ಬಾಲ್ಯದಲ್ಲಿ ಮೊಬೈಲ್ ಮಾರಾಟ, ಬಳಿಕ ವಿಮಾನ ನಿಲ್ದಾಣದಲ್ಲಿ ಕೆಲಸ: ಈಗ ಪಾಕಿಸ್ತಾನದ ಗೆಲುವಿನ 'ಸಿಕಂದರ್' ಆದ ಸಾಜಿದ್ ಖಾನ್
ಮುಲ್ತಾನ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್ ಲೈನ್‌ಅಪ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದ್ದು ಸಾಜಿದ್ ಖಾನ್. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನಕ್ಕೆ 75 ರನ್‌ಗಳ ಮುನ್ನಡೆ ತಂದುಕೊಟ್ಟರು. ಎರಡನೇ ಇನಿಂಗ್ಸ್ ನಲ್ಲೂ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮುಲ್ತಾನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮುಖಭಂಗ ಅನುಭವಿಸಿದ ನಂತರ ಪಾಕಿಸ್ತಾನ ತಂಡ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯು ಎರಡನೇ ಟೆಸ್ಟ್‌ನಲ್ಲಿ ಶಾಹೀನ್ ಆಫ್ರಿದಿ ಮತ್ತು ನಸೀಮ್ ಶಾ ಅವರಂತಹ ವೇಗದ ಬೌಲರ್‌ಗಳನ್ನು ಡ್ರಾಪ್ ಮಾಡಿತು. ಅವರ ಸ್ಥಾನದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ತಂಡದಲ್ಲಿ ಸೇರಿಸಿಕೊಂಡರು. ಅವರಲ್ಲಿ ಒಬ್ಬರು ಸಾಜಿದ್ ಖಾನ್.
ಮುಲ್ತಾನ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್ ಲೈನ್‌ಅಪ್ ಅನ್ನು ಸಂಪೂರ್ಣವಾಗಿ ನಾಶಪಡಿಸಿದ್ದು ಸಾಜಿದ್ ಖಾನ್. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನಕ್ಕೆ 75 ರನ್‌ಗಳ ಮುನ್ನಡೆ ತಂದುಕೊಟ್ಟರು. ಎರಡನೇ ಇನಿಂಗ್ಸ್ ನಲ್ಲೂ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರು ಪಂದ್ಯದ ಆಟಗಾರರಾಗಿ ಆಯ್ಕೆಯಾದರು. ಇಂದು ಇಡೀ ಪಾಕಿಸ್ತಾನದಲ್ಲಿ ಹೀರೋ ಆಗಿರುವ ಸಾಜಿದ್ಗೆ ಒಂದು ಕಾಲದಲ್ಲಿ ತುಂಬಾ ಕಷ್ಟದಲ್ಲಿದ್ದರು. ಮೊಬೈಲ್ ಮಾರಿ ಬದುಕಬೇಕಾದ ಪರಿಸ್ಥಿತಿಯಲ್ಲಿದ್ದರು.
ಸಾಜಿದ್‌ನ ಹೋರಾಟ ಹೇಗಿತ್ತು?
ಸಾಜಿದ್ ಖಾನ್ ಪಾಕಿಸ್ತಾನದ ಮರ್ದಾನ್ ನಗರದ ನಿವಾಸಿ. ಅವರು 8 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು. ತಂದೆ ತೀರಿಕೊಂಡ ನಂತರ ಮನೆಯ ಜವಾಬ್ದಾರಿ ಅವರ ತಲೆಯ ಮೇಲೆ ಬಿತ್ತು. ಅವರ ಅಣ್ಣ ರಿಕ್ಷಾ ಓಡಿಸಲು ಪ್ರಾರಂಭಿಸಿದರು. ಸಾಜಿದ್ ಖಾನ್ ತನ್ನ ಜೀವನೋಪಾಯಕ್ಕಾಗಿ ಮೊಬೈಲ್ ಫೋನ್ ಮಾರಾಟ ಮಾಡಲು ಪ್ರಾರಂಭಿಸಿದನು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶೇರ್ ಮಾಡಿರುವ ವಿಡಿಯೋದಲ್ಲಿ ಮೊಬೈಲ್ ಹೊರತಾಗಿ ಬ್ಯಾಟ್ ಮಾರಾಟ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಇದರಿಂದಲೇ ಅವರು ತಮ್ಮ ಮನೆಯನ್ನು ನಡೆಸುತ್ತಿದ್ದರು ಮತ್ತು ಕ್ರೀಡಾ ಅಗತ್ಯಗಳನ್ನು ಪೂರೈಸುತ್ತಿದ್ದರು.
ಕ್ರಿಕೆಟ್ ಬಿಟ್ಟು ದುಬೈ ವಿಮಾನ ನಿಲ್ದಾಣದಲ್ಲಿ ಕೆಲಸ
ಸಾಜಿದ್ ಖಾನ್ ಹೋರಾಟ ಇಲ್ಲಿಗೇ ಮುಗಿಯಲಿಲ್ಲ. ಅಂಡರ್-18 ಆಡಿದ ನಂತರ ಅವರಿಗೆ ಕ್ರಿಕೆಟ್ ಆಡಲು ಕೆಲವೇ ಕೆಲವು ಅವಕಾಶಗಳು ಸಿಕ್ಕವು. ಇದರಿಂದಾಗಿ ಅವರು ಆರ್ಥಿಕ ಸಮಸ್ಯೆ ಎದುರಿಸಲಾರಂಭಿಸಿದರು. ನಂತರ ಕ್ರಿಕೆಟ್ ಬಿಟ್ಟು ದುಬೈಗೆ ಹೋದರು. ಅಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಅವರು ಕ್ರಿಕೆಟ್‌ನಲ್ಲಿ ಎಷ್ಟು ಆಸಕ್ತಿ ಹೊಂದಿದ್ದರು ಎಂದರೆ ಅಲ್ಲಿಗೆ ಹೋದ ನಂತರವೂ ಆಟವನ್ನು ಆಡುವುದನ್ನು ಮುಂದುವರೆಸಿದರು.
ಐದು ದಿನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಿ ಎರಡು ದಿನ ಕ್ರಿಕೆಟ್ ಆಡುತ್ತಿದ್ದರು. ಆದರೆ ತಾಯಿಯ ಒತ್ತಾಯದ ಮೇರೆಗೆ ಸಾಜಿದ್ 6 ತಿಂಗಳೊಳಗೆ ವೀಸಾ ಅವಧಿ ಮುಗಿಯುವ ಮುನ್ನ ಪಾಕಿಸ್ತಾನಕ್ಕೆ ಮರಳಬೇಕಾಯಿತು. ಇದಾದ ನಂತರ ಅವರು ದೇಶೀಯ ಕ್ರಿಕೆಟ್‌ನಲ್ಲಿ ಪ್ರಯತ್ನಗಳನ್ನು ಮುಂದುವರೆಸಿದರು. ಅಂತಿಮವಾಗಿ 2021ರಲ್ಲಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದರು.
2021ರಲ್ಲಿ ಪದಾರ್ಪಣೆ
2021 ರಲ್ಲಿ ಜಿಂಬಾಬ್ವೆ ವಿರುದ್ಧ 28 ನೇ ವಯಸ್ಸಿನಲ್ಲಿ ಪಾಕಿಸ್ತಾನದ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ಸಾಜಿದ್ ಖಾನ್ ಪಡೆದರು. ಚೊಚ್ಚಲ ಪ್ರವೇಶದ ನಂತರ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಕಳೆದ 3 ವರ್ಷಗಳಲ್ಲಿ ಸಾಜಿದ್ ಕೇವಲ 9 ಪಂದ್ಯಗಳನ್ನು ಆಡಲು ಸಾಧ್ಯವಾಯಿತಷ್ಟೆ. ಅವರು ತಮ್ಮ 17 ಇನ್ನಿಂಗ್ಸ್‌ಗಳಲ್ಲಿ 34 ವಿಕೆಟ್‌ಗಳನ್ನು ಪಡೆದರು. 32 ವರ್ಷದ ಸಾಜಿದ್ ಇನ್ನೂ ಏಕದಿನ ಅಥವಾ ಟಿ20ಗೆ ಪಾದಾರ್ಪಣೆ ಮಾಡಿಲ್ಲ. ದೇಶೀಯ ಪಂದ್ಯಗಳಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. 68 ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ 246 ವಿಕೆಟ್‌ಗಳನ್ನು ಪಡೆದಿದ್ದಾರೆ. 38 ಲಿಸ್ಟ್ ಎ ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಅವರು ಬ್ಯಾಟಿಂಗ್ ಕೂಡ ಮಾಡಬಲ್ಲರು ಮತ್ತು ಪ್ರಥಮ ದರ್ಜೆಯಲ್ಲಿ 17ರ ಸರಾಸರಿಯಲ್ಲಿ 1647 ರನ್‌ಗಳನ್ನು ಗಳಿಸಿದ್ದಾರೆ.