ಬಾಬರ್, ರಿಜ್ವಾನ್, ಅಫ್ರಿದಿ ಸೇರಿ ಬಲಿಷ್ಠ ಆಟಗಾರರ ಉಳಿಸಿಕೊಂಡ ತಂಡಗಳು; ಪಿಎಸ್‌ಎಲ್ ರಿಟೆನ್ಷನ್ ಪಟ್ಟಿ ಇಲ್ಲಿದೆ
ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಆರಂಭಕ್ಕೂ ಮುನ್ನ ಎಲ್ಲಾ 6 ತಂಡಗಳು ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿವೆ. ಶಾಹೀನ್ ಅಫ್ರಿದಿ, ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ನಸೀಮ್ ಶಾ ಸೇರಿದಂತೆ ಒಟ್ಟು 45 ಆಟಗಾರರನ್ನು ಪಿಎಸ್‌ಎಲ್ ತಂಡಗಳು ರಿಟೈನ್ ಮಾಡಿಕೊಂಡಿವೆ.
ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (Pakistan Super League) ಭಾಗವಹಿಸುವ ಎಲ್ಲಾ ಫ್ರಾಂಚೈಸಿಗಳು, ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಅಂತಿಮ ಪಟ್ಟಿ ಪ್ರಕಟಿಸಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ಆಟಗಾರರ ಪಟ್ಟಿ ಬಹಿರಂಗಪಡಿಸಿದೆ. ಪ್ರತಿ ತಂಡಕ್ಕೆ ಗರಿಷ್ಠ ಎಂಟು ಆಟಗಾರರನ್ನು ರಿಟೈನ್ ಮಾಡಲು ಅನುಮತಿ ನೀಡಲಾಗಿತ್ತು. ಅದರಂತೆ ಮೂರು ತಂಡಗಳು ಸಂಪೂರ್ಣ ಕೋಟಾವನ್ನು ಬಳಸಿಕೊಂಡರೆ, ಉಳಿದ ಮೂರು ತಂಡಗಳು ತಲಾ ಏಳು ಆಟಗಾರರನ್ನು ಉಳಿಸಿಕೊಂಡಿವೆ.
ನಿರೀಕ್ಷೆಯಂತೆಯೇ ತಂಡಗಳು ಸ್ಟಾರ್ ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ. ಶಾಹೀನ್ ಅಫ್ರಿದಿ, ಬಾಬರ್ ಅಜಮ್ ಮತ್ತು ನಸೀಮ್ ಶಾ ಸೇರಿದಂತೆ ಒಟ್ಟು 45 ಆಟಗಾರರನ್ನು ಪಿಎಸ್‌ಎಲ್ ತಂಡಗಳು ಉಳಿಸಿಕೊಂಡಿವೆ. ಮೂರು ಬಾರಿಯ ಪಿಎಸ್‌ಎಲ್ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ತಂಡವು ನಸೀಮ್ ಶಾ ಮತ್ತು ಶಾದಾಬ್ ಖಾನ್ ಅವರನ್ನು ಪ್ಲಾಟಿನಂ ವಿಭಾಗದಲ್ಲಿ ಉಳಿಸಿಕೊಂಡಿದೆ. ಇದೇ ವೇಳೆ ಕಾಲಿನ್ ಮುನ್ರೊ ಅವರನ್ನು ಬೆಳ್ಳಿ ವಿಭಾಗದಲ್ಲಿ ರಿಟೈನ್ ಮಾಡಿದೆ.
ಲಾಹೋರ್ ಖಲಂದರ್ಸ್ ತಂಡ ಫಖರ್ ಜಮಾನ್ ಮತ್ತು ಶಾಹೀನ್ ಶಾ ಅಫ್ರಿದಿ ಅವರನ್ನು ಉಳಿಸಿಕೊಂಡರೆ, ಪೇಶಾವರ್ ಝಲ್ಮಿ ಬಾಬರ್ ಅಜಮ್ ಮತ್ತು ಯುವ ಆಟಗಾರ ಸೈಮ್ ಅಯೂಬ್ ಅವರನ್ನು ಪ್ಲಾಟಿನಂ ವಿಭಾಗದಲ್ಲಿ ರಿಟೈನ್ ಮಾಡಿದೆ. ಈ ಬಾರಿಯೂ ಮೊಹಮ್ಮದ್ ಅಮೀರ್ ಮತ್ತು ರಿಲೀ ರೊಸೊವ್ ಕೂಡ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಲಿದ್ದಾರೆ.
ಪಿಎಸ್‌ಎಲ್ ಡ್ರಾಫ್ಟ್ ಜನವರಿ 11ರಂದು ನಡೆಯಲಿದ್ದು, 19 ದೇಶಗಳ ಒಟ್ಟು 510 ಆಟಗಾರರು ಗಮನ ಸೆಳೆದಿದ್ದಾರೆ.
ಪಿಎಸ್‌ಎಲ್ ರಿಟೆನ್ಷನ್ ಪಟ್ಟಿ
- ಇಸ್ಲಾಮಾಬಾದ್ ಯುನೈಟೆಡ್ : ಶಾದಾಬ್ ಖಾನ್, ನಸೀಮ್ ಶಾ, ಇಮಾದ್ ವಾಸಿಮ್, ಅಜಮ್ ಖಾನ್, ಸಲ್ಮಾನ್ ಅಲಿ ಅಘಾ, ಹೈದರ್ ಅಲಿ, ಕಾಲಿನ್ ಮುನ್ರೊ, ರುಮ್ಮನ್ ರಯೀಸ್.
- ಲಾಹೋರ್ ಖಲಂದರ್ಸ್ : ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಹ್ಯಾರಿಸ್ ರೌಫ್, ಸಿಕಂದರ್ ರಜಾ, ಅಬ್ದುಲ್ಲಾ ಶಫೀಕ್, ಜಹಂದಾದ್ ಖಾನ್, ಜಮಾನ್ ಖಾನ್, ಡೇವಿಡ್ ವೈಸ್.
- ಕ್ವೆಟ್ಟಾ ಗ್ಲಾಡಿಯೇಟರ್ಸ್: ಅಬ್ರಾರ್ ಅಹ್ಮದ್, ಮೊಹಮ್ಮದ್ ಅಮೀರ್, ರಿಲೀ ರೋಸೌವ್, ಅಕೇಲ್ ಹೊಸೈನ್, ಸೌದ್ ಶಕೀಲ್, ಮೊಹಮ್ಮದ್ ವಾಸಿಂ ಜೂನಿಯರ್, ಖವಾಜಾ ಮುಹಮ್ಮದ್ ನಫೇ, ಉಸ್ಮಾನ್ ತಾರಿಕ್.
ಇದನ್ನೂ ಓದಿ | WTC Point Table: ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಹೀಗಿದೆ ಅಂಕಪಟ್ಟಿ
- ಮುಲ್ತಾನ್ ಸುಲ್ತಾನ್ಸ್ : ಮೊಹಮ್ಮದ್ ರಿಜ್ವಾನ್, ಉಸಾಮಾ ಮಿರ್, ಡೇವಿಡ್ ವಿಲ್ಲಿ , ಇಫ್ತಿಕರ್ ಅಹ್ಮದ್, ಉಸ್ಮಾನ್ ಖಾನ್, ಕ್ರಿಸ್ ಜೋರ್ಡಾನ್, ಫೈಸಲ್ ಅಕ್ರಮ್.
- ಪೇಶಾವರ್ ಝಲ್ಮಿ: ಬಾಬರ್ ಅಜಮ್, ಸೈಮ್ ಅಯೂಬ್, ಮೊಹಮ್ಮದ್ ಹ್ಯಾರಿಸ್, ಆರಿಫ್ ಯಾಕೂಬ್, ಮೆಹ್ರಾನ್ ಮುಮ್ತಾಜ್, ಸುಫ್ಯಾನ್ ಮೊಕಿಮ್, ಅಲಿ ರಜಾ.
- ಕರಾಚಿ ಕಿಂಗ್ಸ್: ಹಸನ್ ಅಲಿ, ಜೇಮ್ಸ್ ವಿನ್ಸ್, ಮುಹಮ್ಮದ್ ಇರ್ಫಾನ್ ಖಾನ್, ಶಾನ್ ಮಸೂದ್, ಅರಾಫತ್ ಮಿನ್ಹಾಸ್, ಟಿಮ್ ಸೀಫರ್ಟ್, ಜಾಹಿದ್ ಮೆಹಮೂದ್.
ಇದನ್ನೂ ಓದಿ | ಸಿಡ್ನಿ ಟೆಸ್ಟ್ ಸೋತು ದಶಕದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಕಳೆದುಕೊಂಡ ಟೀಮ್ ಇಂಡಿಯಾ; WTC ಫೈನಲ್ ಕನಸೂ ಭಗ್ನ