ಕನ್ನಡ ಸುದ್ದಿ  /  Cricket  /  Not Mayank Agarwal 2023 World Cup Winning Captain Pat Cummins Likely To Replace Aiden Markram As Srhs Captain Prs

ಎಸ್ಆರ್​ಎಚ್ ತಂಡದಲ್ಲಿ ನಾಯಕತ್ವದ ಬದಲಾವಣೆ; ಏಡನ್ ಮಾರ್ಕ್ರಮ್ ಬದಲಿಗೆ ವಿಶ್ವಕಪ್ ಗೆದ್ದ ಆಟಗಾರನಿಗೆ ಪಟ್ಟ

Sunrisers Hyderabad : 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಮಾಡಿದ್ದ ಪ್ಯಾಟ್ ಕಮಿನ್ಸ್ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಹೊಸ ನಾಯಕನನ್ನಾಗಿ ನೇಮಿಸುವ ನಿರೀಕ್ಷೆ ಇದೆ.

ಎಸ್ಆರ್​ಎಚ್ ತಂಡದಲ್ಲಿ ನಾಯಕತ್ವದ ಬದಲಾವಣೆ
ಎಸ್ಆರ್​ಎಚ್ ತಂಡದಲ್ಲಿ ನಾಯಕತ್ವದ ಬದಲಾವಣೆ

ಇಂಡಿಯನ್ ಪ್ರೀಮಿಯರ್ ಲೀಗ್-2024 (Indian Premier League) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿ (Sunrisers Hyderabad) ದೊಡ್ಡ ಬದಲಾವಣೆಯಾಗುವ ನಿರೀಕ್ಷೆ ಇದೆ. 17ನೇ ಆವೃತ್ತಿಗೂ ಮುನ್ನ ನೂತನ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ. ಸೌತ್ ಆಫ್ರಿಕಾ ಟಿ20 ಲೀಗ್​​ನಲ್ಲಿ (SAT20 League) ಎಸ್​​ಆರ್​ಎಚ್ ನಾಯಕನಾದ ಏಡನ್ ಮಾರ್ಕ್ರಮ್ ಅವರನ್ನು ಕೆಳಗಿಳಿಸಲು ಫ್ರಾಂಚೈಸಿ ನಿರ್ಧರಿಸಿದೆ.

ತನ್ನದೇ ಫ್ರಾಂಚೈ​ಸಿ ಮಾಲೀಕತ್ವದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್​​ ತಂಡಕ್ಕೆ ಎರಡು ಟ್ರೋಫಿ ಗೆದ್ದು ಕೊಟ್ಟ ಏಡನ್ ಮಾರ್ಕ್ರಮ್​ ಎಸ್​​ಆರ್​ಎಚ್ ಕ್ಯಾಪ್ಟನ್​ ಆಗಿದ್ದಾರೆ. ಆದರೆ ಅವರ ಸಾರಥ್ಯದಲ್ಲಿ ತಂಡವು ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ, ಅವರನ್ನು ಕೆಳಗಿಸಲು ನಿರ್ಧರಿಸಲಾಗಿದೆ.

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಮಾಡಿದ್ದ ಪ್ಯಾಟ್ ಕಮಿನ್ಸ್ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು ಹೊಸ ನಾಯಕನನ್ನಾಗಿ ನೇಮಿಸುವ ನಿರೀಕ್ಷೆ ಇದೆ ಎಂದು ಕ್ರಿಕ್​ಬಜ್ ವರದಿ ಮಾಡಿದೆ. ಬಲಗೈ ವೇಗಿ ಐಪಿಎಲ್ 2024 ಮಿನಿ-ಹರಾಜಿನಲ್ಲಿ 20.50 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಹೈದರಾಬಾದ್ ತಂಡವನ್ನು ಸೇರಿಕೊಂಡರು. ಅವರು ಐಪಿಎಲ್ ಇತಿಹಾಸದಲ್ಲಿ2ನೇ ದುಬಾರಿ ಆಟಗಾರ ಎನಿಸಿದ್ದಾರೆ.

ಈಸ್ಟರ್ನ್ ಕೇಪ್ ಎರಡು ಬಾರಿ ಚಾಂಪಿಯನ್

ಎಸ್​ಎಟಿ20 ಲೀಗ್​​ನ ಚೊಚ್ಚಲ ಆವೃತ್ತಿಯಲ್ಲಿ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಮಾಡಿದ ಹೆಗ್ಗಳಿಕಗೆ ಪಾತ್ರರಾಗಿದ್ದ ಏಡನ್ ಮಾರ್ಕ್ರಮ್ ಅವರಿಗೆ ಎಸ್​ಆರ್​ಎಚ್ ತಂಡದ ಜವಾಬ್ದಾರಿ ವಹಿಸಲಾಗಿತ್ತು. ಅವರ ನಾಯಕತ್ವದಲ್ಲಿ ತಂಡ ಕಳೆದ ಬಾರಿ ಹೀನಾಯ ಪ್ರದರ್ಶನ ನೀಡಿತ್ತು. ಈ ವರ್ಷ ನಡೆದ ಎಸ್​ಎಟಿ20 ಲೀಗ್​​ನಲ್ಲಿ ಮತ್ತೊಮ್ಮೆ ಈಸ್ಟರ್ನ್ ಕೇಪ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರೂ ಅವರನ್ನೇ ಕೆಳಗಿಳಿಸಲು ಫ್ರಾಂಚೈಸಿ ಮುಂದಾಗಿದೆ.

2023ರ ಐಪಿಎಲ್​ನಲ್ಲಿ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ ಮಾರ್ಕ್ರಮ್ ಅವರ ಅಡಿಯಲ್ಲಿ ಹೈದರಾಬಾದ್ ಮೂಲದ ಫ್ರಾಂಚೈಸಿ 13 ಪಂದ್ಯಗಳಲ್ಲಿ 4ನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಟೂರ್ನಿ ಮುಗಿಸಿತು. 2018 ರಿಂದ ಐಪಿಎಲ್ ಫೈನಲ್‌ ಪ್ರವೇಶಿಸಲು ವಿಫಲವಾದ ಎಸ್‌ಆರ್‌ಹೆಚ್, ಕಮಿನ್ಸ್ ಅಡಿಯಲ್ಲಿ ತಮ್ಮ ಪ್ರಶಸ್ತಿ ಬರ ಕೊನೆಗೊಳಿಸಲು ಆಶಿಸುತ್ತಿದೆ. ಕಮಿನ್ಸ್ ನಾಯಕತ್ವದಲ್ಲಿ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು.

ಸನ್‌ರೈಸರ್ಸ್ ಹೈದರಾಬಾದ್ ತಂಡ

ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್, ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಝಾತಾವೇದ್ ಸುಬ್ರಹ್ಮಣ್ಯನ್.

IPL_Entry_Point