2008 ರಿಂದ 2024ರ ವರೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರರು ಇವರೇ
2024ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಎಸ್‌ಆರ್‌ಎಚ್‌ಅನ್ನು ಮಣಿಸಿ ಕೆಕೆಆರ್ ಚಾಂಪಿಯನ್ ಆಗಿ ಹೊರಮ್ಮಿದೆ. ಮಿಚೆಲ್ ಸ್ಟ್ರಾರ್ಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನಾಗಿದ್ದಾರೆ. 2008 ರಿಂದ 2024ರ ವರೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಕ್ತಿ ಪಡೆದವರ ಪಟ್ಟಿ ಇಲ್ಲಿದೆ.
ಬೆಂಗಳೂರು: ಎರಡು ತಿಂಗಳಿಗೂ ಅಧಿಕ ದಿನಗಳ ಕಾಲ ನಡೆದ ಐಪಿಎಲ್ ಚುಟುಕು ಕ್ರಿಕೆಟ್ ಸಮರ ( IPL 2024) ಕೆಕೆಆರ್ ಚಾಂಪಿಯನ್ (IPL 2024 KKR Champion) ಆಗುವ ಮೂಲಕ ಅದ್ಧೂರಿಯಾಗಿ ಮುಕ್ತವಾಯವಾಗಿದೆ. ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ (MA Chidambaram Stadium) ಸ್ಟೇಡಿಯಂಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಗಳ ನಡುವೆ ಆರಂಭಿಕ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ನೀಡಲಾಗಿತ್ತು.
ಭಾನುವಾರ (ಮೇ 26) ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬಿದ್ದಿದೆ. 2024ರ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡದ ಪ್ರಮುಖ ವೇಗಿ ಮಿಚೆಲ್ ಸ್ಟ್ರಾರ್ಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಪಿಎಲ್ ಮೊದಲ ಟೂರ್ನಿ ನಡೆದ 2008 ರಿಂದ ಈವರೆಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಇಲ್ಲಿದೆ.
- 2008 - ಯೂಸಫ್ ಪಠಾಣ್ (ರಾಜಸ್ಥಾನ್ ರಾಯಲ್ಸ್) - ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ
- 2009 - ಅನಿಲ್ ಕುಂಬ್ಳೆ (ರಾಯಲ್ ಚಾಲೆಂಜರ್ಸ್) - ಡೆಕ್ಕನ್ ಚಾರ್ಜರ್ಸ್
- 2010 - ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್ಸ್) - ಮುಂಬೈ ಇಂಡಿಯನ್ಸ್
- 2011 - ಮುರಳಿ ವಿಜಯ್ (ಚೆನ್ನೈ ಸೂಪರ್ ಕಿಂಗ್ಸ್) - ರಾಯಲ್ ಚಾಲೆಂಜರ್ಸ್ ಬೆಂಗಳೂರು
- 2012 - ಮನ್ವಿಂದರ್ ಬಿಸ್ಲಾ (ಮುಂಬೈ ಇಂಡಿಯನ್ಸ್) - ಚೆನ್ನೈ ಸೂಪರ್ ಕಿಂಗ್ಸ್
- 2013 - ಕೀರನ್ ಪೊಲಾರ್ಡ್ ( ಮುಂಬೈ ಇಂಡಿಯನ್ಸ್) - ಚೆನ್ನೈ ಸೂಪರ್ ಕಿಂಗ್ಸ್
- 2014 - ಮನೀಶ್ ಪಾಂಡ್ಯಾ (ಕೋಲ್ಕತ್ತ ನೈಟ್ ರೈಡರ್ಸ್) - ಕಿಂಗ್ಸ್ ಇಲೆವನ್ ಪಂಜಾಬ್
- 2015 - ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್) - ಚೆನ್ನೈ ಸೂಪರ್ ಕಿಂಗ್ಸ್
- 2016 - ಬೆನ್ ಕಟ್ಟಿಂಗ್ (ಸನ್‌ರೈಸರ್ಸ್ ಹೈದರಾಬಾದ್) - ರಾಯಲ್ ಚಾಲೆಂಜರ್ಸ್ ಬೆಂಗಳೂರು
- 2017 - ಕೃನಾಲ್ ಪಾಂಡ್ಯ (ಮುಂಬೈ ಇಂಡಿಯನ್ಸ್) - ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
- 2018 - ಶೇನ್ ವ್ಯಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್) - ಸನ್‌ರೈಸರ್ಸ್ ಹೈದರಾಬಾದ್
- 2019 - ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್) - ಚೆನ್ನೈ ಸೂಪರ್ ಕಿಂಗ್ಸ್
- 2020 - ಟ್ರೆಂಟ್ ಬೊಲ್ಟ್ (ಮುಂಬೈ ಇಂಡಿಯನ್ಸ್) - ಡೆಲ್ಲಿ ಕ್ಯಾಪಿಟಲ್ಸ್
- 2021 - ಫಾಫ್ ಡು ಪ್ಲೆಸಿಸ್ (ಚೆನ್ನೈ ಸೂಪರ್ ಕಿಂಗ್ಸ್) - ಕೋಲ್ಕತ್ತ ನೈಟ್ ರೈಡರರ್ಸ್
- 2022 - ಹಾರ್ದಿಕ್ ಪಾಂಡ್ಯ (ಗುಜರಾತ್ ಟೈಟಾನ್ಸ್) - ರಾಜಸ್ಥಾನ್ ರಾಯಲ್ಸ್
- 2023 - ಡಿವೊನ್ ಕಾನ್ವೆ (ಚೆನ್ನೈ ಸೂಪರ್ ಕಿಂಗ್ಸ್) - ಗುಜರಾತ್ ಟೈಟಾನ್ಸ್
- 2024 - ಮಿಚೆಲ್ ಸ್ಟ್ರಾರ್ಕ್ (ಕೋಲ್ಕತ್ತ ನೈಟ್ ರೈಡರ್ಸ್) - ಸನ್ ರೈಸರ್ಸ್ ಹೈದರಾಬಾದ್.
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕೋಲ್ಕತ್ತ ನೈಡ್ ರೈಡರ್ಸ್ 10 ವರ್ಷಗಳ ಬಳಿಕ 3ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)