರ ಐಪಿಎಲ್​ಗೂ ಮುನ್ನ ಎಂಎಸ್ ಧೋನಿ ಧೋನಿ ನಾಯಕತ್ವದಿಂದ ಕೆಳಗಿಳಿದು ಋತುರಾಜ್​ಗೆ ಹಸ್ತಾಂತರಿಸಿದ್ದರು. ಆದರೆ ಕಳೆದ ವರ್ಷ ಫ್ರಾಂಚೈಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿತ್ತು. ಹೀಗಾಗಿ, ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ 5 ಬಾರಿಯ ಚಾಂಪಿಯನ್‌ ತಂಡವು ಐದು ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಭಯಾನಕ ಆರಂಭ ಪಡೆದಿದೆ. 2022ರಲ್ಲಿ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ರವೀಂದ್ರ ಜಡೇಜಾಗೆ ನಾಯಕತ್ವ ವಹಿಸಲಾಗಿತ್ತು. ಆದರೆ ಒತ್ತಡಕ್ಕೆ ಒಳಗಾಗಿದ್ದ ಜಡ್ಡು ಕಳಪೆ ಪ್ರದರ್ಶನ ನೀಡಿದರು. ಪರಿಣಾಮ ಅವರನ್ನು ನಾಯಕತ್ವದಿಂದ ಕಿತ್ತು ಹಾಕಲಾಯಿತು. ಟೂರ್ನಿ ಮಧ್ಯದಲ್ಲೇ ಧೋನಿ ಜವಾಜ್ದಾರಿ ವಹಿಸಿಕೊಂಡಿದ್ದರು.

2023ರಲ್ಲಿ ಮತ್ತೆ ನಾಯಕನಾಗಿದ್ದ ಧೋನಿ ಆ ವರ್ಷ ಟ್ರೋಫಿ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದರು. ಆದರೆ 2024ರ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಧೋನಿ ಮತ್ತೆ ನಾಯಕತ್ವ ತ್ಯಜಿಸಿದರು. ಲೀಗ್ ಇತಿಹಾಸದಲ್ಲಿ ಧೋನಿ ಜಂಟಿ ಅತ್ಯಂತ ಯಶಸ್ವಿ ನಾಯಕರಾಗಿದ್ದು, ಐದು ಪ್ರಶಸ್ತಿಗಳನ್ನು ತಮ್ಮ ಹೆಸರಿನಲ್ಲಿ ಗೆದ್ದಿದ್ದಾರೆ. ಧೋನಿ 2010, 2011, 2018, 2021 ಮತ್ತು 2023 ರಲ್ಲಿ ಸಿಎಸ್‌ಕೆಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಇದೀಗ 6ನೇ ಟ್ರೋಫಿ ಗೆಲುವಿನತ್ತ ಮುನ್ನಡೆಸಲು ಸಜ್ಜಾಗಿದ್ದಾರೆ. ಭಾರತದ ಮಾಜಿ ನಾಯಕ 2008 ರಿಂದ ಇಲ್ಲಿಯ ತನಕ ಸಿಎಸ್​ಕೆ ತಂಡದ ಪರವೇ ಆಡುತ್ತಿದ್ದಾರೆ. ಆದರೆ 2016 ಮತ್ತು 2017ರಲ್ಲಿ ಸಿಎಸ್​ಕೆ ಬ್ಯಾನ್ ಆಗಿತ್ತು. ಆಗ ಪುಣೆ ಸೂಪರ್​ ಜೈಂಟ್ಸ್ ತಂಡದ ಪರ ಆಡಿದ್ದರು.

ಎಂಎಸ್ ಧೋನಿ ನಾಯಕತ್ವದ ದಾಖಲೆ

ಐಪಿಎಲ್ ಇತಿಹಾಸದಲ್ಲಿ ಮಾಹಿ ಅತ್ಯಂತ ಯಶಸ್ವಿ ನಾಯಕ. ಲೀಗ್​ನಲ್ಲಿ 226 ಪಂದ್ಯಗಳನ್ನು ಮುನ್ನಡೆಸಿರುವ ವಿಕೆಟ್ ಕೀಪರ್ 133 ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಆದರೆ 91ರಲ್ಲಿ ಸೋಲಿನ ರುಚಿಯೂ ನೋಡಿದ್ದಾರೆ. ಅವರ ನಾಯಕತ್ವದಲ್ಲಿ 2 ಪಂದ್ಯಗಳು ಮಾತ್ರ ಫಲಿತಾಂಶ ಕಾಣದೆ ರದ್ದಾಗಿವೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner