ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನ ಯುವ ವೇಗಿ ಕಣ್ಣೀರು; ಅಳುತಲ್ಲೇ ಮೈದಾನ ತೊರೆದ ನಸೀಮ್ ಶಾ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನ ಯುವ ವೇಗಿ ಕಣ್ಣೀರು; ಅಳುತಲ್ಲೇ ಮೈದಾನ ತೊರೆದ ನಸೀಮ್ ಶಾ

ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನ ಯುವ ವೇಗಿ ಕಣ್ಣೀರು; ಅಳುತಲ್ಲೇ ಮೈದಾನ ತೊರೆದ ನಸೀಮ್ ಶಾ

Naseem Shah: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.

ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನ ಯುವ ವೇಗಿ ಕಣ್ಣೀರು; ಅಳುತಲ್ಲೇ ಮೈದಾನ ತೊರೆದ ನಸೀಮ್ ಶಾ
ಭಾರತದ ವಿರುದ್ಧ ಸೋತ ಬೆನ್ನಲ್ಲೇ ಪಾಕಿಸ್ತಾನ ಯುವ ವೇಗಿ ಕಣ್ಣೀರು; ಅಳುತಲ್ಲೇ ಮೈದಾನ ತೊರೆದ ನಸೀಮ್ ಶಾ

ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ 2024ರ ಘರ್ಷಣೆಯಲ್ಲಿ ಟೀಮ್ ಇಂಡಿಯಾ ವಿರುದ್ಧದ ಸೋಲಿನ ನಂತರ ಪಾಕಿಸ್ತಾನದ ಯುವ ವೇಗದ ಬೌಲಿಂಗ್ ನಸೀಮ್ ಶಾ (Naseem Shah) ಕಣ್ಣೀರಿಟ್ಟಿದ್ದಾರೆ. ಪೆವಿಲಿಯನ್‌ಗೆ ಹಿಂತಿರುಗುವ ಸಂದರ್ಭದಲ್ಲಿ ಶಾಹೀನ್ ಶಾ ಆಫ್ರಿದಿ ಮತ್ತು ರೋಹಿತ್​ ಶರ್ಮಾ ಯುವ ವೇಗಿಯನ್ನು ಸಮಾಧಾನಪಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಮೆನ್ ಇನ್ ಗ್ರೀನ್ 20ನೇ ಓವರ್​​​​ನಲ್ಲಿ ಗೆಲುವಿನ 18 ರನ್ ಬೇಕಿತ್ತು. ಅರ್ಷದೀಪ್ ಸಿಂಗ್ ಎಸೆದ ಈ ಓವರ್​​​ನಲ್ಲಿ ನಸೀಮ್ ತನ್ನ ಬ್ಯಾಟಿಂಗ್​​ನಲ್ಲಿ ಉತ್ತಮ ಪ್ರದರ್ಶನ ತೋರಿಸಿದರು. ಬಲಗೈ ಆಟಗಾರ ಓವರ್‌ನ 4 ಮತ್ತು 5ನೇ ಎಸೆತವನ್ನು ಬೌಂಡರಿ ಸಿಡಿಸಿದರು. ಆದರೆ, ಕೊನೆಯ ಎಸೆತಕ್ಕೆ 8 ರನ್ ಬೇಕಿತ್ತು. ಆಗ 1 ರನ್ ಗಳಿಸಿದರಿ. ಹೀಗಾಗಿ 120 ರನ್‌ ಬೆನ್ನಟ್ಟಿದ ಪಾಕಿಸ್ತಾನ ಇನ್ನೂ ಆರು ರನ್‌ಗಳಿಂದ ಸೋಲನುಭವಿಸಿತು.

ಟಿ20 ವಿಶ್ವಕಪ್ ಇತಿಹಾಸದಲ್ಲಿ 8ನೇ ಬಾರಿ ಮುಖಾಮುಖಿಯಾದ ಉಭಯ ತಂಡಗಳಲ್ಲಿ ಭಾರತ ತಂಡವೇ ಮತ್ತೊಮ್ಮೆ ಮೇಲುಗೈ ಸಾಧಿಸಿತು. ಭಾರತ 7ನೇ ಜಯದ ನಗೆ ಬೀರಿತು. 2021ರ ಟಿ20 ವಿಶ್ವಕಪ್​​ನಲ್ಲಿ ಪಾಕಿಸ್ತಾನ, ಟೀಮ್ ಇಂಡಿಯಾ ವಿರುದ್ಧ ಮೊದಲ ಬಾರಿಗೆ ಗೆಲುವು ಸಾಧಿಸಿತ್ತು. ಅಲ್ಲದೆ, ಒಟ್ಟಾರೆ ಟಿ20ಐ ಕ್ರಿಕೆಟ್​ ಇತಿಹಾಸದಲ್ಲಿ 13 ಮುಖಾಮುಖಿಗಳಲ್ಲಿ ಭಾರತವೇ 10 ಸಲ ಜಯಿಸಿದೆ.

ಪಾಕ್​​ ಬೌಲರ್ಸ್ ಮಿಂಚು, ಬ್ಯಾಟರ್ಸ್ ಫೇಲ್

ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ಬೌಲರ್​​ಗಳು ಮಿಂಚಿನ ಪ್ರದರ್ಶನ ನೀಡಿದರು. ಅದರಲ್ಲೂ ಕಣ್ಣೀರಿಟ್ಟ ನಸೀಮ್ ಶಾ, 4 ಓವರ್​​ಗಳಲ್ಲಿ ಕೇವಲ 3 ರನ್ ನೀಡಿ ಭಾರತ ತಂಡವನ್ನು ಕಟ್ಟಿ ಹಾಕಿದ್ದರು. ಅವರಿಗೆ ಹ್ಯಾರಿಸ್ ರೌಫ್ 3, ಮೊಹಮ್ಮದ್ ಅಮೀರ್ 2, ಶಾಹೀನ್ ಶಾ ಅಫ್ರಿದಿ 1 ವಿಕೆಟ್ ಪಡೆದು ಸಾಥ್ ಕೊಟ್ಟರು. ಹೀಗಾಗಿ ಭಾರತ 19 ಓವರ್​ಗಳಲ್ಲಿ 119ಕ್ಕೆ ಕುಸಿಯಿತು. ಆದರೆ ಬ್ಯಾಟರ್​​ಗಳು ಕೈ ಹಿಡಿಯಲಿಲ್ಲ.

ಮಿಂಚಿದ ಬುಮ್ರಾ ಹಾರ್ದಿಕ್, ಶರಣಾದ ಪಾಕ್

ಲೋ ಸ್ಕೋರಿಂಗ್ ಗೇಮ್​​ನಲ್ಲಿ ಭಾರತ ಬಹುತೇಕ ಗೆಲ್ಲುವುದು ಅಸಾಧ್ಯ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅಸಾಧ್ಯವನ್ನೂ ಸಾಧಿಸಿದ ಹೆಗ್ಗಳಿಕೆಗೆ ಬುಮ್ರಾ ಮತ್ತು ಹಾರ್ದಿಕ್ ಪಾತ್ರರಾದರು. ಜಸ್ಪ್ರೀತ್ 4 ಓವರ್​​ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರು. ಪಾಂಡ್ಯ 4 ಓವರ್​​​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು. ಇದರೊಂದಿಗೆ ಪಾಕ್ 20 ಓವರ್​​​ಗಳ ಕೋಟಾ ಮುಗಿಸಿದರೂ ಗೆಲುವು ಸಾಧಿಸಲಿಲ್ಲ.

ಪಾಕ್​ಗೆ ಲೀಗ್​ನಿಂದ ಹೊರಬೀಳುವ ಆತಂಕ

ಹೌದು, ಗ್ರೂಪ್​ ಎನಲ್ಲಿ ಪಾಕಿಸ್ತಾನ ತಂಡವೇ ಮೊದಲು ಲೀಗ್​​ನಿಂದ ಹೊರಬೀಳುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ ಎರಡಕ್ಕೆ ಎರಡೂ ಪಂದ್ಯಗಳನ್ನು ಕಳೆದುಕೊಂಡಿದೆ. ಭಾರತದ ವಿರುದ್ಧ ಮಾತ್ರವಲ್ಲದೆ, ಕ್ರಿಕೆಟ್ ಕೂಸು ಅಮೆರಿಕ ವಿರುದ್ಧ ಕಳಪೆ ಪ್ರದರ್ಶನ ತೋರಿ ಸೋತಿದೆ. ಅಮೆರಿಕ ಮತ್ತು ಭಾರತ ತಲಾ 2 ಪಂದ್ಯಗಳನ್ನು ಗೆದ್ದಿವೆ. ಇನ್ನು ತಲಾ ಒಂದೊಂದು ಗೆದ್ದರೆ, ಸೂಪರ್​-8ಕ್ಕೆ ಅರ್ಹತೆ ಪಡೆಯುತ್ತವೆ.

ಆದರೆ, ಪಾಕಿಸ್ತಾನಕ್ಕೆ ಇನ್ನೂ ಅವಕಾಶ ಇದೆ. ಭಾರತ ಅಥವಾ ಅಮೆರಿಕ ತಂಡಗಳಲ್ಲಿ ಒಂದು ತಂಡ ಉಳಿದ 2ರಲ್ಲಿ ಎರಡನ್ನೂ ಸೋಲಬೇಕು. ಪಾಕ್ ತನ್ನ ಎರಡೂ ಪಂದ್ಯಗಳಲ್ಲಿ ಎರಡನ್ನೂ ಗೆಲ್ಲಬೇಕು. ಆದರೆ ಬರಿ ಗೆಲುವು ಸಾಧಿಸಿದರೆ ಸಾಲದು ಉತ್ತಮ ರನ್​​ರೇಟ್ ಕಾಯ್ದುಕೊಳ್ಳಬೇಕು. ಮತ್ತೊಂದೆಡೆ ಐರ್ಲೆಂಡ್ ಕೂಡ ಎರಡು ಪಂದ್ಯ ಸೋಲಬೇಕು. ಆಗ ಪಾಕಿಸ್ತಾನ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ.

ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner