700 ವರ್ಷಗಳ ಹಳೆಯ ದೇವಸ್ಥಾನಕ್ಕೆ ಎಂಎಸ್ ಧೋನಿ ಭೇಟಿ, 2025ರ ಐಪಿಎಲ್ಗೂ ಮುನ್ನ ವಿಶೇಷ ಪೂಜೆ, ವಿಡಿಯೋ ವೈರಲ್
MS Dhoni: 700 ವರ್ಷಗಳ ಹಳೆಯ ದೇವಸ್ಥಾನಕ್ಕೆ ಎಂಎಸ್ ಧೋನಿ ಅವರು ಭೇಟಿ ನೀಡಿದ್ದು, 2025ರ ಐಪಿಎಲ್ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2025) ಭರ್ಜರಿ ಸಿದ್ಧತೆ ನಡೆಸುತ್ತಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಇತ್ತೀಚೆಗೆ 700 ವರ್ಷಗಳಷ್ಟು ಹಳೆಯ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ. ಅಭಿಮಾನಿಗಳ ಆರಾಧ್ಯ ದೈವವಾಗಿರುವ ಮಾಹಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿದ್ದರೂ ತನ್ನ ಕ್ರೇಜ್ ಮೊದಲಿನಂತೆಯೇ ಉಳಿಸಿಕೊಂಡಿರುವುದು ವಿಶೇಷ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ, ಐಪಿಎಲ್ಗೂ ಮುನ್ನ ದೇವಸ್ಥಾನವೊಂದಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಎಂಎಸ್ ಧೋನಿ, 2025ರ ಮಿಲಿಯನ್ ಡಾಲರ್ ಟೂರ್ನಿಗೂ ಮುನ್ನ ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಏತನ್ಮಧ್ಯೆ, ರಾಂಚಿಯಲ್ಲಿರುವ 700 ವರ್ಷಗಳಷ್ಟು ಹಳೆಯದಾದ ದಿಯುರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ದೇವರ ದರ್ಶನ ಪಡೆದ ಧೋನಿ, ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೈಯಲ್ಲಿ ಕೆಂಪು ಬಟ್ಟೆ ಹಿಡಿದಿರುವ ಮಾಹಿ, ಹಣೆಯಲ್ಲಿ ತಿಲಕವನ್ನೂ ಇಟ್ಟಿರುವುದನ್ನು ನೋಡಬಹುದು.
ಧೋನಿ ಅವರು ದಿಯುರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರು ಈ ಪುರಾತನ ದೇವಾಲಯಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಸಿಎಸ್ಕೆ ಉಳಿಸಿಕೊಂಡಿತು. 4 ಕೋಟಿ ರೂಪಾಯಿಗೆ ಅನ್‌ಕ್ಯಾಪ್ಡ್ ಆಟಗಾರನಾಗಿ ಧೋನಿ ಅವರನ್ನು ಫ್ರಾಂಚೈಸಿ ಉಳಿಸಿಕೊಂಡಿದೆ. ಹೀಗಾಗಿ, ಧೋನಿ ಅವರನ್ನು ಮತ್ತೊಮ್ಮೆ ಹಳದಿ ಜೆರ್ಸಿಯಲ್ಲಿ ಆಡುವುದನ್ನು ನೋಡುವ ಅವಕಾಶ ಸಿಕ್ಕಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
2024ರ ಐಪಿಎಲ್ನಲ್ಲಿ ಧೋನಿ ಹೆಚ್ಚು ರನ್ ಗಳಿಸದಿದ್ದರೂ, ಅವರು ತಮ್ಮ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ, ಮುಂಬರುವ ಐಪಿಎಲ್ ಸೀಸನ್ ನಲ್ಲಿ ಧೋನಿ ಯಾವ ರೀತಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ನಾನು ಮೊದಲಿನಂತೆ ಫಿಟ್ ಆಗಿಲ್ಲ ಎಂದಿದ್ದ ಧೋನಿ
ನಾನು ಮೊದಲಿನಂತೆ ಫಿಟ್ ಆಗಿಲ್ಲ. ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಕುರಿತು ಈಗ ಸಾಕಷ್ಟು ಪ್ರಯತ್ನಗಳ ಅಗತ್ಯವಿದೆ. ನಾನು ಕ್ರಿಕೆಟ್‌ಗೆ ಫಿಟ್ ಆಗಲು ನಿರ್ದಿಷ್ಟವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಸರಿಯಾದ ಆಹಾರವನ್ನು ತಿನ್ನುವುದು ಮತ್ತು ಜಿಮ್‌ಗೆ ಹೋಗುವ ನಡುವೆ ನನಗೆ ಸಹಾಯ ಮಾಡುವುದು ಬಹಳಷ್ಟು ಕ್ರೀಡೆಗಳನ್ನು ಆಡುತ್ತಿದೆ ಎಂದು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಧೋನಿ ಹೇಳಿದ್ದರು. 43 ವರ್ಷದ ಧೋನಿ ವಯಸ್ಸು ತನ್ನ ದೇಹದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಸಿಎಸ್ಕೆ ಐಪಿಎಲ್ 2025 ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡೆವೊನ್ ಕಾನ್ವೆ (6.25 ಕೋಟಿ), ರಾಹುಲ್ ತ್ರಿಪಾಠಿ (ರೂ. 3.40 ಕೋಟಿ), ರಚಿನ್ ರವೀಂದ್ರ (ರೂ. 4 ಕೋಟಿ), ಆರ್. ಅಶ್ವಿನ್ (ರೂ. 9.75 ಕೋಟಿ), ಖಲೀಲ್ ಅಹ್ಮದ್ (ರೂ. 4.80 ಕೋಟಿ), ನೂರ್ ಅಹ್ಮದ್ (10 ಕೋಟಿ ರೂ.), ವಿಜಯ್ ಶಂಕರ್ (ರೂ. 1.20 ಕೋಟಿ), ಸ್ಯಾಮ್ ಕರನ್ (ರೂ. 2.40 ಕೋಟಿ), ಶೇಕ್ ರಶೀದ್ (ರೂ. 30 ಲಕ್ಷ), ಅನ್ಶುಲ್ ಕಾಂಬೋಜ್ (ರೂ. 3.40 ಕೋಟಿ), ಮುಖೇಶ್ ಚೌಧರಿ (30 ಲಕ್ಷ ರೂ.), ದೀಪಕ್ ಹೂಡಾ (1.70 ಕೋಟಿ ರೂ.), ಗುರ್ಜಪ್ನೀತ್ ಸಿಂಗ್ (2.20 ಕೋಟಿ ರೂ.), ನಾಥನ್ ಎಲ್ಲಿಸ್ (2 ಕೋಟಿ ರೂ.), ಜೇಮಿ ಓವರ್ಟನ್ (1.50 ಕೋಟಿ ರೂ.), ಕಮಲೇಶ್ ನಾಗರಕೋಟಿ (30 ಲಕ್ಷ ರೂ.), ರಾಮಕೃಷ್ಣ ಘೋಷ್ (30 ಲಕ್ಷ ರೂ.), ಶ್ರೇಯಸ್ ಗೋಪಾಲ್ (30 ಲಕ್ಷ), ವಂಶ್ ಬೇಡಿ (55 ಲಕ್ಷ ರೂ.), ಆಂಡ್ರೆ ಸಿದ್ದಾರ್ಥ್ (30 ಲಕ್ಷ ರೂ.).
