ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತದ ಒಬ್ಬ ಆಟಗಾರನೂ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದಿಲ್ಲ! ಅಚ್ಚರಿಯಾದರೂ ಸತ್ಯ
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾದ ಭಾರತ 15 ಸದಸ್ಯರ ತಂಡದಲ್ಲಿರುವ ಯಾವುದೇ ಆಟಗಾರ, ಐಪಿಎಲ್ 2024ರ ಫೈನಲ್ ಪಂದ್ಯ ಆಡುವ ಅರ್ಹತೆ ಪಡೆದಿಲ್ಲ. ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡದಲ್ಲಿರುವ ಯಾವೊಬ್ಬ ಆಟಗಾರ ವಿಶ್ವಕಪ್‌ಗೆ ಆಯ್ಕೆಯಾಗಿಲ್ಲ.

ಐಪಿಎಲ್ 2024ರ ಆವೃತ್ತಿಯ ಇಬ್ಬರು ಫೈನಲಿಸ್ಟ್‌ಗಳು ಯಾರು ಎಂಬುದು ಖಚಿತವಾಗಿದೆ. ಮೇ 24ರ ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ (SRH vs RR) ತಂಡವು, ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮುಂದೆ ಮೇ 26ರ ಭಾನುವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಗಳೇ ಮತ್ತೆ ಫೈನಲ್ ಕದನದಲ್ಲಿ ಎದುರಾಗಲಿವೆ.
ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಿರ್ಗಮನದೊಂದಿಗೆ, ಒಂದು ಅಚ್ಚರಿಯ ಬೆಳವಣಿಗೆ ಕೂಡಾ ನಡೆದಿದೆ. ಮುಂಬರುವ ಜೂನ್ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಯಾವುದೇ ಒಬ್ಬ ಆಟಗಾರ ಕೂಡಾ, ಈ ಬಾರಿಯ ಐಪಿಎಲ್ ಫೈನಲ್ ಆಡುತ್ತಿಲ್ಲ. ಅಂದರೆ ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡಗಳಲ್ಲಿ ವಿಶ್ವಕಪ್‌ಗೆ ಆಯ್ಕೆಯಾದ ಒಬ್ಬ ಆಟಗಾರ ಕೂಡಾ ಇಲ್ಲ. ಅಂದರೆ, ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದ ಯಾವೊಬ್ಬ ಆಟಗಾರ ಕೂಡಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂಬುದೇ ಅಚ್ಚರಿ.
ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಸದಸ್ಯರ ಪೈಕಿ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮೂವರು ಆಟಗಾರರಿದ್ದರು. ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಹಲ್ ಇದೀಗ ಫೈನಲ್ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಆರ್‌ಆರ್ ತಂಡವು ಎಲಿಮನೇಟ್ ಆಗುವ ಮೂಲಕ, ಇವರು ಕೂಡಾ ಬೇಗನೆ ಅಮೆರಿಕಕ್ಕೆ ಹಾರಬಹುದಾಗಿದೆ.
ಇದನ್ನೂ ಓದಿ | ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲಿಗೆ 5 ಕಾರಣಗಳಿವು; ಮಾಡಿದ ತಪ್ಪಿಗೆ ಸೋಲಿನ ಪಾಠ
ಈ ವಾರದ ಆರಂಭದಲ್ಲಿ ನಡೆದ ಐಪಿಎಲ್ ಎಲಿಮನೇಟರ್ ಪಂದ್ಯದಲ್ಲಿ ಆರ್‌ಸಿಬಿ ಆಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುತ್ತಿದ್ದಂತೆಯೇ, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಕೂಡಾ ಫೈನಲ್ ಆಡುವ ಅವಕಾಶ ಕಳೆದುಕೊಂಡರು. ಐಪಿಎಲ್ ಫೈನಲ್ ಆಡುವ ಅರ್ಹತೆ ಪಡೆಯದ ಆಟಗಾರರು ವಿಶ್ವಕಪ್‌ನಲ್ಲಿ ಮೋಡಿ ಮಾಡಬೇಕಾಗಿದೆ. ಇದೀಗ ಕೆಕೆಆರ್ ಹಾಗೂ ಎಸ್‌ಆರ್‌ಎಚ್ ತಂಡದಲ್ಲಿ ವಿಶ್ವಕಪ್ ಸದಸ್ಯರು ಒಬ್ಬರೂ ಇಲ್ಲ. ಆದರೆ, ವಿದೇಶಿ ಸದಸ್ಯರು ಇದ್ದಾರೆ.
ರಿಂಕು ಸಿಂಗ್ ಕೆಕೆಆರ್ ತಂಡದಲ್ಲಿ ಇದ್ದರೂ, ಅವರು ಟಿ20 ವಿಶ್ವಕಪ್‌ಗೆ ಆಯ್ಕೆಯಾದ 15 ಸದಸ್ಯರ ಮುಖ್ಯ ತಂಡದಲ್ಲಿಲ್ಲ. ಅವರು ನಾಲ್ಕು ಜನರ ಮೀಸಲು ಪಟ್ಟಿಯ ಭಾಗವಾಗಿದ್ದಾರೆ ಅಷ್ಟೇ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಾಹಲ್ , ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು
ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಆವೇಶ್ ಖಾನ್.
ಇದನ್ನೂ ಓದಿ | ಐಪಿಎಲ್ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್ vs ಎಸ್ಆರ್ಹೆಚ್ ಫೈನಲ್ ಎಲ್ಲಿ, ಯಾವಾಗ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
