ಅಫ್ಘನ್ ಎದುರು ಸರಣಿ ವೈಟ್​ವಾಶ್; ಏಷ್ಯಾಕಪ್​ಗೂ ಮುನ್ನ ಏಕದಿನ ಕ್ರಿಕೆಟ್​ಗೆ ಪಾಕಿಸ್ತಾನ ಅಧಿಪತಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಫ್ಘನ್ ಎದುರು ಸರಣಿ ವೈಟ್​ವಾಶ್; ಏಷ್ಯಾಕಪ್​ಗೂ ಮುನ್ನ ಏಕದಿನ ಕ್ರಿಕೆಟ್​ಗೆ ಪಾಕಿಸ್ತಾನ ಅಧಿಪತಿ

ಅಫ್ಘನ್ ಎದುರು ಸರಣಿ ವೈಟ್​ವಾಶ್; ಏಷ್ಯಾಕಪ್​ಗೂ ಮುನ್ನ ಏಕದಿನ ಕ್ರಿಕೆಟ್​ಗೆ ಪಾಕಿಸ್ತಾನ ಅಧಿಪತಿ

Pakistan vs Afghanistan: ಅಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್​ವಾಶ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ತಂಡವು, ಏಕದಿನ ಕ್ರಿಕೆಟ್​ನಲ್ಲಿ ನಂಬರ್ ಶ್ರೇಯಾಂಕ ಪಡೆದಿದೆ.

ಏಷ್ಯಾಕಪ್​ಗೂ ಮುನ್ನ ಏಕದಿನ ಕ್ರಿಕೆಟ್​ಗೆ ಪಾಕಿಸ್ತಾನ ಅಧಿಪತಿ.
ಏಷ್ಯಾಕಪ್​ಗೂ ಮುನ್ನ ಏಕದಿನ ಕ್ರಿಕೆಟ್​ಗೆ ಪಾಕಿಸ್ತಾನ ಅಧಿಪತಿ.

ಅಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್​ ಸ್ವೀಪ್ ಸಾಧಿಸಿದ ಪಾಕಿಸ್ತಾನ, ಏಷ್ಯಾಕಪ್, ವಿಶ್ವಕಪ್​​ ಮುನ್ನ ಏಕದಿನ ಕ್ರಿಕೆಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಸರಣಿ ಗೆಲುವಿನೊಂದಿಗೆ ಆಗಸ್ಟ್​ 30ರಿಂದ ಶುರುವಾಗುವ ಏಷ್ಯಾಕಪ್​​ಗೂ ಸಿದ್ಧತೆಯ ಭಾಗವಾಗಿತ್ತು. ನಿನ್ನೆ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನದ ಎದುರು ಅಫ್ಘನ್​ 59 ರನ್​ಗಳಿಂದ ಶರಣಾಯಿತು.

ಸದ್ಯ ಇನ್ನೆರಡು ತಿಂಗಳಲ್ಲಿ ಮಹತ್ವದ ಎರಡು ಟೂರ್ನಿಗಳಿದ್ದು, ಅದಕ್ಕೂ ಮುನ್ನವೇ ರ್ಯಾಂಕಿಂಗ್​​ನಲ್ಲಿ ನಂಬರ್ 1 ತಂಡವಾಗಿ ಕಣಕ್ಕಿಳಿಯಲು ಪಾಕ್​ ಸಿದ್ಧತೆ ಆರಂಭಿಸಿದೆ. 3ನೇ ಏಕದಿನ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್​​ನಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು. ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ಸಡ್ಡು ಹೊಡೆದು ರ್ಯಾಂಕಿಂಗ್​​​ನಲ್ಲಿ ನಂಬರ್​ ವನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಸದ್ಯ ಪಾಕ್ 118 ರೇಟಿಂಗ್ಸ್​ (2724 ಅಂಕ), ಆಸಿಸ್ 118 ರೇಟಿಂಗ್ಸ್​ (2714 ಅಂಕ) ಹೊಂದಿದೆ.

ಮೂರನೇ ಸ್ಥಾನದಲ್ಲಿ ಭಾರತ

ಇದೀಗ ಏಷ್ಯಾಕಪ್​​ನಲ್ಲಿ ಇದೇ ಭರ್ಜರಿ ಪ್ರದರ್ಶನ ಮುಂದುವರೆಸಿದರೆ, ನಂಬರ್​ 1 ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಸದ್ಯ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 113 ರೇಟಿಂಗ್ಸ್​ (4081 ಅಂಕ) ಪಡೆದು 3ನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್​ 104 ರೇಟಿಂಗ್ಸ್​ (2806 ಅಂಕ), ಇಂಗ್ಲೆಂಡ್ 101 ರೇಟಿಂಗ್ಸ್​ (2426 ಅಂಕ) ಪಡೆದು ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

ಪಾಕಿಸ್ತಾನಕ್ಕೆ ಭರ್ಜರಿ ಜಯ

ಅಫ್ಘನ್ ಎದುರು ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿತ್ತು. ಆದರೆ ಈ ಸ್ಪರ್ಧಾತ್ಮಕ ಮೊತ್ತ ಗುರಿ ಬೆನ್ನತ್ತಿದ ಅಫ್ಘನ್, ಪಾಕಿಸ್ತಾನ ಬೌಲರ್​ಗಳ ದಾಳಿಗೆ ಶರಣಾಯಿತು. 48.4 ಓವರ್​​ಗಳಲ್ಲಿ 209 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 59 ರನ್​ಗಳಿಂದ ಸೋಲೊಪ್ಪಿಕೊಂಡಿತು. ಅಲ್ಲದೆ, 3-0 ಅಂತರದಲ್ಲಿ ಸರಣಿ ಸೋತು ಮುಖಭಂಗಕ್ಕೆ ಒಳಗಾಯಿತು.

ಆಗಸ್ಟ್ 30ರಿಂದ ಏಷ್ಯಾಕಪ್

ಏಷ್ಯಾಕಪ್ ಟೂರ್ನಿಗೂ ಮುನ್ನ ಏಕದಿನ ಸರಣಿ ಗೆದ್ದು ಭರ್ಜರಿ ಲಯಕ್ಕೆ ಮರಳಿದೆ. ಆಗಸ್ಟ್ 30ರಿಂದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ತಂಡವನ್ನು ಎದುರಿಸಲಿದೆ. ಆ ಬಳಿಕ ಸೆಪ್ಟೆಂಬರ್​​ 2ರಂದು ರೋಹಿತ್​ ಶರ್ಮಾ ನಾಯಕತ್ವದ ಭಾರತ ತಂಡವು, ಬಾಬರ್ ಅಜಮ್ ಸಾರಥ್ಯದ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

Whats_app_banner