ವಿಲ್ ಜಾಕ್ಸ್ ಇನ್‌, ಟ್ರೆಂಟ್ ಬೌಲ್ಟ್ ಇಂಪ್ಯಾಕ್ಟ್‌ ಪ್ಲೇಯರ್;‌ ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಲ್ ಜಾಕ್ಸ್ ಇನ್‌, ಟ್ರೆಂಟ್ ಬೌಲ್ಟ್ ಇಂಪ್ಯಾಕ್ಟ್‌ ಪ್ಲೇಯರ್;‌ ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ

ವಿಲ್ ಜಾಕ್ಸ್ ಇನ್‌, ಟ್ರೆಂಟ್ ಬೌಲ್ಟ್ ಇಂಪ್ಯಾಕ್ಟ್‌ ಪ್ಲೇಯರ್;‌ ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ

ಐಪಿಎಲ್ ‌2025ರ ಮೆಗಾ ಹರಾಜಿಗೂ ಮುನ್ನವೇ ಬಲಿಷ್ಠರನ್ನು ರಿಟೈನ್‌ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡವು‌, ಹರಾಜಿನಲ್ಲಿ ಪ್ರಬಲ ಆಟಗಾರರನ್ನು ಖರೀದಿ ಮಾಡಿದೆ. ಈ ಬಾರಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ತಂಡದ ಆಡುವ ಬಳಗ ಹೇಗಿರಲಿದೆ ನೋಡೋಣ.

ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ಆಡುವ ಬಳಗ
ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ಆಡುವ ಬಳಗ

ಮಾರ್ಚ್‌ 14ರಿಂದ ಐಪಿಎಲ್‌ 2025ರ ಪಂದ್ಯಾವಳಿ ಆರಂಭವಾಗುತ್ತಿದೆ. ಕಳೆದ ವರ್ಷ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ 10 ತಂಡಗಳು ಬಲಿಷ್ಠ ತಂಡಗಳನ್ನು ಕಟ್ಟಿದೆ. ಈ ಬಾರಿ ಹಲವು ಹೊಸತನಗಳೊಂದಿಗೆ ಕಣಕ್ಕಿಳಿಯಲು ತಂಡಗಳು ಸಜ್ಜಾಗಿವೆ. 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ತಂಡ ಕೂಡಾ, ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ. ಹರಾಜಿಗೂ ಮುನ್ನ ಪ್ರಬಲ ಆಟಗಾರರನ್ನು ಉಳಿಸಿಕೊಂಡಿದ್ದ ತಂಡ, ಹರಾಜಿನಲ್ಲಿ ಮತ್ತಷ್ಟು ಪ್ರಬಲರನ್ನು ತೆಕ್ಕೆಗೆ ಹಾಕಿಕೊಂಡಿದೆ. ತಂಡವು ಈ ಬಾರಿ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಅವರಿಗೆ ದುಬಾರಿ ಬೆಲೆ ಕೊಟ್ಟಿತು. ಇದೇ ವೇಳೆ ವಿಲ್ ಜ್ಯಾಕ್ಸ್, ನಮನ್‌ ಧಿರ್‌ ಅವರಿಗೂ ಕೋಟಿ ಸುರಿಯಿತು.

ಕಳೆದ ಆವೃತ್ತಿಯಲ್ಲಿ ತಂಡದಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಕೇವಲ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಮರಳಿ ಕರೆತಂದು ತಂಡದ ನಾಯಕನಾಗಿ ಮಾಡಿದರೂ, ಯಶಸ್ಸು ಗಳಿಸಲು ವಿಫಲರಾದರು. ಹೀಗಾಗಿ ಈ ಬಾರಿ ಮತ್ತೆ ಚಾಂಪಿಯನ್‌ ಪಟ್ಟಕ್ಕೇರುವುದು ತಂಡದ ಲೆಕ್ಕಾಚಾರ. ಅದಕ್ಕಾಗಿ ಮತ್ತಷ್ಟು ಬಲಿಷ್ಠ ಆಡುವ ಬಳಗವನ್ನು ಕಣಕ್ಕಿಳಿಸುವ ಲೆಕ್ಕಾಚಾರ ಹಾಕಿಕೊಂಡಿದೆ.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ತಂಡವು ಹಾರ್ದಿಕ್‌ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಂಡಿತ್ತು. ನಂತರ ಹರಾಜಿನಲ್ಲಿ ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಅಲ್ಲಾ ಘಜನ್‌ಫರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್ ಅವರಂಥ ಆಟಗಾರರನ್ನು ಖರೀದಿ ಮಾಡಿತು.

ಮುಂಬೈ ಇಂಡಿಯನ್ಸ್‌ ತಂಡದ ಸಂಯೋಜನೆ

  • ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ತಿಲಕ್ ವರ್ಮಾ, ಬೆವನ್ ಜೇಕಬ್ಸ್.
  • ವಿಕೆಟ್‌ಕೀಪರ್‌ಗಳು: ರಾಬಿನ್ ಮಿಂಜ್, ರಿಯಾನ್ ರಿಕಲ್ಟನ್, ಕೃಷ್ಣನ್ ಶ್ರೀಜಿತ್.
  • ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ನಮನ್ ಧೀರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿಘ್ನೇಶ್ ಪುಥುರ್.
  • ವೇಗದ ಬೌಲರ್‌ಗಳು: ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಅಶ್ವನಿ ಕುಮಾರ್, ರೀಸ್ ಟೋಪ್ಲಿ, ಸತ್ಯನಾರಾಯಣ ರಾಜು, ಅರ್ಜುನ್ ತೆಂಡೂಲ್ಕರ್, ಲಿಜಾದ್ ವಿಲಿಯಮ್ಸ್.
  • ಸ್ಪಿನ್ನರ್‌ಗಳು: ಕರ್ಣ್ ಶರ್ಮಾ, ಅಲ್ಲಾ ಗಜನ್‌ಫರ್.

ಇದನ್ನೂ ಓದಿ | ಕೃನಾಲ್ ಪಾಂಡ್ಯ ಇನ್, ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್; ಐಪಿಎಲ್ 2025ಕ್ಕೆ ಆರ್​​ಸಿಬಿ ಬಲಿಷ್ಠ ಸಂಭಾವ್ಯ XI

ತಂಡದ ಬ್ಯಾಟಿಂಗ್‌ ಲೈನಪ್‌ ಬಹುತೇಕ ಕಳೆದ ಬಾರಿಯಂತೆಯೇ ಇರಲಿದೆ. ಈ ಬಾರಿ ರಿಕಲ್ಟನ್ ಮತ್ತು ಆರ್‌ಸಿಬಿ ಮಾಜಿ ಆಟಗಾರ ವಿಲ್‌ ಜಾಕ್ಸ್‌ ತಂಡ ಸೇರಿಕೊಂಡಿದ್ದಾರೆ. ತಂಡದ ವೇಗದ ಬೌಲಿಂಗ್‌ಗೆ ಬುಮ್ರಾ ಜೊತೆಗೆ ಟ್ರೆಂಟ್ ಬೌಲ್ಟ್ ಸೇರಿಕೊಂಡಿದ್ದಾರೆ. ಇದು ತಂಡದ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಲಿದೆ. ಬೌಲ್ಟ್‌ ಅವರನ್ನು ಎಂಐ ತಂಡ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿಸಬಹುದು.

ಐಪಿಎಲ್‌ 2025ಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ವಿಲ್ ಜಾಕ್ಸ್, ಮಿಚೆಲ್ ಸ್ಯಾಂಟ್ನರ್, ಜಸ್ಪ್ರೀತ್ ಬುಮ್ರಾ, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್ (ಇಂಪ್ಯಾಕ್ಟ್‌ ಪ್ಲೇಯರ್).

Whats_app_banner