Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್-not jasprit bumrah babar azam picks australian pacer pat cummins as toughest bowler faced in his career cricket news prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

Babar Azam on Pat Cummins : ತನ್ನ ವೃತ್ತಿಜೀವನದಲ್ಲಿ ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್​ ಯಾರೆಂಬುದನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬಹಿರಂಗಪಡಿಸಿದ್ದಾರೆ.

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್
Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ನಾಯಕ ಬಾಬರ್ ಅಜಮ್ (Babar Azam) ಎಲ್ಲಾ ಸ್ವರೂಪಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಹೊಂದಿರುವ ಜಾವೇದ್ ಮಿಯಾಂದಾದ್, ಸಯೀದ್ ಅನ್ವರ್, ಮೊಹಮ್ಮದ್ ಯೂಸುಫ್ ಮತ್ತು ಇಂಜಮಾಮ್ ಉಲ್ ಹಕ್ ಅವರಂತಹ ದಿಗ್ಗಜ ಆಟಗಾರರ ಬರ ನೀಗಿಸಿದ ಬಾಬರ್​, ವಿಶ್ವಮಟ್ಟದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. 13000ಕ್ಕೂ ಹೆಚ್ಚು ರನ್‌, 31 ಶತಕ ಸಿಡಿಸಿರುವ ಬಾಬರ್, ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಬಾಬರ್ ಅಜಮ್ ತವರು ಮತ್ತು ವಿದೇಶಿ ಪಿಚ್​ಗಳಲ್ಲಿ ಪ್ರಚಂಡ ದಾಖಲೆಯನ್ನು ಹೊಂದಿದ್ದಾರೆ. ಆಧುನಿಕ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬೌಲರ್​ಗಳನ್ನೇ ಎದುರಿಸಿದ ಪರಾಕ್ರಮ ಮೆರೆದಿರುವ ಪಾಕ್ ನಾಯಕ, ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಹಾಗೂ ನಾನು ಹೆದರಿದ ಬೌಲರ್​​​ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಸ್ಥಳೀಯ ವಾಹಿನಿಯೊಂದರಲ್ಲಿ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಜತೆಜಗಿನ ಸಂದರ್ಶನದಲ್ಲಿ ಬಾಬರ್​​ ಅವರು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್​ರನ್ನು 'ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಕಠಿಣ ಬೌಲರ್' ಎಂದು ತಿಳಿಸಿದ್ದಾರೆ.

ಕಮಿನ್ಸ್​ ಬೌಲಿಂಗ್ ಎದುರಿಸುವುದು ಕಷ್ಟ ಎಂದ ಬಾಬರ್

ಕಮಿನ್ಸ್ ಲೂಸ್ (ಸಡಿಲ) ಎಸೆತಗಳನ್ನು ಹಾಕುವುದಿಲ್ಲ. ಸ್ಲೋ ಬೌನ್ಸರ್​​ಹಾಕುತ್ತಾರೆ. ಬ್ಯಾಟರ್​​ನ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಚೆನ್ನಾಗಿ ಅರಿತಿದ್ದಾರೆ. ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ಗೆ ಇದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದಾರೆ. ನಿರ್ದಿಷ್ಟ ಸ್ಥಾನದಲ್ಲಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್‌ನ ವಿಕೆಟ್ ಹೇಗೆ ತೆಗೆದುಕೊಳ್ಳಬಹುದೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಎಂದು ಬಾಬರ್ ವಿವರಿಸಿದ್ದಾರೆ.

ಬಾಬರ್ vs ಕಮಿನ್ಸ್

ಅವರು ಬ್ಯಾಟರ್​ನನ್ನು ಟ್ರ್ಯಾಪ್ ಮಾಡುತ್ತಾರೆ. ಕಠಿಣ ಸಮಯವನ್ನು ನೀಡುತ್ತಾರೆ. ಅವರು ಬ್ಯಾಟರ್​ನ ಉದ್ವೇಗ ಮತ್ತು ತಂತ್ರಗಳಿಗೆ ಸಂಪೂರ್ಣ ಸವಾಲು ನೀಡುತ್ತಾರೆ ಎಂದು ಕಮಿನ್ಸ್ ಎದುರು ತನಗಾದ ಅನುಭವವನ್ನು ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2017 ರಿಂದಲೂ ಕಮಿನ್ಸ್ ಬೌಲಿಂಗ್ ಎದುರಿಸುತ್ತಿರುವ ಬಾಬರ್​, ಮೂರು ಫಾರ್ಮೆಟ್​ನಲ್ಲೂ ಸೇರಿ ಒಟ್ಟು ನಾಲ್ಕು ಬಾರಿ ಔಟ್ ಆಗಿದ್ದಾರೆ. ಕಮಿನ್ಸ್​ ವಿರುದ್ಧ 406 ಎಸೆತಗಳನ್ನು ಎದುರಿಸಿರುವ ಬಾಬರ್​ 261 ರನ್ ಗಳಿಸಿದ್ದು 276 ಡಾಟ್ ಮಾಡಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ನಂತರ ಬಾಬರ್ ನಾಯಕತ್ವದಿಂದ ಕೆಳಗಿಳಿದ್ದರು. ನಂತರ ಶಾಹೀನ್ ಅಫ್ರಿದಿ ಟಿ20ಐ ನಾಯಕತ್ವವನ್ನು ವಹಿಸಿಕೊಂಡರು. ಆದಾಗ್ಯೂ, ಪಾಕಿಸ್ತಾನದ ಮ್ಯಾನೇಜ್ಮೆಂಟ್ ಬದಲಾವಣೆಯ ನಂತರ ಬಾಬರ್ ಮತ್ತೊಮ್ಮೆ ನಾಯಕನಾಗಿ ನೇಮಕಗೊಂಡಿದ್ದಾರೆ.

ನಾಯಕನಾಗಿ ಮರು ನೇಮಕಗೊಂಡ ನಂತರ ಐರ್ಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 2-1 ರಲ್ಲಿ ಪಾಕಿಸ್ತಾನ ಕೈ ವಶಪಡಿಸಿಕೊಂಡಿತು. ವಿಶ್ವಕಪ್​ಗೂ ಮುನ್ನ 4 ಪಂದ್ಯಗಳ ಟಿ20ಐ ಸರಣಿಗೆ ಪಾಕಿಸ್ತಾನ, ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ವಿಶ್ವಕಪ್​​ನಲ್ಲಿ ಪಾಕಿಸ್ತಾನವು ಭಾರತ, ಕೆನಡಾ, ಯುಎಸ್‌ಎ ಮತ್ತು ಐರ್ಲೆಂಡ್ ಜತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಭಾರತದ ವಿರುದ್ಧ ಹೈವೋಲ್ಟೇಜ್ ಕದನ ನಡೆಯಲಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point