ಕನ್ನಡ ಸುದ್ದಿ  /  Cricket  /  Mumbai Indians Women Have Won The Toss And Have Opted To Field Against Royal Challengers Bangalore Women Wpl 2024 Prs

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ; ಬಲಿಷ್ಠ ತಂಡದೆದುರು ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ ಆರ್​​ಸಿಬಿ

Royal Challengers Bangalore Vs Mumbai Indians : ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಬಲಿಷ್ಠ ತಂಡದೆದುರು ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ ಆರ್​​ಸಿಬಿ
ಬಲಿಷ್ಠ ತಂಡದೆದುರು ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದ ಆರ್​​ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಉಭಯ ತಂಡಗಳು ಆಡಿದ ಎರಡು ಪಂದ್ಯಗಳಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿದ್ದು, ಮೂರನೇ ಗೆಲುವಿನ ಹುಡುಕಾಟದಲ್ಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಇವತ್ತೂ ಇಲ್ಲ ಹರ್ಮನ್, ಪೆರ್ರಿ ಆಗಮನ

ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್​ ಮತ್ತೆ ಪಂದ್ಯವನ್ನು ಕಳೆದುಕೊಂಡಿದ್ದಾರೆ. ಕಳೆದ ಪಂದ್ಯಕ್ಕೂ ಮುನ್ನ ಸಣ್ಣ ಇಂಜುರಿ ಕಾರಣ ಅಲಭ್ಯರಾಗಿದ್ದ ಹರ್ಮನ್ ಆರ್​​ಸಿಬಿ ಪಂದ್ಯಕ್ಕೂ ದೂರವಾಗಿದ್ದಾರೆ. ನಟಾಲಿ ಸೀವರ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮತ್ತೊಂದಡೆ ಆರ್​ಸಿಬಿ ಪರ ಎಲಿಸ್ ಪೆರ್ರಿ ಕೂಡ ತಂಡಕ್ಕೆ ವಾಪಸ್ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಅನಾರೋಗ್ಯದ ಪರಿಣಾಮ ಅಲಭ್ಯರಾಗಿದ್ದರು.

ಕಳೆದ ಪಂದ್ಯಗಳಲ್ಲಿ ಎರಡೂ ತಂಡಗಳಿಗೆ ಸೋಲು

ಉಭಯ ತಂಡಗಳು ತಮ್ಮ ಕಳೆದ ಪಂದ್ಯದಲ್ಲಿ ಸೋಲು ಕಂಡಿವೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್​​ಗಳ ಅಂತರದಿಂದ ಸ್ಮೃತಿ ಮಂಧಾನ ಪಡೆ ಸೋಲನುಭವಿಸಿತ್ತು. ಮುಂಬೈ, ಯುಪಿ ವಾರಿಯರ್ಸ್ ಎದುರು ಶರಣಾಗಿತ್ತು. ಇದೀಗ ಎರಡೂ ತಂಡಗಳು ಗೆಲುವಿನ ಹಳಿಗೆ ಮರಳಲು ಸಜ್ಜಾಗಿವೆ.

ಉಭಯ ತಂಡಗಳ ಮುಖಾಮುಖಿ

ಮುಖಾಮುಖಿ ಪಂದ್ಯಗಳು - 02

ಮುಂಬೈ ಗೆಲುವು - 02

ಆರ್​ಸಿಬಿ ಗೆಲುವು - 00

ಗೆದ್ದವರು ಅಗ್ರಸ್ಥಾನಕ್ಕೆ ಏರಿಕೆ

ಬೆಂಗಳೂರು ಮತ್ತು ಮುಂಬೈ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 4ನೇ ಕ್ರಮಾಂಕದಲ್ಲಿ ಸ್ಥಾನದಲ್ಲಿವೆ. ಆರ್​ಸಿಬಿ ನೆಟ್​ ರನ್ ​ರೇಟ್ +0.705, ಮುಂಬೈ ನೆಟ್​ ರನ್ ರೇಟ್ -0.182 ಹೊಂದಿದೆ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಹಾಗಾಗಿ ಇಂದು ಗೆಲ್ಲುವ ತಂಡ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಸದ್ಯ ಡೆಲ್ಲಿ 4 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಆರ್​ಸಿಬಿ ಮತ್ತು ಮುಂಬೈ ತಂಡಗಳ ನಡುವಿನ ಡಬ್ಲ್ಯೂಪಿಎಲ್‌ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಪಂದ್ಯವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಇಲ್ಲಿ ನೋಡಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI)

ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭಾನಾ, ರೇಣುಕಾ ಠಾಕೂರ್

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI)

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್​), ನಟಾಲಿ ಸೀವರ್​ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಕರ್, ಇಸ್ಸಿ ವಾಂಗ್, ಎಸ್ ಸಜನಾ, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಕೀರ್ತನಾ ಬಾಲಕೃಷ್ಣನ್, ಸಾಯಿಕಾ ಇಶಾಕ್.

IPL_Entry_Point