ಪಂಜಾಬ್ ರಾಜರಿಗೆ ಸವಾಲೊಡ್ಡುವುದೇ ರಾಯಲ್ಸ್ ಬಳಗ; ಆರ್​ಆರ್​ vs ಪಿಬಿಕೆಎಸ್ ಸಂಭಾವ್ಯ ಪ್ಲೇಯಿಂಗ್​ XI
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಜಾಬ್ ರಾಜರಿಗೆ ಸವಾಲೊಡ್ಡುವುದೇ ರಾಯಲ್ಸ್ ಬಳಗ; ಆರ್​ಆರ್​ Vs ಪಿಬಿಕೆಎಸ್ ಸಂಭಾವ್ಯ ಪ್ಲೇಯಿಂಗ್​ Xi

ಪಂಜಾಬ್ ರಾಜರಿಗೆ ಸವಾಲೊಡ್ಡುವುದೇ ರಾಯಲ್ಸ್ ಬಳಗ; ಆರ್​ಆರ್​ vs ಪಿಬಿಕೆಎಸ್ ಸಂಭಾವ್ಯ ಪ್ಲೇಯಿಂಗ್​ XI

Punjab Kings vs Rajasthan Royals: 17ನೇ ಆವೃತ್ತಿಯ ಐಪಿಎಲ್​ನ 27ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಪಿಚ್ ರಿಪೋರ್ಟ್, ಪ್ಲೇಯಿಂಗ್​ ಇಲೆವೆನ್ ಮತ್ತು ಮುಖಾಮುಖಿ ದಾಖಲೆಯ ವಿವರ ಇಲ್ಲಿದೆ.

ಪಂಜಾಬ್ ರಾಜರಿಗೆ ಸವಾಲೊಡ್ಡುವುದೇ ರಾಯಲ್ಸ್ ಬಳಗ
ಪಂಜಾಬ್ ರಾಜರಿಗೆ ಸವಾಲೊಡ್ಡುವುದೇ ರಾಯಲ್ಸ್ ಬಳಗ

2024ರ ಇಂಡಿಯನ್ ಪ್ರೀಮಿಯರ್ ಲೀಗ್​ನ 27ನೇ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್​ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ.​ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಆರ್​​​ಆರ್ ತಂಡವನ್ನು ಮಣಿಸಿ​, 8ನೇ ಸ್ಥಾನದಿಂದ ಪಿಬಿಕೆಎಸ್ ಮೇಲೇರಲು ತುದಿಗಾಲಲ್ಲಿ ನಿಂತಿದೆ. ಈ ಹೈವೋಲ್ಟೇಜ್​ ಪಂದ್ಯಕ್ಕೆ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ವೇದಿಕೆ ವಹಿಸಲಿದೆ.

ತಮ್ಮ ಕೊನೆಯ ಪಂದ್ಯಗಳಲ್ಲಿ ಸೋತಿರುವ ಉಭಯ ತಂಡಗಳು, ಲಯಕ್ಕೆ ಮರಳಲು ಸಜ್ಜಾಗಿವೆ. ಅದರಲ್ಲೂ ಪಂಜಾಬ್ ಕಿಂಗ್ಸ್ ತಮ್ಮ ಮೊದಲ ಐದು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಸಾಧಿಸಿದ್ದು, ಸ್ಥಿರತೆ ಕಾಪಾಡಿಕೊಳ್ಳಲು ವಿಫಲವಾಗಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 183 ರನ್ ಚೇಸಿಂಗ್ ವೇಳೆ ಕೊನೆಯ ಎಸೆತದಲ್ಲಿ ಸೋಲನುಭವಿಸಿತ್ತು. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ಸೋತು ಸತತ 5ನೇ ಗೆಲುವು ದಾಖಲಿಸಲು ವಿಫಲವಾಯಿತು.

ಪಿಬಿಕೆಎಸ್ vs ಆರ್​​ಆರ್​ ಪಂದ್ಯದ ವಿವರ

ಪಂದ್ಯ: ಐಪಿಎಲ್ 2024, 27ನೇ ಟಿ20 ಪಂದ್ಯ

ಸ್ಥಳ: ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮುಲ್ಲನ್‌ಪುರ

ದಿನಾಂಕ ಮತ್ತು ಸಮಯ: ಶನಿವಾರ, ಏಪ್ರಿಲ್ 13ರಂದು ಸಂಜೆ 7:30ಕ್ಕೆ (ಟಾಸ್ ಸಂಜೆ 7:00 ಗಂಟೆಗೆ)

ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್

ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್​ XI

ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಅಶುತೋಷ್ ಶರ್ಮಾ, ಸ್ಯಾಮ್ ಕರನ್, ಶಶಾಂಕ್ ಸಿಂಗ್, ಸಿಕಂದರ್ ರಾಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್​ XI

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್​), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಸೇನ್, ಅವೇಶ್ ಖಾನ್.

ಪಿಬಿಕೆಎಸ್ vs ಆರ್​​ಆರ್ ಹೆಡ್-ಟು-ಹೆಡ್ ರೆಕಾರ್ಡ್

ಐಪಿಎಲ್‌ನಲ್ಲಿ ಇದುವರೆಗೆ ಪಿಬಿಕೆಎಸ್ ಮತ್ತು ಆರ್‌ಆರ್ ಪರಸ್ಪರ 26 ಬಾರಿ ಆಡಿವೆ. ಈ ಪೈಕಿ ಪಂಜಾಬ್ 11 ಪಂದ್ಯ ಗೆದ್ದಿದ್ದರೆ, ರಾಜಸ್ಥಾನ್ 15ರಲ್ಲಿ ಜಯದ ನಗೆ ಬೀರಿದೆ.

ಹವಾಮಾನ ಮತ್ತು ಪಿಚ್

ಸಂಜೆ, ತಾಪಮಾನವು ಸರಿಸುಮಾರು 24 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ. ಆರ್ದ್ರತೆಯ ಮಟ್ಟವು ಸುಮಾರು 42 ಪ್ರತಿಶತದಷ್ಟು ಇರುತ್ತದೆ. ಈ ಮೈದಾನದಲ್ಲಿ ನಡೆಯುವ ಮೂರನೇ ಪಂದ್ಯವಾಗಿದೆ. ಸ್ಪಿನ್ ಬೌಲರ್‌ಗಳು ಇಲ್ಲಿ ಹೆಚ್ಚು ಪರಿಣಾಮಕಾರಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಆದರೆ ಹೊಸ ಚೆಂಡು ಸ್ವಿಂಗ್ ಆಗುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಕ್ರ.ಸಂತಂಡಪಂದ್ಯಗೆಲುವುಸೋಲುಅಂಕNRR
1ರಾಜಸ್ಥಾನ್ ರಾಯಲ್ಸ್5418+0.871
2ಕೋಲ್ಕತ್ತಾ ನೈಟ್ ರೈಡರ್ಸ್4316+1.528
3ಚೆನ್ನೈ ಸೂಪರ್ ಕಿಂಗ್ಸ್5326+0.666
4ಲಕ್ನೋ ಸೂಪರ್ ಜೈಂಟ್ಸ್5326+0.436
5ಸನ್ ರೈಸರ್ಸ್ ಹೈದರಾಬಾದ್5326+0.344
6ಗುಜರಾತ್ ಟೈಟಾನ್ಸ್6336-0.637
7ಮುಂಬೈ ಇಂಡಿಯನ್ಸ್5234-0.073
8ಪಂಜಾಬ್ ಕಿಂಗ್ಸ್5234-0.196
9ದೆಹಲಿ ರಾಜಧಾನಿಗಳು6244-0.975
10ರಾಯಲ್ ಚಾಲೆಂಜರ್ಸ್ ಬೆಂಗಳೂರು6152-1.124
Whats_app_banner