ಧನಶ್ರೀ ವರ್ಮಾ ಜೊತೆ ವಿಚ್ಛೇದನದ ವದಂತಿ; ನೋವಲ್ಲಿ ಕಂಠಪೂರ್ತಿ ಕುಡಿದ ಯುಜ್ವೇಂದ್ರ ಚಹಲ್, ಇದು ನಿಜವೇ? ವಿಡಿಯೋ ವೈರಲ್
Yuzvendra Chahal: ಪತ್ನಿ ಧನಶ್ರೀ ವರ್ಮಾ ಅವರ ಜೊತೆ ವಿಚ್ಛೇದನದ ವದಂತಿ ನಡುವೆ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರು ನೋವಲ್ಲಿ ಕಂಠಪೂರ್ತಿ ಕುಡಿದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗೆ ಬಲ ನೀಡಿದ್ದಾರೆ. ಇದಲ್ಲದೆ, ಚಹಲ್, ಅವರು ತಮ್ಮ ಪತ್ನಿ ಧನಶ್ರೀ ಜೊತೆಗಿನ ಎಲ್ಲಾ ಫೋಟೋಗಳನ್ನು ಅಳಿಸಿದ್ದಾರೆ. ಧನಶ್ರೀ ಅನ್‌ಫಾಲೋ ಮಾಡಿದ್ದರೂ ಚಹಲ್ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಆದರೆ 2023ರಲ್ಲಿ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿಯ ಉಪನಾಮ ತೆಗೆದುಹಾಕಿದ್ದರು. ಇಲ್ಲಿಂದ ವಿಚ್ಛೇದನದ ವದಂತಿ ಹಬ್ಬಿತ್ತು.
ಇದೀಗ ಮತ್ತೆ ವಿಚ್ಛೇದನದ ಗಾಸಿಫ್ ಬಿರುಗಾಳಿಯಂತೆ ಹಬ್ಬಿದೆ. ಇದರ ನಡುವೆಯೇ ಚಹಲ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟಿಗ ಪಾನಮತ್ತರಾಗಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಪಾನಮತ್ತರಾದ ಚಹಲ್ ಅವರನ್ನು ಪಬ್‌ನಿಂದ ಹೊರಗೆ ಕರೆದುಕೊಂಡು ಹೋಗಿ, ಕಾರಿಗೆ ಹತ್ತಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನಲ್ಲಿ ಕುಳಿತ ಬೆನ್ನಲ್ಲೇ ಫೋಟೋಗ್ರಾಫರ್ಸ್ ಫೋಟೋ ಕ್ಲಿಕ್ಕಿಸುವುದನ್ನು ತಡೆಯಲು ಚಹಲ್ ತನ್ನ ಕೈಯಿಂದ ಮುಖವನ್ನು ಮುಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಧೈರ್ಯವಾಗಿರು ಯುಜಿ ಭಾಯ್ ಎಂದು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಡಿವೋರ್ಸ್ ನೋವಲ್ಲಿ ಕುಡಿದರೇ ಚಹಲ್?
ವಿಡಿಯೋ ವೈರಲ್ ಆದ ತಕ್ಷಣವೇ ಡಿವೋರ್ಸ್ ಪಡೆದ ನೋವಿನಲ್ಲಿ ಚಹಲ್ ಕುಡಿದಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋ ಇತ್ತೀಚಿನದ್ದಲ್ಲ ಎಂದು ಕಾಣುತ್ತದೆ. ಚಹಲ್-ಧನಶ್ರೀ ವಿಚ್ಛೇದನದ ಸುದ್ದಿಯ ಹಿನ್ನೆಲೆಯಲ್ಲಿ ಕೆಲವರು ಥ್ರೋಬ್ಯಾಕ್ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಧನಶ್ರೀ ಮತ್ತು ಚಹಲ್ ಪ್ರೇಮ ವಿವಾಹವಾಗಿದ್ದರು. ಅವರ ಮದುವೆಯು 11ನೇ ಡಿಸೆಂಬರ್ 2020 ರಂದು ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಡೆಯಿತು. ಇದೀಗ ಚಹಲ್ ಹಾಗೂ ಧನಶ್ರೀ ಈ ನಾಲ್ಕು ವರ್ಷದ ದಾಂಪತ್ಯಕ್ಕೆ ಗುಡ್ ಬೈ ಹೇಳಲಿದ್ದಾರಂತೆ.
ಚಹಲ್-ಧನಶ್ರೀ ಲವ್ಸ್ಟೋರಿ
ಚಹಲ್ ಮತ್ತು ಧನಶ್ರೀ ಮಧ್ಯೆ ಲವ್ ಹುಟ್ಟಿದ್ದು ಲಾಕ್ಡೌನ್ ಅವಧಿಯಲ್ಲಿ. ಕೊರೊನಾ ಕಾಲಘಟ್ಟದಲ್ಲಿ ಮನೆಯಲ್ಲೇ ಕೂತಿದ್ದ ಚಹಲ್, ಡ್ಯಾನ್ಸ್ ಕೊರಿಯೋಗ್ರಾಫರ್ ಧನಶ್ರೀ ಅವರ ವಿಡಿಯೋಗಳನ್ನು ನೋಡಿ ಇಂಪ್ರೆಸ್ ಆಗಿದ್ದರು. ಇದೇ ವೇಳೆ ತಾನು ಡ್ಯಾನ್ಸ್ ಕಲಿಯಬೇಕು ಎಂದು ನಿರ್ಧರಿಸಿದ್ದ ಸ್ಪಿನ್ನರ್, ಧನಶ್ರೀ ಅವರಿಗೆ ಮೆಸೇಜ್ ಮಾಡಿದ್ದರು. ನನಗೂ ಡ್ಯಾನ್ಸ್ ಕಲಿಸಬೇಕು ಎಂದು ಕೇಳಿದ್ದರು. ಇದಕ್ಕೆ ಒಪ್ಪಿದ್ದ ಧನಶ್ರೀ ಆನ್ಲೈನ್ನಲ್ಲೇ ಕ್ಲಾಸ್ ಆರಂಭಿಸಿದ್ದರು. ಇಲ್ಲಿಂದ ಇಬ್ಬರ ಪರಿಚಯ ಸ್ನೇಯವಾಯಿತು. ಬಳಿಕ ಪ್ರೀತಿಗೆ ಬಿದ್ದರು. ಈ ಬಗ್ಗೆ ಮನೆಯಲ್ಲೂ ಒಪ್ಪಿಸಿದ್ದರು.
ಚಹಲ್ ಮತ್ತು ಧನಶ್ರೀ ಇಬ್ಬರ ಮೊದಲ ಪರಿಚಯದಲ್ಲಿ ಡ್ಯಾನ್ಸ್ ಬಿಟ್ಟು ಬೇರೆ ಏನನ್ನೂ ಮಾತನಾಡಿರಲಿಲ್ಲವಂತೆ. ನಂತರದ ದಿನಗಳಲ್ಲಿ ಲಾಕ್‌ಡೌನ್‌ನಲ್ಲಿ ಹೇಗೆ ಇಷ್ಟೊಂದು ಸಂತೋಷದಿಂದ ಇದ್ದೀರಾ ಎಂದು ಆಕೆಗೆ ಚಹಲ್, ಕೇಳಿದ್ದರಂತೆ. ಈ ಮೆಸೇಜ್ ಅವರ ಪರಿಚಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಮನೆಯಲ್ಲಿ ಒಪ್ಪಿಸಿದ್ದ ಈ ಜೋಡಿ, ಯಾವುದೇ ಡೇಟಿಂಗ್ ನಡೆಸಿರಲಿಲ್ಲ. ಡೇಟಿಂಗ್ ಎಲ್ಲಾ ಇಷ್ಟವಿಲ್ಲ, ಡೈರೆಕ್ಟ್ ಮದುವೆ ಆಗೋಣ ಎಂದು ಧನಶ್ರೀಗೆ ಚಹಲ್ ಪ್ರಪೋಸ್ ಮಾಡಿದ್ದರಂತೆ. ಅದಕ್ಕೆ ಧನಶ್ರೀ ಅವರು ಒಪ್ಪಿಗೆ ನೀಡಿದ್ದರಂತೆ. ತಮ್ಮ ಲವ್ಸ್ಟೋರಿ ಬಗ್ಗೆ ಧನಶ್ರೀ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು.