549 ರನ್, ಅತಿ ಹೆಚ್ಚು ಬೌಂಡರಿ-ಸಿಕ್ಸರ್; ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯದಲ್ಲಿ ದಾಖಲೆಗಳ ಆಗರ
ಕನ್ನಡ ಸುದ್ದಿ  /  ಕ್ರಿಕೆಟ್  /  549 ರನ್, ಅತಿ ಹೆಚ್ಚು ಬೌಂಡರಿ-ಸಿಕ್ಸರ್; ಆರ್‌ಸಿಬಿ Vs ಎಸ್‌ಆರ್‌ಎಚ್ ಪಂದ್ಯದಲ್ಲಿ ದಾಖಲೆಗಳ ಆಗರ

549 ರನ್, ಅತಿ ಹೆಚ್ಚು ಬೌಂಡರಿ-ಸಿಕ್ಸರ್; ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯದಲ್ಲಿ ದಾಖಲೆಗಳ ಆಗರ

RCB vs SRH: ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವಿನ ಐಪಿಎಲ್‌ 2024ರ ಪಂದ್ಯದಲ್ಲಿ ಹಲವು ದಾಖಲೆಗಳು ಹುಟ್ಟಿಕೊಂಡಿವೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಆರ್‌ಸಿಬಿ vs ಎಸ್‌ಆರ್‌ಎಚ್‌ ಪಂದ್ಯವು ಸ್ಮರಣೀಯವಾಗಿ ಉಳಿಯಲಿದೆ.

ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯದಲ್ಲಿ ದಾಖಲೆಗಳ ಆಗರ
ಆರ್‌ಸಿಬಿ vs ಎಸ್‌ಆರ್‌ಎಚ್ ಪಂದ್ಯದಲ್ಲಿ ದಾಖಲೆಗಳ ಆಗರ (PTI)

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಏಪ್ರಿಲ್‌ 15ರ ಸೋಮವಾರ ನಡೆದ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾದವು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (Royal Challengers Bengaluru vs Sunrisers Hyderabad) ತಂಡಗಳ ಬ್ಯಾಟಿಂಗ್‌ ಅಬ್ಬರಕ್ಕೆ ಹಲವು ದಾಖಲೆಗಳೇ ನಿರ್ನಾಮವಾಯ್ತು. ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಉದ್ಯಾನ ನಗರಿಯಲ್ಲಿ ರನ್‌ ಮಳೆಯೇ ಹರಿದು ಬಂತು. ಒಂದೇ ಪಂದ್ಯದಲ್ಲಿ 549 ರನ್‌ಗಳು ಹರಿದು ಬಂದವು. ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಇದು ದಾಖಲೆಯ ರನ್‌. ಐಪಿಎಲ್‌ ಹಾಗೂ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಹಲವು ದಾಖಲೆಗಳಿಗೆ ಕಾರಣವಾದ ಪಂದ್ಯದ ರೆಕಾರ್ಡ್‌ ಲಿಸ್ಟ್‌ ನೋಡೋಣ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌, ಭರ್ಜರಿ 287 ರನ್‌ ಕಲೆ ಹಾಕಿತು. ಇದು ಐಪಿಎಲ್‌ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಮೊತ್ತ. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಆರ್‌ಸಿಬಿ ಕೂಡಾ 262 ರನ್‌ ಸಿಡಿಸಿತು. ಇದು ಐಪಿಎಲ್‌ನಲ್ಲಿ ಚೇಸಿಂಗ್‌ ವೇಳೆ ಒಟ್ಟಾದ ಗರಿಷ್ಠ ಮೊತ್ತ. ಪಂದ್ಯದಲ್ಲಿ ಕೇವಲ 25 ರನ್‌ಗಳಿಂದ ಆರ್‌ಸಿಬಿ ಸೋಲೊಪ್ಪಿತು. ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳು ಹೀಗಿವೆ.

ಪಂದ್ಯದಲ್ಲಿ ಒಟ್ಟು 81 ಬೌಂಡಿಗಳು ಸಿಡಿದವು. ಇದರಲ್ಲಿ ಎರಡೂ ತಂಡಗಳದ್ದು ಸೇರಿ 43 ಫೋರ್ ಹಾಗೂ 38 ಸಿಕ್ಸರ್‌ಗಳು ಸೇರಿವೆ. ಟಿ20 ಪಂದ್ಯವೊಂದರಲ್ಲಿ ಇದು ಅತಿ ಹೆಚ್ಚು.

ಟಿ20 ಪಂದ್ಯವೊಂದರಲ್ಲಿ ಒಟ್ಟಾದ ಗರಿಷ್ಠ ಮೊತ್ತ

  • ಎಸ್‌ಆರ್‌ಎಚ್‌ vs ಆರ್‌ಸಿಬಿ (ಬೆಂಗಳೂರು, 2024) - 549 ರನ್
  • ಎಸ್‌ಆರ್‌ಎಚ್‌ vs ಎಂಐ (ಹೈದರಾಬಾದ್, 2024) - 523 ರನ್
  • ವೆಸ್ಸ್‌ ಇಂಡೀಸ್‌ vs ದಕ್ಷಿಣ ಆಫ್ರಿಕಾ (ಸೆಂಚುರಿಯನ್, 2023) - 517 ರನ್
  • ಮುಲ್ತಾನ್ ಸುಲ್ತಾನ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ (ರಾವಲ್ಪಿಂಡಿ, 2023) - 515 ರನ್
  • ಸರ್ರೆ vs ಮಿಡ್ಲ್‌ಸೆಕ್ಸ್ (ದಿ ಓವಲ್, 2023) - 506 ರನ್

ಇದನ್ನೂ ಓದಿ | ಚೇಸಿಂಗ್‌ನಲ್ಲಿ 262 ರನ್‌ ಗಳಿಸಿ 25 ರನ್‌ಗಳಿಂದ ಸೋತ ಆರ್‌ಸಿಬಿ; ವಿಶ್ವದಾಖಲೆಯ ಪಂದ್ಯದಲ್ಲಿ ಗೆದ್ದು ಬೀಗಿದ ಸನ್‌ರೈಸರ್ಸ್

ಟಿ20 ಪಂದ್ಯದಲ್ಲಿ ಸಿಡಿದ ಅತಿ ಹೆಚ್ಚು ಸಿಕ್ಸರ್‌ಗಳು

  • ಎಸ್‌ಆರ್‌ಎಚ್‌ vs ಆರ್‌ಸಿಬಿ (ಬೆಂಗಳೂರು, 2024) - 38
  • ಎಸ್‌ಆರ್‌ಎಚ್‌ vs ಎಂಐ (ಹೈದರಾಬಾದ್, 2024) - 38
  • ಬಾಲ್ಖ್ ಲೆಜೆಂಡ್ಸ್ vs ಕಾಬೂಲ್ ಜ್ವಾನ್ನ್ (ಶಾರ್ಜಾ, 2018) -‌ 37
  • ಜಮೈಕಾ ತಲ್ಲವಾಸ್ vs ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪೇಟ್ರಿಯಾಟ್ಸ್ (ಬಾಸ್ಸೆಟೆರೆ‌, 2019) -37

ಐಪಿಎಲ್‌ನಲ್ಲಿ ಎರಡನೇ ಇನ್ನಿಂಗ್ಸ್‌ ಗರಿಷ್ಠ ಸ್ಕೋರ್‌

  • ಆರ್‌ಸಿಬಿ vs ಎಸ್‌ಆರ್‌ಎಚ್‌ -262/7
  • ಮುಂಬೈ ಇಂಡಿತನ್ಸ್‌ vs ಎಸ್‌ಆರ್‌ಎಚ್‌ -246/5
  • ರಾಜಸ್ಥಾನ್‌ ರಾಯಲ್ಸ್‌ vs ಪಂಜಾಬ್‌ ಕಿಂಗ್ಸ್ -226/6
  • ರಾಜಸ್ಥಾನ್‌ ರಾಯಲ್ಸ್‌ vs ಸಿಎಸ್‌ಕೆ -223/5

ಐಪಿಎಲ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತ

  • ಎಸ್‌ಆರ್‌ಎಚ್‌ vs ಆರ್‌ಸಿಬಿ (ಬೆಂಗಳೂರು, 2024) -287/3
  • ಎಸ್‌ಆರ್‌ಎಚ್‌ vs ಮುಂಬೈ ಇಂಡಿಯನ್ಸ್‌ (ಹೈದರಾಬಾದ್, 2024) -277/3
  • ಕೆಕೆಆರ್‌ vs ಡಿಸಿ (ವೈಜಾಗ್, 2024) -272/7
  • ಆರ್‌ಸಿಬಿ vs ಪುಣೆ ವಾರಿಯರ್ಸ್‌ (ಬೆಂಗಳೂರು, 2013) -263/5
  • ಎಲ್‌ಎಸ್‌ಜಿ vs ಪಂಜಾಬ್‌ ಕಿಂಗ್ಸ್‌ (ಮೊಹಾಲಿ, 2023) 257/7

ಇದನ್ನೂ ಓದಿ | ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ; ಆರ್‌ಸಿಬಿ ವಿರುದ್ಧ ದಾಖಲೆಗಳ ಬೆಟ್ಟ ನಿರ್ಮಿಸಿ ತನ್ನದೇ ರೆಕಾರ್ಡ್ ಮುರಿದ ಎಸ್‌ಆರ್‌ಎಚ್‌

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner