ಗಾಯಕ್ವಾಡ್, ರಿಂಕು ಸಿಂಗ್​ಗೆ ಅಲ್ಲ; 23 ವರ್ಷದ ಆಟಗಾರನಿಗೆ ಸಿಕ್ತು ಸರಣಿಶ್ರೇಷ್ಠ ಪ್ರಶಸ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಾಯಕ್ವಾಡ್, ರಿಂಕು ಸಿಂಗ್​ಗೆ ಅಲ್ಲ; 23 ವರ್ಷದ ಆಟಗಾರನಿಗೆ ಸಿಕ್ತು ಸರಣಿಶ್ರೇಷ್ಠ ಪ್ರಶಸ್ತಿ

ಗಾಯಕ್ವಾಡ್, ರಿಂಕು ಸಿಂಗ್​ಗೆ ಅಲ್ಲ; 23 ವರ್ಷದ ಆಟಗಾರನಿಗೆ ಸಿಕ್ತು ಸರಣಿಶ್ರೇಷ್ಠ ಪ್ರಶಸ್ತಿ

  • India vs Australia T20Is: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆದ್ದ ಭಾರತ 5 ಪಂದ್ಯಗಳಲ್ಲಿ 4-1ರಂತೆ ಸರಣಿಗೆ ಮುತ್ತಿಕ್ಕಿತು.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಜರುಗಿದ 5 ಪಂದ್ಯಗಳ ಸರಣಿಯ 5ನೇ ಮತ್ತು ಕೊನೆಯ ಟಿ20ಯಲ್ಲಿ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತು. ಆ ಮೂಲಕ ದ್ವಿಪಕ್ಷೀಯ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು.
icon

(1 / 9)

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಜರುಗಿದ 5 ಪಂದ್ಯಗಳ ಸರಣಿಯ 5ನೇ ಮತ್ತು ಕೊನೆಯ ಟಿ20ಯಲ್ಲಿ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿತು. ಆ ಮೂಲಕ ದ್ವಿಪಕ್ಷೀಯ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು.(AFP)

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 20 ಓವರ್​​ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160 ರನ್ ಗಳಿಸಿತು. ಭಾರತದ ಪರ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರು.​ ಆಸ್ಟ್ರೇಲಿಯಾ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿತು.
icon

(2 / 9)

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, 20 ಓವರ್​​ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 160 ರನ್ ಗಳಿಸಿತು. ಭಾರತದ ಪರ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರು.​ ಆಸ್ಟ್ರೇಲಿಯಾ 20 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಸೋಲೊಪ್ಪಿಕೊಂಡಿತು.(AFP)

ಭಾರತದ ಪರ ಮುಕೇಶ್ ಕುಮಾರ್ 3 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಿತ್ತರು. 5ನೇ ಟಿ20ನಲ್ಲಿ ತಮ್ಮ ಆಲ್‌ರೌಂಡ್ ಪ್ರದರ್ಶನದ ನೀಡಿದ ಕಾರಣ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
icon

(3 / 9)

ಬ್ಯಾಟಿಂಗ್​​ನಲ್ಲಿ 31 ರನ್ ಚಚ್ಚಿದ ಅಕ್ಷರ್, 4 ಓವರ್‌ಗಳ ಕೋಟಾದಲ್ಲಿ 14 ರನ್‌ ಮಾತ್ರ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ನಾಲ್ಕನೇ ಟಿ20 ಪಂದ್ಯದಲ್ಲೂ 4 ಓವರ್​​​ ಬೌಲಿಂಗ್ ಮಾಡಿ 16 ರನ್ ನೀಡಿ 3 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು.
icon

(4 / 9)

ಸರಣಿಯ ಮುಗಿದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ 23 ವರ್ಷದ ಯುವ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಈ ಪ್ರಶಸ್ತಿ ರಿಂಕು ಸಿಂಗ್ ಅಥವಾ ಋತುರಾಜ್ ಗಾಯಕ್ವಾಡ್​ಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರವಿ ಬಿಷ್ಣೋಯ್​ಗೆ ಈ ಮ್ಯಾನ್​ ಆಫ್ ದ ಸಿರೀಸ್​ ದಕ್ಕಿತು.
icon

(5 / 9)

ಸರಣಿಯ ಮುಗಿದ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ 23 ವರ್ಷದ ಯುವ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು. ಈ ಪ್ರಶಸ್ತಿ ರಿಂಕು ಸಿಂಗ್ ಅಥವಾ ಋತುರಾಜ್ ಗಾಯಕ್ವಾಡ್​ಗೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ರವಿ ಬಿಷ್ಣೋಯ್​ಗೆ ಈ ಮ್ಯಾನ್​ ಆಫ್ ದ ಸಿರೀಸ್​ ದಕ್ಕಿತು.(BCCI-X)

23 ವರ್ಷದ ಬಿಷ್ಣೋಯ್ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದರು. 5 ಪಂದ್ಯಗಳಲ್ಲಿ 9 ವಿಕೆಟ್​ ಪಡೆದರು. ಅದರಲ್ಲೂ ಪ್ರಮುಖರನ್ನೇ ಔಟ್​ ಮಾಡಿದ್ದಲ್ಲದೆ, ಉತ್ತಮ ಎಕಾನಮಿ ಕೂಡ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಈ ಪ್ರಶಸ್ತಿ ದಕ್ಕಿತು.
icon

(6 / 9)

ಇನ್ನು ಋತುರಾಜ್ ಗಾಯಕ್ವಾಡ್, 5 ಪಂದ್ಯಗಳಲ್ಲಿ 223 ರನ್ ಗಳಿಸಿ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದರು. ಅಲ್ಲದೆ, ಈ ಸರಣಿಯಲ್ಲಿ ಶತಕವನ್ನೂ ಸಿಡಿಸಿದರು. ಗಾಯಕ್ವಾಡ್ ಸಹ ಈ ಪ್ರಶಸ್ತಿಗೆ ಅರ್ಹರಾಗಿದ್ದರು.
icon

(7 / 9)

ಮತ್ತೊಂದೆಡೆ ರಿಂಕು ಸಿಂಗ್ ಅವರು 5 ಪಂದ್ಯಗಳಲ್ಲಿ ತಮ್ಮ ಸೂಪರ್ ಡೂಪರ್ ಆಟದ ಮೂಲಕ ಎಲ್ಲರನ್ನೂ ಆಕರ್ಷಿಸಿದರು. 4 ಇನ್ನಿಂಗ್ಸ್‌ಗಳಲ್ಲಿ175 ಸ್ಟ್ರೈಕ್ ರೇಟ್, 52.50 ಸರಾಸರಿಯೊಂದಿಗೆ 105 ರನ್ ಕಲೆ ಹಾಕಿದ್ದಾರೆ.
icon

(8 / 9)

ಆಸ್ಟ್ರೇಲಿಯಾ ಎದುರಿನ ಚುಟುಕು ಸರಣಿ ಮುಗಿದ ಬೆನ್ನಲ್ಲೇ ಭಾರತ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲು ಸಜ್ಜಾಗಿದೆ. ಈ ಪ್ರವಾಸದಲ್ಲಿ ಆಫ್ರಿಕಾ ವಿರುದ್ಧ ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಡಿ.10 ರಂದು ಡರ್ಬನ್‌ನಲ್ಲಿ ನಡೆಯಲಿದೆ.
icon

(9 / 9)

ಇತರ ಗ್ಯಾಲರಿಗಳು