ನಾನು ಹುಟ್ಟಿದ್ದು ಗುಜರಾತ್​ನಲ್ಲೇ, ಆದರೆ ನನ್ನ ಕ್ರಿಕೆಟ್ ಜನ್ಮ ಪಡೆದಿದ್ದು ಮುಂಬೈನಲ್ಲಿ; ಮೌನ ಮುರಿದ ಹಾರ್ದಿಕ್ ಪಾಂಡ್ಯ-my cricketing birth happened in mumbai indians hardik pandya turns up heat on ipl homecoming as mi meet gt gujarat prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಹುಟ್ಟಿದ್ದು ಗುಜರಾತ್​ನಲ್ಲೇ, ಆದರೆ ನನ್ನ ಕ್ರಿಕೆಟ್ ಜನ್ಮ ಪಡೆದಿದ್ದು ಮುಂಬೈನಲ್ಲಿ; ಮೌನ ಮುರಿದ ಹಾರ್ದಿಕ್ ಪಾಂಡ್ಯ

ನಾನು ಹುಟ್ಟಿದ್ದು ಗುಜರಾತ್​ನಲ್ಲೇ, ಆದರೆ ನನ್ನ ಕ್ರಿಕೆಟ್ ಜನ್ಮ ಪಡೆದಿದ್ದು ಮುಂಬೈನಲ್ಲಿ; ಮೌನ ಮುರಿದ ಹಾರ್ದಿಕ್ ಪಾಂಡ್ಯ

Hardik Pandya: ನಾಯಕ ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಮುಂಬೈ ಇಂಡಿಯನ್ಸ್ ಸೇರಿದ್ದರ ಬಗ್ಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ಸೇರಿದ್ದರ ಬಗ್ಗೆ ಮೌನ ಮುರಿದ ಹಾರ್ದಿಕ್ ಪಾಂಡ್ಯ

ನವದೆಹಲಿ: ಗುಜರಾತ್ ಟೈಟಾನ್ಸ್ (Gujarat Titans) ತೊರೆದು ಮುಂಬೈ ಇಂಡಿಯನ್ಸ್ (Mumbai Indians) ಸೇರಿರುವುದರ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಾನು ಹುಟ್ಟಿದ್ದು ಗುಜರಾತ್​ನಲ್ಲೇ ಆದರೂ ನನ್ನ ಕ್ರಿಕೆಟ್​ ಕರಿಯರ್​​​ ಬೆಳೆದಿದ್ದು ಮುಂಬೈನಲ್ಲಿ ಎಂದು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2024ರ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಟಾಸ್ ವೇಳೆ ಈ ಮಾತನ್ನು ಹೇಳಿದ್ದಾರೆ.

ಐಪಿಎಲ್ 2024 ರ ಹರಾಜಿಗೂ ಮುನ್ನ ಪಾಂಡ್ಯ ಅವರು ಟ್ರೇಡ್​ ವಿಂಡೋ ಮೂಲಕ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್​ ಸೇರಿದರು. ಅವರು 15 ಕೋಟಿ ಪಡೆದರು. ಆದರೆ ಐದು ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್​ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಫ್ರಾಂಚೈಸಿ ಹಾರ್ದಿಕ್​ಗೆ ಪಟ್ಟ ಕಟ್ಟತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ನಮ್ಮ ನಾಯಕನಿಗೆ ಅನ್ಯಾಯ ಮಾಡಲಾಯಿತು ಎಂದು ರೋಹಿತ್​ ಫ್ಯಾನ್ಸ್​ ಕಿಡಿಕಾರಿದ್ದರು.

2022ರಲ್ಲಿ ಮುಂಬೈ ತೊರೆದು ಗುಜರಾತ್ ಸೇರಿದ್ದ ಪಾಂಡ್ಯ, ನಾಯಕನಾದ ಮೊದಲ ಆವೃತ್ತಿಯಲ್ಲೇ ಟೈಟಾನ್ಸ್​ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. 2023ರಲ್ಲೂ ತಂಡವನ್ನ ಫೈನಲ್​ಗೇರಿಸಿದ್ದ ಹಾರ್ದಿಕ್, ಸತತ 2ನೇ ಟ್ರೋಫಿ ಗೆಲ್ಲುವಲ್ಲಿ ವಿಫಲರಾದರು. ಕೇವಲ ಎರಡೇ ಸೀಸನ್​​ಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪಡೆದ ಹಾರ್ದಿಕ್​ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಮುಂಬೈ ಸೇರಿದ್ದು 6ನೇ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದ್ದಾರೆ.

'ನನ್ನ ಕ್ರಿಕೆಟ್ ಜನ್ಮ ಮುಂಬೈನಲ್ಲಿ'

ಪ್ರಸ್ತುತ ಐಪಿಎಲ್​​ನಲ್ಲಿ ಮುಂಬೈ ತಂಡಕ್ಕೆ ಮರಳಿದ ಕುರಿತು ನಾಯಕ ಹಾರ್ದಿಕ್​ ಗಮನಾರ್ಹ ಹೇಳಿಕೆ ನೀಡಿದ್ದಾರೆ. ನಿರೂಪಕ ರವಿ ಶಾಸ್ತ್ರಿ ಅವರು ಮುಂಬೈಗೆ ಮರಳಿದ್ದರ ಫೀಲಿಂಗ್​ ಹೇಗಿದೆ ಎಂದು ಕೇಳುತ್ತಾರೆ. ಮುಂಬೈ ತಂಡಕ್ಕೆ ಮರಳಿ ಬಂದಿರುವುದು ಒಳ್ಳೆಯದು ಎನಿಸುತ್ತಿದೆ ಮತ್ತು ಖುಷಿ ನೀಡುತ್ತಿದೆ. ಏಕೆಂದರೆ ನಾನು ಹುಟ್ಟಿದ್ದು ಗುಜರಾತ್​​ನಲ್ಲಿ. ಇಲ್ಲಿ ನನಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಅಭಿಮಾನಿಗಳಿಗೆ ಮತ್ತು ಈ ರಾಜ್ಯಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ಆದರೆ ನನ್ನ ಕ್ರಿಕೆಟ್ ಜನ್ಮ ಪಡೆದಿದ್ದು ಮುಂಬೈನಲ್ಲಿ. ಹಾಗಾಗಿ ಮರಳಿ ಸೇರಿದ್ದು ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಸುಮಾರು ಎರಡು ವಾರಗಳ ಮುಂಚೆಯೇ ನಾವು ಪ್ರಾಕ್ಟೀಸ್ ಕ್ಯಾಂಪ್ ಆರಂಭಿಸಿದ್ದೆವು. ನಾವು ಅದ್ಭುತ ಅಭ್ಯಾಸ ಪಂದ್ಯಗಳು ಮತ್ತು ಅಭ್ಯಾಸ ನೆಟ್‌ಗಳನ್ನು ಹೊಂದಿದ್ದೇವೆ. ಎಲ್ಲರೂ ಚೆನ್ನಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. ತಂಡದ ಉತ್ಸಾಹವು ವಿಭಿನ್ನ ಭಾವನೆಯಾಗಿದೆ. ಹುಡುಗರು ಪ್ರದರ್ಶನ ನೀಡಲು ತುಂಬಾ ಉತ್ಸುಕರಾಗಿದ್ದಾರೆ ಎಂದು ಮಾಜಿ ಮುಖ್ಯಕೋಚ್ ರವಿ ಶಾಸ್ತ್ರಿಗೆ ಟಾಸ್ ಸಮಯದಲ್ಲಿ ಪಾಂಡ್ಯ ಹೇಳಿದ್ದಾರೆ.

ವಿಶ್ವಕಪ್​ ಬಳಿಕ ಕ್ರಿಕೆಟ್​ಗೆ ಮರಳಿದ ಹಾರ್ದಿಕ್

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಮಧ್ಯದಲ್ಲಿ ಪಾದದ ಗಾಯಕ್ಕೆ ಗುತ್ತಾಗಿದ್ದ ಹಾರ್ದಿಕ್, ತಂಡದಿಂದ ಹೊರಬಿದ್ದಿದ್ದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪಾಂಡ್ಯ, ನಂತರದ ದಿನಗಳಲ್ಲಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದರ ನಡುವೆ ಭಾರತದ ಪರ ಹಲವು ಸರಣಿಗಳನ್ನು ಮಿಸ್ ಮಾಡಿಕೊಂಡರು. ಸುಮಾರು ಐದು ತಿಂಗಳ ನಂತರ ಏಕದಿನ ವಿಶ್ವಕಪ್​ ಪಾದದ ಗಾಯದಿಂದ ಚೇತರಿಸಿಕೊಂಡಿರುವ ಪಾಂಡ್ಯ, 2024ರ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದಾರೆ.

ಗುಜರಾತ್ ಟೈಟಾನ್ಸ್ ಆಡುವ 11ರ ಬಳಗ

ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.

ಮುಂಬೈ ಇಂಡಿಯನ್ಸ್ ಆಡುವ 11ರ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೊಯೆಟ್ಜಿ, ಜಸ್ಪ್ರೀತ್ ಬುಮ್ರಾ, ಲ್ಯೂಕ್ ವುಡ್.

mysore-dasara_Entry_Point