ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆಲ್ಲೋರು ಯಾರೆಂದು ಭವಿಷ್ಯ ನುಡಿದ ಚಹಲ್; ಕೊಹ್ಲಿ-ಗಿಲ್ ಅಲ್ಲ!
Yuzvendra Chahal : ಮುಂಬರುವ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲೋದು ಯಾರು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಭವಿಷ್ಯ ನುಡಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಸ್ಟಾರ್ ಇಂಡಿಯನ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಮುಂಬರುವ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಯಾರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಕಳೆದ ವರ್ಷ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭ್ಮನ್ ಗಿಲ್ ಮತ್ತು ಬ್ಯಾಟಿಂಗ್ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರನ್ನು ನಿರ್ಲಕ್ಷಿಸಿದ್ದಾರೆ. ಬದಲಿಗೆ ತಮ್ಮ ತಂಡದ ಇಬ್ಬರನ್ನು ಹೆಸರನ್ನು ಬಹಿರಂಗಪಡಿಸಿದ್ದಾರೆ.
2024ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಇಬ್ಬರಲ್ಲಿ ಒಬ್ಬರು ಆರೆಂಜ್ ಕ್ಯಾಪ್ ಗೆಲ್ಲುತ್ತಾರೆ ಎಂದು ಯುಜ್ವೇಂದ್ರ ಚಹಲ್ ಭವಿಷ್ಯ ನುಡಿದಿದ್ದಾರೆ. ಜೈಸ್ವಾಲ್ ಅದ್ಭುತ ಫಾರ್ಮ್ನಲ್ಲಿದ್ದು, ಗೆದ್ದರೂ ಅಚ್ಚರಿ ಇಲ್ಲ. ಇನ್ನು ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕ ಬಟ್ಲರ್, 2022ರ ಆವೃತ್ತಿಯ ಶ್ರೀಮಂತ ಲೀಗ್ನಲ್ಲಿ 17 ಪಂದ್ಯಗಳಲ್ಲಿ 863 ರನ್ ಗಳಿಸಿದ್ದರು. ಆದರೆ ಕಳದ ಬಾರಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು.
ಪ್ರಸ್ತುತ ಭಾರತ ತಂಡದ ಪರ ರೆಡ್-ಹಾಟ್ ಫಾರ್ಮ್‌ನಲ್ಲಿರುವ ಜೈಸ್ವಾಲ್, ಐಪಿಎಲ್ 2023ರಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. 14 ಪಂದ್ಯಗಳಲ್ಲಿ ಎಡಗೈ ಬ್ಯಾಟರ್ 624 ರನ್ ಗಳಿಸಿದ ಜೈಸ್ವಾಲ್, ಐಪಿಎಲ್ ಸೀಸನ್‌ವೊಂದರಲ್ಲಿ ಅನ್ ಕ್ಯಾಪ್ಡ್ ಬ್ಯಾಟರ್‌ನಿಂದ ಅತಿ ಹೆಚ್ಚು ರನ್ ಗಳಿಸಿದ ದಾಖಲೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪ್ರಸ್ತುತ ಫಾರ್ಮ್ ನೋಡಿದರೆ, ಈ ವರ್ಷ ಐಪಿಎಲ್‌ನಲ್ಲಿ ಪ್ರಮುಖ ರನ್ ಗಳಿಸುವವರಾಗಿ ಮುಗಿಸುವ ಫೇವರಿಟ್ ಆಟಗಾರರಲ್ಲಿ ಒಬ್ಬರು.
ಐಪಿಎಲ್ ಇತಿಹಾಸದಲ್ಲಿ ಕಣಕ್ಕಿಳಿದಿರುವ 145 ಪಂದ್ಯಗಳಲ್ಲಿ 187 ವಿಕೆಟ್ ಪಡೆದಿರುವ ಚಹಲ್, ಈ ವರ್ಷ ಹೆಚ್ಚು ವಿಕೆಟ್ ಪಡೆಯುವ ಬೌಲರ್ ಯಾರು ಎಂಬುದನ್ನೂ ಹೆಸರಿಸಿದ್ದಾರೆ. ಇದಕ್ಕೆ ಉತ್ತರವಾಗಿ ತನ್ನ ಹೆಸರನ್ನೇ ಮೊದಲ ಆಯ್ಕೆಯಾಗಿ ಮಾಡಿಕೊಂಡಿದ್ದಾರೆ. ಅವರಲ್ಲದಿದ್ದರೆ, ರಶೀದ್ ಖಾನ್ ಪರ್ಪಲ್ ಕ್ಯಾಪ್ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದು, 2023ರ ಐಪಿಎಲ್ ಆವೃತ್ತಿಯಲ್ಲಿ 17 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದರು.
ಐಪಿಎಲ್ 2024ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮಾರ್ಚ್ 24ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಎದುರು ಸೆಣಸಾಟ ನಡೆಸುವ ಮೂಲಕ ರಾಜಸ್ಥಾನ ತನ್ನ ಅಭಿಯಾನ ಆರಂಭಿಸಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ
ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಆಡಮ್ ಜಂಪಾ, ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕಾಡ್ಮೋರ್, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್.