ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!
ಕನ್ನಡ ಸುದ್ದಿ  /  ಕ್ರಿಕೆಟ್  /  ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!

ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!

Indian flag: ಲಾಹೋರ್​ನ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ತಂಡಗಳ ಧ್ವಜಗಳು ಹಾರಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ತ್ರಿವರ್ಣ ಧ್ವಜ ಇಲ್ಲದಿರುವುದು ಭಾರತೀಯ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.

ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!
ಪಾಕಿಸ್ತಾನದ ಹೇಯ ಕೃತ್ಯಕ್ಕೆ ಆಕ್ರೋಶ; ಚಾಂಪಿಯನ್ಸ್ ಟ್ರೋಫಿಗೆ ಹೋಗದ್ದಕ್ಕೆ ಭಾರತದ ಧ್ವಜವೇ ಮಾಯ!

ಲಾಹೋರ್, ಫೆ 17: ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭದ್ರತಾ ಕಾರಣಗಳಿಂದ ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ. ಆದರೆ, ಮಹತ್ವದ ಟೂರ್ನಿಯನ್ನು ಸ್ವಾಗತಿಸಲು ಭಾರತ ತಂಡ ಹೊರತುಪಡಿಸಿ ಹಾಲಿ ಚಾಂಪಿಯನ್ ಪಾಕಿಸ್ತಾನ ಸೇರಿ 7 ತಂಡಗಳು ಸಜ್ಜಾಗಿವೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪಾಕಿಸ್ತಾನ ಹೇಯ ಕೃತ್ಯವೊಂದನ್ನು ಎಸಗಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣ ಮತ್ತು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ 7 ತಂಡಗಳ ಧ್ವಜಗಳನ್ನಷ್ಟೇ ಹಾರಾಟ ಮಾಡಲಾಗಿತ್ತು. ಭಾರತದ ಧ್ವಜ ಕಾಣೆಯಾಗಿತ್ತು.

ಫೆಬ್ರವರಿ 16ರ ಭಾನುವಾರ ಗಡಾಫಿ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ತಂಡಗಳ ಧ್ವಜಗಳು ಹಾರಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆದರೆ ತ್ರಿವರ್ಣ ಧ್ವಜ ಇಲ್ಲದಿರುವುದು ಭಾರತೀಯ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಆದರೆ ಇದಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ, ಪಾಕಿಸ್ತಾನಕ್ಕೆ ಹೋಗದೆ ದುಬೈನಲ್ಲಿ ಆಡುವ ಭಾರತ ತಂಡದ ನಿರ್ಧಾರಕ್ಕೆ ಈ ಹೇಯ ಕೃತ್ಯ ಮಾಡಿದೆ ಎಂಬುದು ಹಲವರ ಅನಿಸಿಕೆ. ಪಾಕಿಸ್ತಾನದ ಈ ಕ್ರಮಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಸಿಸಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಮತ್ತೊಂದು ಅಚ್ಚರಿ.

ಪಾಕ್ ವಿರುದ್ಧ ನೆಟ್ಟಿಗರು ಕಿಡಿ

ಭಾರತ ಸರ್ಕಾರದಿಂದ ಅನುಮತಿ ಸಿಗದ ಕಾರಣ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಭಾರತೀಯ ತಂಡವನ್ನು ಕಳುಹಿಸದಿರಲು ಭಾರತ (ಬಿಸಿಸಿಐ) ತೆಗೆದುಕೊಂಡ ನಿರ್ಧಾರಕ್ಕೆ ಪಿಸಿಬಿ ನೀಡಿರುವ ತಿರುಗೇಟು ಇದು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಭಾರತ ತಮ್ಮ ದೇಶಕ್ಕೆ ಪ್ರಯಾಣಿಸುವುದಿಲ್ಲ ಎಂಬ ಕಾರಣಕ್ಕೆ ಐಸಿಸಿ ಟೂರ್ನಿ ಬಹಿಷ್ಕರಿಸಲು ಪಾಕ್ ನಿರ್ಧರಿಸಿತ್ತು. ಕೊನೆಗೆ ಉಭಯ ಮಂಡಳಿಗಳು ತಿಂಗಳುಗಳ ಕಾಲ ಚರ್ಚೆ ನಡೆಸಿ ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡವು. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಆದರೆ ಉಳಿದ ಪಂದ್ಯಗಳು ಪಾಕ್​ನಲ್ಲಿ ನಡೆಯಲಿವೆ.

ಫೆಬ್ರವರಿ 19ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಭಾರತ ತಂಡವು ಗುರುವಾರ (ಫೆಬ್ರವರಿ 20ರಂದು) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ವಾರಾಂತ್ಯದಲ್ಲಿ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರೋಮಾಂಚಕಾರಿ ಪಂದ್ಯ ನಡೆಯಲಿದೆ. ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಎನಲ್ಲಿ ಸ್ಥಾನ ಪಡೆದಿವೆ. ಗ್ರೂಪ್ ಬಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಸೇರಿವೆ. ಗ್ರೂಪ್ ಬಿ ಅಭಿಯಾನವು ಶುಕ್ರವಾರ ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವುದರೊಂದಿಗೆ ಪ್ರಾರಂಭವಾಗಲಿದೆ.

ಭಾರತ ತಂಡ ಭರ್ಜರಿ ಸಮರಾಭ್ಯಾಸ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ವೈಟ್​ವಾಶ್ ಮಾಡಿದ ನಂತರ ಫೆಬ್ರವರಿ 15ರಂದು ದುಬೈಗೆ ಪ್ರಯಾಣಿಸಿದ ಭಾರತ, ಈಗಾಗಲೇ ಮೊದಲ ಪ್ರಾಕ್ಟೀಸ್ ಸೆಷನ್ ಮುಗಿಸಿದೆ. ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ತಂಡದ 15 ಸದಸ್ಯರೂ ಭರ್ಜರಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಬಿಡುವಿಲ್ಲದೆ ಪ್ರಾಕ್ಟೀಸ್ ಮಾಡುತ್ತಿರುವ ಭಾರತ ತಂಡವು, ಮೂರನೇ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ವಿಶ್ವಾಸ ಹೊಂದಿದೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.