ಶಾರ್ದೂಲ್ ಠಾಕೂರ್ ಔಟ್, ದೀಪಕ್ ಚಹರ್​ ಇನ್; ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಶಾರ್ದೂಲ್ ಠಾಕೂರ್ ಔಟ್, ದೀಪಕ್ ಚಹರ್​ ಇನ್; ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ

ಶಾರ್ದೂಲ್ ಠಾಕೂರ್ ಔಟ್, ದೀಪಕ್ ಚಹರ್​ ಇನ್; ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ

CSK Playing XI: 17ನೇ ಆವೃತ್ತಿಯ ಐಪಿಎಲ್​ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧದ ಸೆಣಸಾಟಕ್ಕೆ ಬಲಿಷ್ಠ ಪ್ಲೇಯಿಂಗ್​ XI ಕಣಕ್ಕಿಳಿಸಲು ಚೆನ್ನೈ ಸೂಪರ್ ಕಿಂಗ್ಸ್​ ಸಜ್ಜಾಗಿದೆ. ಇಲ್ಲಿದೆ ನೋಡಿ ವಿವರ.

ಬಲಿಷ್ಠ ಮುಂಬೈ ಇಂಡಿಯನ್ಸ್ ಕೆಡವಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI
ಬಲಿಷ್ಠ ಮುಂಬೈ ಇಂಡಿಯನ್ಸ್ ಕೆಡವಲು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI

ಐಪಿಎಲ್ ಇತಿಹಾಸದಲ್ಲಿ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ (Mumbai Indians vs Chennai Super kings) ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಂಎಸ್ ಧೋನಿ ನಾಯಕತ್ವ ಇಲ್ಲದೆ ಸಿಎಸ್​ಕೆ ಮೊದಲ ಬಾರಿಗೆ ಮುಂಬೈನಲ್ಲಿ ಆಡಲು ಸಿದ್ಧವಾಗಿದೆ. ನವೆಂಬರ್ 2005ರ ನಂತರ, ಧೋನಿ ಕೇವಲ ಆಟಗಾರನಾಗಿ ಇದೇ ಮೊದಲ ಬಾರಿಗೆ ಇಲ್ಲಿ ಆಡುತ್ತಿದ್ದಾರೆ. 42ರ ಹರೆಯದಲ್ಲೂ ವಿಕೆಟ್‌ ಹಿಂದೆ ಅದ್ಭುತ ಪ್ರದರ್ಶನ ನೀಡುತ್ತಿರುವ ಧೋನಿ ಆಟದ ಬಗೆಗಿನ ತಿಳುವಳಿಕೆಗೆ ಸಾಟಿಯಿಲ್ಲ.

ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ ತವರಿನ ಮೈದಾನದಲ್ಲಿ ಮೂರು ಗೆಲುವು ಸಾಧಿಸಿದೆ. ಆದರೆ, ತವರಿನ ಹೊರಗೆ ಇನ್ನೂ ಒಂದು ಪಂದ್ಯವನ್ನೂ ಗೆದ್ದಿಲ್ಲ. ಮತ್ತೊಮ್ಮೆ ಮನೆಯಿಂದ ಹೊರಗೆ ಆಡಲು ಸಿಎಸ್​ಕೆ ಸಜ್ಜಾಗಿದೆ. ಮುಂಬೈ ವಿರುದ್ಧ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿರುವ ಚೆನ್ನೈ, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ತಲಾ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಟೂರ್ನಿಯ ಎರಡು ಯಶಸ್ವಿ ತಂಡಗಳ ನಾಯಕರು ಈ ಬಾರಿ ಬದಲಾಗಿದ್ದಾರೆ. ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ನಾಯಕನನ್ನಾಗಿ ಮಾಡಲಾಗಿದೆ. ಆದರೆ, ಧೋನಿ ಚೆನ್ನೈ ತಂಡದ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ನೀಡಿದರು. ಇದರ ಹೊರತಾಗಿಯೂ, ಎರಡು ತಂಡಗಳ ನಡುವಿನ ಮೈದಾನದ ಪೈಪೋಟಿ ಒಂದೇ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬಲಿಷ್ಠ ತಂಡವನ್ನು ಚೆನ್ನೈ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಐಪಿಎಲ್‌ನಲ್ಲಿ ಮುಖಾಮುಖಿ

ಒಟ್ಟು ಪಂದ್ಯಗಳು- 36

ಮುಂಬೈ ಗೆಲುವು - 20

ಚೆನ್ನೈ ಗೆಲುವು - 16

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಬ್ಯಾಟಿಂಗ್ ವೈಭವ ನಡೆಸಿದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳನ್ನು ತಡೆಯುವುದು ಚೆನ್ನೈ ಬೌಲರ್‌ಗಳಿಗೆ ಕಠಿಣ ಸವಾಲಾಗಿದೆ. ಕಳಪೆ ಆರಂಭದ ನಂತರ ಪಾಂಡ್ಯ ನಾಯಕತ್ವದ ಮುಂಬೈ ಪುನರಾಗಮನ ಮಾಡಿದೆ. ಕಳೆದ 2 ಪಂದ್ಯಗಳಲ್ಲಿ ಅದರ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಅತ್ಯುತ್ತಮವಾಗಿದೆ. ಹಾರ್ದಿಕ್ ಪಡೆಯ ಬ್ಯಾಟರ್​​ಗಳ ವೇಗವನ್ನು ತಡೆಯಲು ಚೆನ್ನೈ ಯೋಜನೆ ರೂಪಿಸಿದೆ.

ಚಹರ್​ಗೆ ಅವಕಾಶ ನೀಡುವ ಸಾಧ್ಯತೆ

ಚೆನ್ನೈನ ಬೌಲರ್‌ಗಳು ಚೆಪಾಕ್‌ನ ನಿಧಾನಗತಿಯ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಫ್ಲಾಟ್ ಮತ್ತು ಬ್ಯಾಟ್ಸ್‌ಮನ್ ಸ್ನೇಹಿ ಪಿಚ್‌ಗಳಲ್ಲಿ ಇನ್ನೂ ಪರೀಕ್ಷೆಗೆ ಒಳಪಟ್ಟಿಲ್ಲ. ಚೆನ್ನೈನ ಆಡುವ ಹನ್ನೊಂದರಲ್ಲಿ ಅವರು ಫಿಟ್ ಆಗಿ ಉಳಿದರೆ, ಮತಿಶಾ ಪತಿರಾಣ ಮತ್ತು ದೀಪಕ್ ಚಹಾರ್ ತಂಡಕ್ಕೆ ಮರಳಬಹುದು. ಇಂತಹ ಪರಿಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಮತ್ತು ಮಹೀಶಾ ತಿಕ್ಷಣಾ ಹೊರಗುಳಿಯುವ ಸಾಧ್ಯತೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ XI

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡಾರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮತೀಶಾ ಪತಿರಾಣ.

ಮುಂಬೈ ಇಂಡಿಯನ್ಸ್ ಸಂಭಾವ್ಯ XI

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನೆಹಾಲ್ ವಧೇರಾ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ, ಜೆರಾಲ್ಡ್ ಕೊಯೆಟ್ಜಿ.

ಯಾವಾಗ ಮತ್ತು ಎಲ್ಲಿ ಪಂದ್ಯ ವೀಕ್ಷಿಸಬೇಕು?

ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಪಂದ್ಯದ ಲೈವ್ ಟೆಲಿಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಇರುತ್ತದೆ. ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

Whats_app_banner