ಬಿಸಿಸಿಐಗೆ ಸವಾಲು, ಐಪಿಎಲ್ ಜತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಿಸಿಸಿಐಗೆ ಸವಾಲು, ಐಪಿಎಲ್ ಜತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ

ಬಿಸಿಸಿಐಗೆ ಸವಾಲು, ಐಪಿಎಲ್ ಜತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ

Pakistan Cricket Board: ಬಿಸಿಸಿಐಗೆ ಸವಾಲು, ಐಪಿಎಲ್ ಜೊತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ತನ್ನ 10ನೇ ಆವೃತ್ತಿಯ ಟೂರ್ನಿಗೆ ವೇಳಾಪಟ್ಟಿ ಪ್ರಕಟಿಸಿದೆ.

ಬಿಸಿಸಿಐಗೆ ಸವಾಲು, ಐಪಿಎಲ್ ಜತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ
ಬಿಸಿಸಿಐಗೆ ಸವಾಲು, ಐಪಿಎಲ್ ಜತೆಗೆ ಪೈಪೋಟಿ ನೀಡುವ ಸಲುವಾಗಿ ಪಾಕಿಸ್ತಾನ ಪ್ರೀಮಿಯರ್​ ಲೀಗ್ ವೇಳಾಪಟ್ಟಿ ಪ್ರಕಟ

ಚಾಂಪಿಯನ್ಸ್ ಟ್ರೋಫಿಯ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌ನ ವೇಳಾಪಟ್ಟಿ ಪ್ರಕಟಿಸಿದ್ದು, ಮಿಲಿಯನ್ ಡಾಲರ್​ ಟೂರ್ನಿ ಐಪಿಎಲ್​ ಜತೆಗೆ ಘರ್ಷಣೆಗೆ ಇಳಿದಿದೆ. ಪಿಎಸ್‌ಎಲ್​ 10ನೇ ಟೂರ್ನಿಯು ಏಪ್ರಿಲ್ 11ರಂದು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಎರಡು ಬಾರಿಯ ಚಾಂಪಿಯನ್ ಲಾಹೋರ್ ಖಲಂದರ್ ನಡುವೆ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಮೇ 18 ರಂದು ಫೈನಲ್ ಪಂದ್ಯ ನಡೆಯಲಿದೆ. ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಮೇ 25ರಂದು ನಡೆಯಲಿದೆ.

ಪಿಸಿಬಿ ಪ್ರಕಟಿಸಿದ ಈ ವೇಳಾಪಟ್ಟಿ ಗಮನಿಸಿದರೆ, ಬಿಸಿಸಿಐಗೆ ಸವಾಲು ಹಾಕಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ. ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಮೈದಾನಗಳು 34 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ನಡೆಯಲಿವೆ. ಮೇ 13 ರಂದು ಕ್ವಾಲಿಫೈಯರ್, ಮೇ 14 ರಂದು ಎಲಿಮಿನೇಟರ್ 1 ಮತ್ತು ಮೇ 16 ರಂದು ಎಲಿಮಿನೇಟರ್ 2 ನಡೆಯಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯವು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಋತುವಿನಲ್ಲಿ ಮೂರು ಡಬಲ್-ಹೆಡರ್‌ಗಳು ಸಹ ಇರುತ್ತವೆ.

ಪಿಎಸ್​ಎಲ್ ಆದಾಯದ ಮೇಲೆ ಪರಿಣಾಮ

ರಾವಲ್ಪಿಂಡಿಯಲ್ಲಿ 11 ಪಂದ್ಯಗಳು, ಲಾಹೋರ್‌ನಲ್ಲಿ 13 ಪಂದ್ಯಗಳು ನಡೆಯಲಿವೆ. ಕರಾಚಿ ಮತ್ತು ಮುಲ್ತಾನ್ ತಲಾ 5 ಪಂದ್ಯಗಳನ್ನು ಆಯೋಜಿಸಲಿವೆ. ಐಪಿಎಲ್ ಜೊತೆಗೆ ಸೆಣಸಾಟ ನಡೆಸುವ ಮೂಲಕ ಪಿಎಸ್​ಎಲ್​ ನೋಡುಗರ ಸಂಖ್ಯೆ ಕುಸಿಯಬಹುದು. ಇದು ಪ್ರಸಾರ ಹಕ್ಕುಗಳಿಂದ ಬರುವ ಆದಾಯದ ಮೇಲೂ ಪರಿಣಾಮ ಬೀರಬಹುದು.

ಪಾಕಿಸ್ತಾನ ಸೂಪರ್ ಲೀಗ್ 2025 ವೇಳಾಪಟ್ಟಿ

ಏಪ್ರಿಲ್ 11 - ಇಸ್ಲಾಮಾಬಾದ್ ಯುನೈಟೆಡ್ vs ಲಾಹೋರ್ ಖಲಂದರ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 12 - ಪೇಶಾವರ್ ಝಲ್ಮಿ vs ಕ್ವೆಟ್ಟಾ ಗ್ಲಾಡಿಯೇಟರ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ; ಕರಾಚಿ ಕಿಂಗ್ಸ್ vs ಮುಲ್ತಾನ್ ಸುಲ್ತಾನ್ಸ್, ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣ, ಕರಾಚಿ

ಏಪ್ರಿಲ್ 13 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಲಾಹೋರ್ ಖಲಂದರ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 14 – ಇಸ್ಲಾಮಾಬಾದ್ ಯುನೈಟೆಡ್ vs ಪೇಶಾವರ್ ಝಲ್ಮಿ, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 15 – ಕರಾಚಿ ಕಿಂಗ್ಸ್ vs ಲಾಹೋರ್ ಖಲಂದರ್ಸ್, ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣ, ಕರಾಚಿ

ಏಪ್ರಿಲ್ 16 – ಇಸ್ಲಾಮಾಬಾದ್ ಯುನೈಟೆಡ್ vs ಮುಲ್ತಾನ್ ಸುಲ್ತಾನ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 18 – ಕರಾಚಿ ಕಿಂಗ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್, ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣ, ಕರಾಚಿ

ಏಪ್ರಿಲ್ 19 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 20 – ಕರಾಚಿ ಕಿಂಗ್ಸ್ vs ಇಸ್ಲಾಮಾಬಾದ್ ಯುನೈಟೆಡ್, ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣ, ಕರಾಚಿ

ಏಪ್ರಿಲ್ 21 – ಕರಾಚಿ ಕಿಂಗ್ಸ್ vs ಪೇಶಾವರ್ ಝಲ್ಮಿ, ನ್ಯಾಷನಲ್ ಬ್ಯಾಂಕ್ ಕ್ರೀಡಾಂಗಣ, ಕರಾಚಿ

ಏಪ್ರಿಲ್ 22 – ಮುಲ್ತಾನ್ ಸುಲ್ತಾನ್ಸ್ vs ಲಾಹೋರ್ ಖಲಂದರ್ಸ್, ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 23 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ

ಏಪ್ರಿಲ್ 24 – ಲಾಹೋರ್ ಖಲಂದರ್ಸ್ vs ಪೇಶಾವರ್ ಝಲ್ಮಿ, ಗಡ್ಡಾಫಿ ಕ್ರೀಡಾಂಗಣ, ಲಾಹೋರ್

ಏಪ್ರಿಲ್ 25 ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್, ಗಡಾಫಿ ಕ್ರೀಡಾಂಗಣ, ಲಾಹೋರ್

ಏಪ್ರಿಲ್ 26 ಲಾಹೋರ್ ಖಲಂದರ್ vs ಮುಲ್ತಾನ್ ಸುಲ್ತಾನ್ಸ್, ಗಡಾಫಿ ಕ್ರೀಡಾಂಗಣ, ಲಾಹೋರ್

ಏಪ್ರಿಲ್ 27 ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಪೇಶಾವರ್ ಝಲ್ಮಿ, ಗಡಾಫಿ ಕ್ರೀಡಾಂಗಣ, ಲಾಹೋರ್

ಏಪ್ರಿಲ್ 29 ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್ಸ್, ಗಡಾಫಿ ಕ್ರೀಡಾಂಗಣ, ಲಾಹೋರ್

ಏಪ್ರಿಲ್ 30 ಲಾಹೋರ್ ಖಲಂದರ್ಸ್ vs ಇಸ್ಲಾಮಾಬಾದ್ ಯುನೈಟೆಡ್, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 1 ಮುಲ್ತಾನ್ ಸುಲ್ತಾನ್ಸ್ vs ಕರಾಚಿ ಕಿಂಗ್ಸ್, ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ; ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 2 – ಪೇಶಾವರ್ ಝಲ್ಮಿ vs ಇಸ್ಲಾಮಾಬಾದ್ ಯುನೈಟೆಡ್, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 3 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಇಸ್ಲಾಮಾಬಾದ್ ಯುನೈಟೆಡ್, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 4 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್, ಗಡ್ಡಾಫಿ ಕ್ರೀಡಾಂಗಣ, ಲಾಹೋರ್

ಮೇ 5 – ಮುಲ್ತಾನ್ ಸುಲ್ತಾನ್ಸ್ vs ಪೇಶಾವರ್ ಝಲ್ಮಿ, ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ

ಮೇ 7 – ಇಸ್ಲಾಮಾಬಾದ್ ಯುನೈಟೆಡ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಮೇ 8 – ಪೇಶಾವರ್ ಝಲ್ಮಿ vs ಕರಾಚಿ ಕಿಂಗ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಮೇ 9 – ಪೇಶಾವರ್ ಝಲ್ಮಿ vs ಲಾಹೋರ್ ಖಲಂದರ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಮೇ 10 – ಮುಲ್ತಾನ್ ಸುಲ್ತಾನ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್, ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣ; ಇಸ್ಲಾಮಾಬಾದ್ ಯುನೈಟೆಡ್ vs ಕರಾಚಿ ಕಿಂಗ್ಸ್, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಮೇ 13 - ಕ್ವಾಲಿಫೈಯರ್ 1, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ

ಮೇ 14 - ಎಲಿಮಿನೇಟರ್ 1, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 16 - ಎಲಿಮಿನೇಟರ್ 2, ಗಡಾಫಿ ಕ್ರೀಡಾಂಗಣ, ಲಾಹೋರ್

ಮೇ 18 - ಫೈನಲ್, ಗಡಾಫಿ ಕ್ರೀಡಾಂಗಣ, ಲಾಹೋರ್

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner