ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ​ ಜೊತೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೆ; ಬಿಸಿಸಿಐ ದೊಡ್ಡ ನಿರ್ಧಾರ

ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ​ ಜೊತೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೆ; ಬಿಸಿಸಿಐ ದೊಡ್ಡ ನಿರ್ಧಾರ

T20 World Cup : ಟಿ20 ವಿಶ್ವಕಪ್​ಗೆ ಭಾರತ ತಂಡದ ಆಯ್ಕೆಗೆ ಸಂಬಂಧಿಸಿ ನಡೆದ ಅಜಿತ್ ಅಗರ್ಕರ್, ರಾಹುಲ್ ದ್ರಾವಿಡ್ ಮತ್ತು ರೋಹಿತ್​ ಶರ್ಮಾ ಅವರ ನಡುವಿನ ಸಭೆಯಲ್ಲಿ ಆರಂಭಿಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ​ ಜೊತೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೆ
ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ​ ಜೊತೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೆ

ಜೂನ್ 5ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್​ಎ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ 2024 (T20 World Cup 2024) ನಡೆಯಲಿದ್ದು, 11 ವರ್ಷಗಳ ನಂತರ ಟ್ರೋಫಿ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗಿದೆ. ರೋಹಿತ್ ಶರ್ಮಾ (Rohit sharma) ತಂಡವನ್ನು ಮುನ್ನಡೆಸಲಿದ್ದು, ಆರಂಭಿಕರಾಗಿಯೂ ಆತನೇ ಕಣಕ್ಕಿಳಿಯಲಿದ್ದಾರೆ. ಆದರೆ ರೋಹಿತ್ ಜೊತೆ ಯಾರು ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರು ಈ ಸ್ಥಾನಕ್ಕೆ ಹೆಚ್ಚು ಪೈಪೋಟಿ ನಡೆಸುತ್ತಿರುವ ಮಧ್ಯೆಯೇ ಮತ್ತೊಬ್ಬ ಆಟಗಾರ ಆರಂಭಿಕ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೈಸ್ವಾಲ್ ಮತ್ತು ಗಿಲ್ ಓಪನರ್​ ಸ್ಥಾನಕ್ಕೆ ದೊಡ್ಡ ಸ್ಪರ್ಧಿಗಳಾದರೂ ಐಪಿಎಲ್ 2024ರಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ (Virat Kohli) ಮುಂಬರುವ ಮೆಗಾ ಟೂರ್ನಮೆಂಟ್‌ನಲ್ಲಿ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯಲು ತಮ್ಮ ಸ್ಥಾನವನ್ನು ಸೀಲ್ ಮಾಡಿದ್ದಾರೆ. ದೈನಿಕ್ ಜಾಗರನ್ ವರದಿ ಪ್ರಕಾರ, ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ವಿರಾಟ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಐಪಿಎಲ್ 2024ರಲ್ಲಿ ಇದುವರೆಗಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರನಾಗಿ ಅವರ ಪ್ರದರ್ಶನವೇ ಇದಕ್ಕೆ ಕಾರಣ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಶತಕ ಸೇರಿದಂತೆ 7 ಪಂದ್ಯಗಳಿಂದ 361 ರನ್ ಗಳಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಅಜಿತ್ ಅಗರ್ಕರ್, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರನ್ನು ಒಳಗೊಂಡ ಇತ್ತೀಚಿನ ಟಿ20 ವಿಶ್ವಕಪ್ ಆಯ್ಕೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಐಪಿಎಲ್​ನಲ್ಲಿ ನಿಧಾನಗತಿಯ ಬ್ಯಾಟಿಂಗ್ ವಿಧಾನದಿಂದಾಗಿ ವಿರಾಟ್​ ಅವರನ್ನು 2024ರ ಟಿ20 ವಿಶ್ವಕಪ್ ತಂಡಕ್ಕೆ ಕಡೆಗಣಿಸಬಹುದು ಎಂಬ ವದಂತಿಗಳು ಹರಿದಾಡಿದ್ದವು. ಆದರೀಗ ಕೊಹ್ಲಿ ಆಯ್ಕೆಗೆ ಆಯ್ಕೆದಾರರೇ ಒಲವು ತೋರಿದ್ದಾರೆ. 2024ರ ಐಪಿಎಲ್​​ನಲ್ಲಿ ಫಾರ್ಮ್‌ಗೆ ಮರಳುವ ಮೂಲಕ ಆಯ್ಕೆದಾರರ ಮನಸ್ಸು ಬದಲಿಸಿದ್ದಾರೆ.

ಜೈಸ್ವಾಲ್​ಗಿಲ್ಲ ಅವಕಾಶ; ಬ್ಯಾಕಪ್ ಓಪನರ್ ಆಗಿ ಗಿಲ್

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರನ್ನು ಆರಂಭಿಕ ಆಟಗಾರನಾಗಿ ಬಳಸಿಕೊಳ್ಳುವ ನಿರ್ಧಾರದಿಂದ ಯಶಸ್ವಿ ಜೈಸ್ವಾಲ್ ಅವರನ್ನು ಟೂರ್ನಿಯಿಂದ ಹೊರಗಿಡಲು ಚಿಂತನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಭೆಯಲ್ಲಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ನಡುವೆ ಬ್ಯಾಕ್ಅಪ್ ಓಪನರ್ ಆಗಲು ಫಿಟ್ ಆಗಿರುವ ಅಭ್ಯರ್ಥಿ ಯಾರು ಎಂಬ ಬಗ್ಗೆ ಚರ್ಚೆ ನಡೆಯಿತು. ಕೊಹ್ಲಿ ಆರಂಭಿಕನಾದರೆ, ಶುಭ್ಮನ್ ಬ್ಯಾಕಪ್ ಓಪನರ್​ ಆಗಿರಲಿ ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಮತ್ತೊಂದೆಡೆ, ಜೈಸ್ವಾಲ್ ಈ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಉತ್ತಮ ಪ್ರದರ್ಶನ ನೀಡಲಿಲ್ಲ.

ರಿಯಾನ್ ಪರಾಗ್ ಕುರಿತು ಸಕಾರಾತ್ಮಕ ಚರ್ಚೆ

ರಿಯಾನ್ ಪರಾಗ್ ಅವರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ದೈನಿಕ್ ಜಾಗರಣ್ ವರದಿ ಹೇಳಿದೆ. ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪರಾಗ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಪರಾಗ್, 318 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮುಂದಿನ ಕೆಲವು ಪಂದ್ಯಗಳಲ್ಲಿ ಅವರು ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸುವಲ್ಲಿ ಯಶಸ್ವಿಯಾದರೆ, ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕಕ್ಕೆ ಆಯ್ಕೆಯಾದರೂ ಅಚ್ಚರಿ ಇಲ್ಲ.

IPL_Entry_Point