ಕನ್ನಡ ಸುದ್ದಿ  /  ಕ್ರಿಕೆಟ್  /  ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ; ಬಲಿಷ್ಠ ಪ್ಲೇಯಿಂಗ್ Xi ಇಲ್ಲಿದೆ

ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ; ಬಲಿಷ್ಠ ಪ್ಲೇಯಿಂಗ್ XI ಇಲ್ಲಿದೆ

India vs Pakistan: ಟಿ20 ವಿಶ್ವಕಪ್​​ 2024ರ​ ಟೂರ್ನಿಯ 19ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದಿದೆ.

IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ
IND vs PAK: ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ

ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 19ನೇ ಪಂದ್ಯದಲ್ಲಿ ರೋಹಿತ್​ ಶರ್ಮಾ ನೇತೃತ್ವದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಭಾರತ ತಂಡ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಮೆಗಾ ಪಂದ್ಯ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್​​​ನಲ್ಲಿ ಮಳೆಯ ಕಾರಣ ಟಾಸ್ ಪ್ರಕ್ರಿಯೆ ವಿಳಂಬವಾಯಿತು. 7.30ಕ್ಕೆ ಟಾಸ್ ಆರಂಭಗೊಳ್ಳಬೇಕಿತ್ತು. ಆದರೆ, ನಿರಂತರ ಸುರಿದ ಮಳೆಯಿಂದಾಗಿ 30 ನಿಮಿಷಗಳ ವಿಳಂಬ ಮಾಡಲಾಯಿತು. ಸರಿಯಾಗಿ 8 ಗಂಟೆಗೆ ಟಾಸ್ ಆರಂಭಗೊಂಡಿತು.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

ಪಾಕಿಸ್ತಾನ (ಪ್ಲೇಯಿಂಗ್ XI): ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಉಸ್ಮಾನ್ ಖಾನ್, ಫಖರ್ ಜಮಾನ್, ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಅಮೀರ್.

ಟಿ20 ವಿಶ್ವಕಪ್​​ನಲ್ಲಿ ಹೆಡ್​ ಟು ಹೆಡ್ ರೆಕಾರ್ಡ್

ಇಂಡೋ-ಪಾಕ್ ನಡುವಿನ ಪಂದ್ಯದ ತೀವ್ರತೆ ಹೆಚ್ಚಾಗಿದೆ. 2007ರ ಟಿ20 ವಿಶ್ವಕಪ್​ನಿಂದಲೂ ಮುಖಾಮುಖಿಯಾಗ್ತಿರುವ ಉಭಯ ತಂಡಗಳು, 8ನೇ ಬಾರಿಗೆ ಸೆಣಸಾಟಕ್ಕೆ ಸಿದ್ಧಗೊಂಡಿವೆ. ವಿಶ್ವಕಪ್ ಇತಿಹಾಸದಲ್ಲಿ ಹಿಂದಿನ 7 ಪಂದ್ಯಗಳಲ್ಲಿ ಪಾಕಿಸ್ತಾನದ ಮೇಲೆ ಭಾರತ ಮೇಲುಗೈ ಸಾಧಿಸಿದೆ. ಭಾರತ 6 ಬಾರಿ, ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಮುಖಾಮುಖಿಯಾದ 2ರಲ್ಲಿ ಭಾರತ ಎರಡೂ ಬಾರಿ ಗೆದ್ದಿದೆ. 2021ರಲ್ಲಿ ಭಾರತದ ವಿರುದ್ಧ ಪಾಕ್ ಗೆದ್ದಿತ್ತು.

ಸೋತು ಗೆದ್ದವರ ನಡುವೆ ಫೈಟ್

ಪ್ರಸಕ್ತ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಅಭಿಯಾನ ಆರಂಭಿಸಿದೆ. ಐರ್ಲೆಂಡ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿತ್ತು. ಆದರೆ, ಪಾಕಿಸ್ತಾನ ತಂಡವು ತನ್ನ ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದೆ. ಕ್ರಿಕೆಟ್ ಕೂಸು ಅಮೆರಿಕ ವಿರುದ್ಧ ಬಾಬರ್ ಪಡೆ, ಶರಣಾಗಿತ್ತು. ಸೂಪರ್ ಓವರ್​​ನಲ್ಲಿ 5 ರನ್​ಗಳ ಅಂತರದಿಂದ ಸೋತಿತ್ತು.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾ, ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಪವರ್​​​ಪ್ಲೇನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಗೆಲುವಿಗೆ ಕಾರಣರಾಗಿದ್ದರು. ಅಂದು ಕೊಹ್ಲಿ 52 ಎಸೆತಗಳಲ್ಲಿ ಅಜೇಯ 82 ರನ್ ಚಚ್ಚಿದ್ದರು. ಕೊನೆಯ 3 ಓವರ್​​ಗಳಲ್ಲಿ 48 ರನ್​ಗಳನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದರು.

ನ್ಯೂಯಾರ್ಕ್​​ನಲ್ಲೇ ಪಂದ್ಯವೇಕೆ?

ಉಭಯ ತಂಡಗಳ ನಡುವಿನ ಸಮರಕ್ಕೆ ನ್ಯೂಯಾರ್ಕ್ ಸಿದ್ಧಗೊಂಡಿದೆ. ಈ ಪಂದ್ಯಕ್ಕೆ 34,000 ಪ್ರೇಕ್ಷಕರ ಸಾಮರ್ಥ್ಯವುಳ್ಳ ತಾತ್ಕಾಲಿಕ ಮೈದಾನ ಈ ವೇದಿಕೆ ಒದಗಿಸಲಿದೆ. ಆದರೆ ಈ ಪಂದ್ಯ ನ್ಯೂಯಾರ್ಕ್​ನಲ್ಲೇ ನಡೆಸಲು ಪ್ರಮುಖ ಕಾರಣ ಇದೆ. ಅಮೆರಿಕದಲ್ಲಿ 7,11,000 ಭಾರತೀಯ ಮತ್ತು 1,00,000 ಪಾಕಿಸ್ತಾನ ಮೂಲದ ಜನರು ವಾಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಪಂದ್ಯವನ್ನು ನಡೆಸಲಾಗ್ತಿದೆ. ಈ ಪಂದ್ಯದಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತೆ ಒದಿಸಲಾಗಿದೆ.

ಇನ್ನಷ್ಟು ಟಿ20 ವಿಶ್ವಕಪ್​ 2024 ಪಂದ್ಯಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ವರ್ಲ್ಡ್‌ಕಪ್ 2024