ಕಿವೀಸ್ ಬಳಿಕ ಆಸೀಸ್ ವಿರುದ್ಧವೂ ಸೋತ ಪಾಕ್; ಭಾರತದಲ್ಲಿ ವಿಶ್ವಕಪ್ ಗೆಲ್ಲುವ ಕನಸಿಗೆ ಆರಂಭಿಕ ಹಿನ್ನಡೆ
WC Warm-Up: ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ, ಮಂಗಳವಾರ ಕಾಂಗರೂಗಳ ವಿರುದ್ಧವೂ ಮುಗ್ಗರಿಸಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (Pakistan vs Australia) ತಂಡವು 14 ರನ್‌ಗಳಿಂದ ಸೋಲನುಭವಿಸಿದೆ. ಆ ಮೂಲಕ ಭಾರತದಲ್ಲಿ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿಯೂ ಬಾಬರ್ ಬಳಗ ಗೆಲುವು ಕಾಣುವಲ್ಲಿ ವಿಫಲವಾಗಿದೆ.
ಟ್ರೆಂಡಿಂಗ್ ಸುದ್ದಿ
ಏಷ್ಯಾಕಪ್‌ನಲ್ಲಿ ಭಾರತ ತಂಡದ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನವು, ಭಾರತದ ನೆಲದಲ್ಲಿ ವಿಶ್ವಕಪ್ ಆರಂಭಕ್ಕೂ ಮುನ್ನ ಚಿಂತೆಗೊಳಗಾಗಿದೆ. ಮುಖ್ಯವಾಗಿ ತಂಡದ ಆರಂಭಿಕರು ಮತ್ತು ಬೌಲರ್‌ಗಳ ಫಾರ್ಮ್ ತಂಡಕ್ಕೆ ಕಳವಳಕಾರಿಯಾಗಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದ ತಂಡ, ಮಂಗಳವಾರ ಕಾಂಗರೂಗಳ ವಿರುದ್ಧ ಮುಗ್ಗರಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಡೇವಿಡ್ ವಾರ್ನರ್ 48 ರನ್ ಹಾಗೂ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕದ (71 ಎಸೆತಗಳಲ್ಲಿ 77) ಕೊಡುಗೆಯಿಂದ ಏಳು ವಿಕೆಟ್ ಕಳೆದುಕೊಂಡು 351 ರನ್ ಗಳಿಸಿತು. ಬೃಹತ್ ಮೊತ್ತ ಚೇಸಿಂಗ್ ಮಾಡಿದ ಪಾಕಿಸ್ತಾನವು ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡಿತು. ಈ ನಡುವೆ ನಾಯಕ ಬಾಬರ್ ಅಜಾಮ್ 90 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ನಡುವೆ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ 85 ಎಸೆತಗಳಲ್ಲಿ 83 ರನ್ ಗಳಿಸಿ ತಂಡದ ಗೆಲುವಿಗೆ ಪ್ರಯತ್ನಿಸಿದರು. ಆದರೆ, ಅಂತಿಮವಾಗಿ 47.4 ಓವರ್‌ಗಳಲ್ಲಿ 337 ರನ್ ಗಳಿಸಿದ್ದ ಪಾಕಿಸ್ತಾನವು ಆಲೌಟ್ ಆಯ್ತು.
ತಂಡದ ಆರಂಭಿಕ ಆಟಗಾರ ಫಖರ್ ಜಮಾನ್ 22 ರನ್ ಗಳಿಸಿದರೆ, ಇಮಾಮ್-ಉಲ್-ಹಕ್ 16 ರನ್ ಕಲೆಹಾಕಿ ಔಟಾದರು. ಅಬ್ದುಲ್ಲಾ ಶಫೀಕ್ 12 ರನ್ ಗಳಿಸಿ ನಿರಾಸೆ ಮೂಡಿಸಿದರು. 15 ಓವರ್‌ಗಳಲ್ಲಿ 83 ರನ್ ಗಳಿಸಿದ್ದಾಗ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಬಾಬರ್ ಮತ್ತು ಇಫ್ತಿಕರ್ ಆಸರೆಯಾದರು. ಈ ನಡುವೆ ಗೆಲ್ಲುವ ಭರವಸೆಯಲ್ಲಿದ್ದ ನಾಯಕ, ಕೆಳ ಕ್ರಮಾಂಕದ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಪಿಚ್‌ನಿಂದ ಹೊರಬಂದರು. ಆಲ್‌ರೌಂಡರ್ ಮೊಹಮ್ಮದ್ ನವಾಜ್ 42 ಎಸೆತಗಳಲ್ಲಿ 50 ರನ್ ಗಳಿಸಿ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರು. ಆದರೆ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಗುರಿ ಮುಟ್ಟುವ ಅಂತರದಲ್ಲಿದ್ದರೂ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿತು.
ಪಾಕಿಸ್ತಾನ ಮತ್ತು ಫೀಲ್ಡಿಂಗ್, ಎಂದೂ ಮುಗಿಯದ ಲವ್ ಸ್ಟೋರಿ; ಪಾಕ್ ಆಟಗಾರರ ಕಾಲೆಳೆದ ಧವನ್
ಪಾಕಿಸ್ತಾನ ಕ್ರಿಕೆಟ್ ತಂಡವು, ಫಿಲ್ಡಿಂಗ್ ವಿಚಾರವಾಗಿ ಆಗಾಗ ಟ್ರೋಲ್‌ಗೆ ಆಹಾರವಾಗುತ್ತದೆ. ಇತ್ತೀಚೆಗೆ ಏಷ್ಯಾಕಪ್‌ನಲ್ಲೂ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರ ಕಳಪೆ ಫೀಲ್ಡಿಂಗ್ ಭಾರಿ ಟ್ರೋಲ್ ಆಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲೂ ಪಾಕ್ ತಂಡದ ಆಟಗಾರರ ಕಳಪೆ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದೆ. ಈ ಬಾರಿ ಇದನ್ನು ಟ್ರೋಲ್ ಮಾಡಿರುವವರು ಭಾರತ ಪ್ರಮುಖ ಕ್ರಿಕೆಟಿಗ.
ವಿಭಾಗ