ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI
ಕನ್ನಡ ಸುದ್ದಿ  /  ಕ್ರಿಕೆಟ್  /  ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ Xi

ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

Indias likely XI: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐಗೆ ಭಾರತದ ಸಂಭಾವ್ಯ XI ಇಲ್ಲಿದೆ. ಮೊಹಮ್ಮದ್ ಶಮಿ ತಂಡಕ್ಕೆ ಮರಳಿದರೆ, ರಿಂಕು ಸಿಂಗ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.

ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI
ರಿಂಕು ಸಿಂಗ್ ಔಟ್, 26 ತಿಂಗಳ ನಂತರ ಶಮಿ ಕಣಕ್ಕೆ; ಇಂಗ್ಲೆಂಡ್ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟಿ20ಐ ಸರಣಿ ಇಂದಿನಿಂದ (ಜನವರಿ 22) ಆರಂಭವಾಗಲಿದೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಚುಟುಕು ಸ್ವರೂಪದಲ್ಲಿ ಭಾರತ ತಂಡ ಯಶಸ್ಸು ಕಂಡಿದೆ. ಗಂಭೀರ್ ಕೋಚಿಂಗ್ ಅಡಿ ಟಿ20 ಸರಣಿ ಸೋಲದ ಭಾರತ, ಇದೀಗ ಇಂಗ್ಲೆಂಡ್ ವಿರುದ್ಧವೂ ಅದೇ ಪ್ರದರ್ಶನ ನೀಡಲು ಸಿದ್ಧತೆ ನಡೆಸಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಜೋಸ್ ಬಟ್ಲರ್ ತಂಡದ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದೆ.

ಹೆಡ್​ ಕೋಚ್ ಗಂಭೀರ್ ಜೊತೆಗೆ ಆಟಗಾರರಿಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ 1-3 ರಲ್ಲಿ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿರುವ ಗಂಭೀರ್​, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸರಣಿ ಗೆದ್ದು ಕಂಬ್ಯಾಕ್ ಮಾಡುವ ಅಗತ್ಯ ಇದೆ. 2026ರ ಟಿ20 ವಿಶ್ವಕಪ್​ ಟೂರ್ನಿಗೆ ಸಿದ್ಧತೆಯ ಭಾಗವಾದ ಈ ಸರಣಿಯು ಆಟಗಾರರಿಗೆ ಅಗ್ನಿಪರೀಕ್ಷೆಯೂ ಹೌದು. ವಿಶ್ವಕಪ್​ಗೆ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಆಟಗಾರರು ಉತ್ತಮ ಪ್ರದರ್ಶನ ನೀಡುವುದು ಅಗತ್ಯ. ಹಾಗಾದರೆ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ 11 ಹೇಗಿರಲಿದೆ? ನೋಡೋಣ ಬನ್ನಿ.

ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಬಲಗೈ ಬ್ಯಾಟರ್ ಸ್ಯಾಮ್ಸನ್ ಟಿ20ಐ ಅದ್ಭುತ ಫಾರ್ಮ್​​ನಲ್ಲಿದ್ದು, ಕಳೆದ 5 ಪಂದ್ಯಗಳಲ್ಲಿ 3 ಶತಕ ಗಳಿಸಿದ್ದಾರೆ. ಕಳೆದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಅಭಿಷೇಕ್, ಲಯಕ್ಕೆ ಮರಳುವುದು ಅನಿವಾರ್ಯ. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20ಐ ಸರಣಿಯಲ್ಲಿ ಸತತ ಶತಕ ಗಳಿಸಿದ ತಿಲಕ್ ವರ್ಮಾ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್, ನಿತೀಶ್ ಕುಮಾರ್, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕಾಣಿಸಿಕೊಳ್ಳಬಹುದು.

ರಿಂಕು ಸಿಂಗ್​ಗೆ ಇಲ್ಲ ಅವಕಾಶ

ಸಾಧ್ಯವಾದಷ್ಟು ಆಲ್​​ರೌಂಡರ್​​ಗಳನ್ನು ಕಣಕ್ಕಿಳಿಸಲು ಇಷ್ಟಪಡುವ ಗಂಭೀರ್, ರಿಂಕು ಸಿಂಗ್ ಅವರನ್ನು ಪ್ಲೇಯಿಂಗ್ 11ನಿಂದ ಹೊರಗಿಡುವ ಸಾಧ್ಯತೆ ಹೆಚ್ಚಿದೆ. ರಿಂಕು ಸಿಂಗ್ ಅವರನ್ನು 7 ಅಥವಾ 8ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್​​ ಮೊದಲ ಆದ್ಯತೆಯಾಗಿದ್ದಾರೆ. ರವಿ ಬಿಷ್ಣೋಯ್ ಅವರಿಗಿಂತ ವರುಣ್ ಚಕ್ರವರ್ತಿ ಸ್ಪಿನ್ನರ್ ಆಗಿ ಸ್ಥಾನ ಪಡೆಯುವುದು ಖಚಿತವಾಗಿದೆ.

ಗಾಯದ ಸಮಸ್ಯೆಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ವೇಗಿ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಇಂದು ಕಣಕ್ಕಿಳಿದರೆ ಶಮಿ 2 ವರ್ಷಗಳ ನಂತರ ಅಂದರೆ 26 ತಿಂಗಳ ಬಳಿಕ ಟಿ20 ಪಂದ್ಯ ಆಡಿದಂತಾಗುತ್ತದೆ. 2022ರ ನವೆಂಬರ್​​ನಲ್ಲಿ ಶಮಿ ಕೊನೆಯದಾಗಿ ಟಿ20ಐ ಪಂದ್ಯವನ್ನಾಡಿದ್ದರು. ಶಮಿ ಅವರೊಂದಿಗೆ ಅರ್ಷದೀಪ್ ಸಿಂಗ್ ಕೂಡ ವೇಗದ ಬೌಲಿಂಗ್ ಘಟಕದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಗೆ ಭಾರತ ಸಂಭಾವ್ಯ ತಂಡ

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.

Whats_app_banner