ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ-pcb president mohsin naqvi praises best team in the world pakistan for beating ireland in t20i series cricket news prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

PCB President Mohsin Naqvi : ಐರ್ಲೆಂಡ್​ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ ಮೋಶಿನ್ ನಖ್ವಿ ಅವರು ಟ್ರೋಲ್ ಆಗುತ್ತಿದ್ದಾರೆ.

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ
ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಡಬ್ಲಿನ್​ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಐರ್ಲೆಂಡ್ ವಿರುದ್ಧ ಪ್ರವಾಸಿ ಪಾಕಿಸ್ತಾನ ತಂಡವು (Ireland vs Pakista) 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಟಿ20ಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಬಾಬರ್ ಪಡೆ, ಉಳಿದ ಎರಡು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಸರಣಿಗೆ ಮುತ್ತಿಕ್ಕಿತು. ಐರಿಷ್ ತಂಡವನ್ನು ಮಣಿಸಿ ಸರಣಿಯನ್ನು ಕೈವಶ ಮಾಡಿಕೊಂಡ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೋಶಿನ್ ನಖ್ವಿ (PCB President Mohsin Naqvi), ಬಾಬರ್ ಪಡೆಯನ್ನು ಹಾಡಿ ಹೊಗಳಿದ್ದಾರೆ.

ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕ್ 17 ಓವರ್​ಗಳಲ್ಲೇ ಗೆದ್ದು ಬೀಗಿತು. ಟಿ20 ವಿಶ್ವಕಪ್​​​ಗೂ ಮುನ್ನ ಮೆನ್ ಇನ್ ಗ್ರೀನ್ ವಿದೇಶ ಸರಣಿಯನ್ನು ಜಯಿಸಿದ ನಂತರ ಪಿಸಿಬಿ ಅಧ್ಯಕ್ಷ ಮೋಶಿನ್ ನಖ್ವಿ ಬಾಬರ್ ಅಜಮ್ ನೇತೃತ್ವದ ತಂಡವನ್ನು ಹೊಗಳಿದ್ದಲ್ಲದೆ, ವಿಶ್ವದ ಅತ್ಯುತ್ತಮ ತಂಡ ಎಂದು ಹೇಳಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ ನಖ್ವಿ.

ನಖ್ವಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐರ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ತಂಡದ ಕೆಲಸ ಮತ್ತು ಸಮರ್ಪಣೆಯೊಂದಿಗೆ, ನೀವು ವಿಶ್ವದ ಅತ್ಯುತ್ತಮ ತಂಡವೆಂದು ಸಾಬೀತುಪಡಿಸಿದ್ದೀರಿ. ಹುಡುಗರೇ, ಇಂಗ್ಲೆಂಡ್ ಸರಣಿ ಮತ್ತು ವಿಶ್ವಕಪ್‌ಗೆ ಶುಭವಾಗಲಿ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ. ಆದರೆ ಈ ಪೋಸ್ಟ್​ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಈ ಸರಣಿಯಲ್ಲಿ ಬಾಬರ್ ಅಜಮ್ ಉತ್ತಮ ಪ್ರದರ್ಶನ ತೋರಿದ್ದರು. ಎರಡು ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಅಳಿಸಿದ್ದಾರೆ. ಟಿ20ಐ ಕ್ರಿಕೆಟ್​ನಲ್ಲಿ ಅತ್ಯಧಿಕ ಫಿಫ್ಟಿ ಸಿಡಿಸಿದ ಆಟಗಾರ ಎನಿಸಿದ್ದಾರೆ. ಈ ಸರಣಿಯ 3 ಪಂದ್ಯಗಳಲ್ಲಿ ನಾಯಕ ಬಾಬರ್​, 44ರ ಸರಾಸರಿಯಲ್ಲಿ 132 ರನ್ ಗಳಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಸಹ ಅಷ್ಟೇ ಸ್ಕೋರ್ ಮಾಡುವ ಮೂಲಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಶಾಹೀನ್ ಅಫ್ರಿದಿ 7 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

ಇಂಗ್ಲೆಂಡ್ ಪ್ರವಾಸ ಕೈಗೊಂಡ ಪಾಕಿಸ್ತಾನ

ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಪಾಕಿಸ್ತಾನ ತಂಡವು ಈಗ ನಾಲ್ಕು ಪಂದ್ಯಗಳ ಟಿ20ಐ ಸರಣಿಗೆ ಜೋಸ್ ಬಟ್ಲರ್ ನೇತೃತ್ವದ ತಂಡವನ್ನು ಎದುರಿಸಲು ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. 2022ರ ಟಿ20 ವಿಶ್ವಕಪ್‌ನ ಇಬ್ಬರು ಫೈನಲಿಸ್ಟ್‌ಗಳ ನಡುವಿನ ಸರಣಿಯ ಆರಂಭಿಕ ಪಂದ್ಯವು ಮೇ 22ರ ಬುಧವಾರ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಉಳಿದ ಮೂರು ಪಂದ್ಯಗಳು ಕಾರ್ಡಿಫ್‌ನ ಬರ್ಮಿಂಗ್‌ಹ್ಯಾಮ್‌, ಓವಲ್​ನಲ್ಲಿ ಕ್ರಮವಾಗಿ ಮೇ 25, 28 ಮತ್ತು 30 ರಂದು ನಡೆಯಲಿವೆ.

ಜೂನ್ 9 ರಂದು ಭಾರತ vs ಪಾಕಿಸ್ತಾನ

ಟಿ20 ವಿಶ್ವಕಪ್ 2024 ರಲ್ಲಿ ಪಾಕಿಸ್ತಾನ ತಂಡವು ಭಾರತ, ಐರ್ಲೆಂಡ್, ಯುಎಸ್​ಎ ಮತ್ತು ಕೆನಡಾದೊಂದಿಗೆ ಎ ಗುಂಪಿನಲ್ಲಿದೆ. ಜೂನ್ 6 ರಂದು ಯುಎಸ್​ಎ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯವು ಜೂನ್ 9 ರಂದು ನ್ಯೂಯಾರ್ಕ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 2022ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಗೆದ್ದಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point