1068 ವಿಕೆಟ್ ಪಡೆದಿರುವ ಇಂಗ್ಲೆಂಡ್ ದಿಗ್ಗಜ ಬೌಲರ್ ನಿಧನ
Peter Lever: ತನ್ನ ವೃತ್ತಿಜೀವನದಲ್ಲಿ 1,068 ವಿಕೆಟ್ ಪಡೆದ ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಪೀಟರ್ ಲಿವರ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕ್ರಿಕೆಟ್ ಲೋಕವೇ ಸಂತಾಪ ಸೂಚಿಸಿದೆ.

ಲಂಡನ್: ತಮ್ಮ ಅಸಾಧಾರಣ ಬೌಲಿಂಗ್ ಕೌಶಲ ಪ್ರದರ್ಶಿಸುವ ಮೂಲಕ 1970-71ರ ಆ್ಯಷಸ್ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಪೀಟರ್ ಲಿವರ್ (84) ನಿಧನರಾಗಿದ್ದಾರೆ. ಅವರ ಮಾಜಿ ಲಂಕಾಷೈರ್ ಕ್ಲಬ್ ಗುರುವಾರ (ಮಾರ್ಚ್ 27) ಈ ಘೋಷಣೆ ಮಾಡಿದೆ. ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ನಲ್ಲಿ ಒಟ್ಟು 1068 ವಿಕೆಟ್ ಉರುಳಿಸಿದ್ದಾರೆ.
‘ಪೀಟರ್ ಲಿವರ್ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಸುದ್ದಿಯಿಂದ ನಾವು ತುಂಬಾ ದುಃಖಿತರಾಗಿದ್ದೇವೆ’ ಎಂದು ಲಂಕಾಷೈರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ‘1960 ಮತ್ತು 1976ರ ನಡುವೆ 301 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಪೀಟರ್ ಅವರನ್ನು ಕಳೆದ ವರ್ಷ ನಮ್ಮ ಹಾಲ್ ಆಫ್ ಫೇಮ್ಗೆ ಸೇರಿಸಲಾಯಿತು. ಅವರು 796 ವಿಕೆಟ್ಪಡೆದಿದ್ದಾರೆ. ಅವರ ಕುಟುಂಬಕ್ಕೆ ಸಂತಾಪಗಳು’ ಎಂದು ಬರೆದಿದೆ.
ಲಿವರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 17 ಟೆಸ್ಟ್, 10 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇದರಲ್ಲಿ 1971ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಉದ್ಘಾಟನಾ ಏಕದಿನ ಪಂದ್ಯವೂ ಸೇರಿದೆ. ಕ್ರಮವಾಗಿ 44 (ಟೆಸ್ಟ್), 11 (ಏಕದಿನ) ವಿಕೆಟ್ ಪಡೆದಿದ್ದಾರೆ. 1975ರಲ್ಲಿ ಟೆಸ್ಟ್ ಇತಿಹಾಸದಲ್ಲಿ ವೇಗದ ಬೌಲಿಂಗ್ನಲ್ಲಿ ಶ್ರೇಷ್ಠ ಸ್ಪೆಲ್ ಹಾಕಿದ್ದರು. ಆದರೆ ಈ ಸರಣಿಯಲ್ಲಿ ದುರಂತ ನಡೆಯಬೇಕಿತ್ತು ಎನ್ನುವಷ್ಟರಲ್ಲಿ ಜೀವ ಉಳಿದಿತ್ತು.
ಈ ಸರಣಿಯಲ್ಲಿ ನ್ಯೂಜಿಲೆಂಡ್ನ ಟೈಲರ್ ಎವೆನ್ ಚಾಟ್ಫೀಲ್ಡ್ ಅವರ ತಲೆಗೆ ಲಿವರ್ ಬೌನ್ಸರ್ ಹೊಡೆದಿದ್ದರು. ಚಾಟ್ಫೀಲ್ಡ್ ಇದ್ದಲ್ಲಿಯೇ ಕುಸಿದುಬಿದ್ದಿದ್ದರು. ಇದು ಹೃದಯ ಬಡಿತ ಹೆಚ್ಚಿಸುವಂತೆ ಮಾಡಿತ್ತು. ಅವರಿಗೆ ಜೀವ ಹೋದಂತೆ ಅನಿಸಿತ್ತು. ನಂತರ ತುರ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ಮಾತ್ರ ಅವರ ಜೀವವನ್ನು ಉಳಿಸಲಾಯಿತು. ಆ ದುರಂತದ ನಂತರ ಲಿವರ್ ಆಡಿದ್ದು ಒಂದೇ ಒಂದು ಟೆಸ್ಟ್ ಮಾತ್ರ.
30ನೇ ವಯಸ್ಸಿನಲ್ಲಿ ಪದಾರ್ಪಣೆ
ಮೊದಲ ಬಾರಿಗೆ 1970ರ ಬೇಸಿಗೆಯಲ್ಲಿ ಓವಲ್ನಲ್ಲಿ ರೆಸ್ಟ್ ಆಫ್ ದಿ ವರ್ಲ್ಡ್ ಇಲೆವೆನ್ ವಿರುದ್ಧ ಇಂಗ್ಲೆಂಡ್ ಪರ ಕಾಣಿಸಿಕೊಂಡಿದ್ದ ಲಿವರ್ ಅವರು, ಗ್ಯಾರಿ ಸೋಬರ್ಸ್, ಮುಷ್ತಾಕ್ ಮೊಹಮ್ಮದ್, ಗ್ರೇಮ್ ಪೊಲಾಕ್, ಕ್ಲೈವ್ ಲಾಯ್ಡ್, ಮೈಕ್ ಪ್ರೊಕ್ಟರ್ ಅವರನ್ನು ವಿಕೆಟ್ ಒಳಗೊಂಡಂತೆ 83ಕ್ಕೆ 7 ವಿಕೆಟ್ ಉರುಳಿಸಿದ್ದರು. 30ನೇ ವಯಸ್ಸಿನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
1975ರಲ್ಲಿ ಆಸ್ಟ್ರೇಲಿಯಾದ ಪ್ರವಾಸದ ವೇಳೆ ಮೆಲ್ಬೋರ್ನ್ನಲ್ಲಿ 38ಕ್ಕೆ 6 ವಿಕೆಟ್ ಉರುಳಿಸಿ ವೃತ್ತಿಜೀವನದ ಅತ್ಯುತ್ತಮ ಅಂಕಿ-ಅಂಶ ದಾಖಲಿಸಿದ್ದರು. ಅವರ ಬೌನ್ಸರ್ನಿಂದ ಚಾಟ್ಫೀಲ್ಡ್ ಕುಸಿದು ಬೀಳುತ್ತಿದ್ದಂತೆ ನಿಧನರಾದರು ಎಂದು ಭಾವಿಸಿದ್ದೆ. ಆದರೆ ಇಂಗ್ಲೆಂಡ್ ಫಿಸಿಯೋಥೆರಪಿಸ್ಟ್ ಬರ್ನಾರ್ಡ್ ಥಾಮಸ್ ಅವರ ಸಿಪಿಆರ್ನಿಂದ ಅವರನ್ನು ಜೀವಕೊಟ್ಟರು ಎಂದು ಹೇಳಿದ್ದರು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 796 ವಿಕೆಟ್, ಲಿಸ್ಟ್ ಎ ಕ್ರಿಕೆಟ್ನಲ್ಲಿ 272 ವಿಕೆಟ್ ಉರುಳಿಸಿದ್ದಾರೆ. ಒಟ್ಟು 1068 ವಿಕೆಟ್ ಕಿತ್ತಿದ್ದಾರೆ.
