ಐಪಿಎಲ್‌ನಲ್ಲಿ ಆಡೋದು ಪ್ರತಿಯೊಬ್ಬ ಕ್ರಿಕೆಟಿಗನ ಬಯಕೆ, ಅವಕಾಶ ಸಿಕ್ರೆ ಖಂಡಿತಾ ಆಡ್ತೇನೆ ಎಂದ ಪಾಕ್‌ ವೇಗಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್‌ನಲ್ಲಿ ಆಡೋದು ಪ್ರತಿಯೊಬ್ಬ ಕ್ರಿಕೆಟಿಗನ ಬಯಕೆ, ಅವಕಾಶ ಸಿಕ್ರೆ ಖಂಡಿತಾ ಆಡ್ತೇನೆ ಎಂದ ಪಾಕ್‌ ವೇಗಿ

ಐಪಿಎಲ್‌ನಲ್ಲಿ ಆಡೋದು ಪ್ರತಿಯೊಬ್ಬ ಕ್ರಿಕೆಟಿಗನ ಬಯಕೆ, ಅವಕಾಶ ಸಿಕ್ರೆ ಖಂಡಿತಾ ಆಡ್ತೇನೆ ಎಂದ ಪಾಕ್‌ ವೇಗಿ

Hasan Ali on IPL: ವಿಶ್ವದ ಜನಪ್ರಿಯ ಹಾಗೂ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿರುವ ಐಪಿಎಲ್‌ನಲ್ಲಿ ಆಡುವುದು ಬಹುತೇಕ ಎಲ್ಲಾ ಕ್ರಿಕೆಟಿಗರ ಆಸೆ. ಈ ಬಯಕೆ ಪಾಕಿಸ್ತಾನ ಕ್ರಿಕೆಟಿಗರಿಗೂ ಇದೆ. ಇದೀಗ ಪಾಕ್‌ ವೇಗಿಯೊಬ್ಬರು ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ ಪಾಕ್ ವೇಗಿ ಹಸನ್‌ ಅಲಿ
ಐಪಿಎಲ್‌ನಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ ಪಾಕ್ ವೇಗಿ ಹಸನ್‌ ಅಲಿ

ಐಪಿಎಲ್‌ 2024ರ (IPL 2023) ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು (IPL 2024 auction) ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಪಾಕಿಸ್ತಾನದ ಸ್ಟಾರ್ ವೇಗಿ ಹಸನ್ ಅಲಿ (Hasan Ali), ಐಪಿಎಲ್ ಟೂರ್ನಿಯಲ್ಲಿ ಆಡುವ ಹೆಬ್ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪಾಕ್‌ ಆಟಗಾರರಿಗೆ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಆಡುವ ಅವಕಾಶವಿಲ್ಲ. ಆದರೆ, ಅವಕಾಶ ಸಿಕ್ಕರೆ ಖಂಡಿತವಾಗಿಯೂ ಟೂರ್ನಿಯಲ್ಲಿ ಆಡುವುದಾಗಿ ಭಾರತದಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ್ದ ಅಲಿ ಹೇಳಿದ್ದಾರೆ.

ಇದನ್ನೂ ಓದಿ | ಮರಳಿ ಮುಂಬೈ ಸೇರಿದ ಬಳಿಕ ಪಾಂಡ್ಯ ಮೊದಲ ಪ್ರತಿಕ್ರಿಯೆ; ಹಿತವೆನಿಸುತ್ತಿದೆ ಎಂದ ಹಾರ್ದಿಕ್

2008ರಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ಭಾಗವಹಿಸಿದ್ದರು. ಆದರೆ ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕ್‌ ಆಟಗಾರರನ್ನು ಐಪಿಎಲ್‌ನಲ್ಲಿ ಭಾಗವಹಿಸುವುದರಿಂದ ನಿಷೇಧಿಸಲಾಯಿತು. ಚೊಚ್ಚಲ ಋತುವಿನಲ್ಲಿ ಶೋಯೆಬ್ ಅಖ್ತರ್, ಉಮರ್ ಗುಲ್ ಮತ್ತು ಕಮ್ರಾನ್ ಅಕ್ಮಲ್ ಅವರಂಥ ದಿಗ್ಗಜ ಕ್ರಿಕೆಟಿಗರು ಟೂರ್ನಿಯಲ್ಲಿ ಆಡಿ ಗಮನ ಸೆಳೆದಿದ್ದರು.

ಅವಕಾಶ ಸಿಕ್ಕರೆ ಖಂಡಿತ ಆಡುತ್ತೇನೆ

“ಪ್ರತಿಯೊಬ್ಬ ಆಟಗಾರ ಕೂಡಾ ಐಪಿಎಲ್ ಟೂರ್ನಿಯಲ್ಲಿ ಆಡಬೇಕೆಂದು ಬಯಸುತ್ತಾನೆ. ನನ್ನ ಆಸೆ ಕೂಡಾ ಅದೇ. ಐಪಿಎಲ್‌ ವಿಶ್ವದ ಅತಿದೊಡ್ಡ ಲೀಗ್‌ಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಏನಾದರೂ ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡುತ್ತೇನೆ” ಎಂದು ಸಾಮಾ ಲೌಂಜ್‌ನಲ್ಲಿ (Samaa Lounge) ಹಸನ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ | ಆರ್‌ಸಿಬಿ ಸೇರಿಕೊಂಡ ಕ್ಯಾಮರೂನ್‌ ಗ್ರೀನ್;‌‌ ಚಿನ್ನಸ್ವಾಮಿಯಲ್ಲಿ ಆಡಲು ಕಾತರನಾಗಿದ್ದೇನೆ ಎಂದ ಆಲ್‌ರೌಂಡರ್

ಐಪಿಎಲ್ 2024ರ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ಎಲ್ಲಾ ಫ್ರಾಂಚೈಸಿಗಳು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಸಿದ್ಧವಾಗಿವೆ. ಈಗಾಗಲೇ ಆಟಗಾರರ ಬಿಡುಗಡೆ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟಗೊಂಡಿದ್ದು, ಟ್ರೇಡಿಂಗ್‌ ವಿಂಡೋ ಇನ್ನೂ ತೆರೆದಿದೆ. ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡಿಂಗ್‌ ಮೂಲಕ ಮರಳಿ ಕರೆತಂದಿದೆ. ಮತ್ತೊಂದೆಡೆ, ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಬಿಟ್ಟುಕೊಟ್ಟಿದೆ.

ಪಾಕ್ ಆಟಗಾರರಾದ ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್ ಮತ್ತು ಮಿಸ್ಬಾ‌ ಉಲ್ ಹಕ್ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ ಆಡಿದ್ದರು. 2008ರ ನವೆಂಬರ್ 26ರಂದು‌ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇಂಡೋ-ಪಾಕ್‌ ಸಂಬಂಧ ಹದಹಗೆಟ್ಟ ಬಳಿಕ ಭಾರತದಿಂದ ಪಾಕಿಸ್ತಾನ ದೂರ ಉಳಿದಿದೆ. ಆ ನಂತರ ಪಾಕಿಸ್ತಾನ ಆಟಗಾರರು ಲೀಗ್‌ನಲ್ಲಿ ಆಡಿಲ್ಲ. ಈ ನಡುವೆ ಪಾಕಿಸ್ತಾನ ಹಲವು ಕ್ರಿಕೆಟಿಗರು ಹಾಗೂ ಹಿರಿಯ ಆಟಗಾರರು ಐಪಿಎಲ್‌ನಲ್ಲಿ ಆಡುವ ಬಯಕೆಯನ್ನು ಹಲವಾರು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದಾರೆ.

Whats_app_banner