ಕನ್ನಡ ಸುದ್ದಿ  /  Cricket  /  Predicting Indian Cricket Team 15 Member Squad For Icc T20 World Cup 2024 Rohit Sharma Captain Virat Kohli Return Prs

ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ; ರೋಹಿತ್​ ಶರ್ಮಾ ನಾಯಕ, ವಿರಾಟ್ ಕೊಹ್ಲಿ ರಿಟರ್ನ್

Indian Cricket Team : ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ​ ಜೊತೆಗೆ ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್​ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ
ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಂಭಾವ್ಯ ತಂಡ

ಐಸಿಸಿ ಟಿ20 ಕ್ರಿಕೆಟ್​ ವಿಶ್ವಕಪ್ ಟೂರ್ನಿ (ICC T20 World Cup 2024) ಜೂನ್ 1ರಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಮತ್ತು ಕೆನಡಾ ತಂಡಗಳು ಸೆಣಸಾಟ ನಡೆಸಲಿವೆ. ಜೂನ್ 1 ರಿಂದ ಆರಂಭವಾಗಲಿರುವ ಮೆಗಾ ಈವೆಂಟ್, ಜೂನ್ 29ರಂದು ಕೊನೆಗೊಳ್ಳಲಿದೆ. ವೆಸ್ಟ್ ಇಂಡೀಸ್-ಅಮೆರಿಕದ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದ್ದು, ಜೂನ್ 5ರಿಂದ ಐರ್ಲೆಂಡ್ ಎದುರು ಕಾದಾಟ ನಡೆಸುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಮೆಗಾ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಲು ಐಸಿಸಿ ಡೆಡ್​ಲೈನ್ ಕೂಡ ಖಚಿತಪಡಿಸಿದೆ ಎಂದು ವರದಿಯಾಗಿದೆ. ಮೇ 1ರೊಳಗೆ ಎಲ್ಲಾ ತಂಡಗಳು ಟಿ20 ವಿಶ್ವಕಪ್ ತಂಡಗಳನ್ನು ಪ್ರಕಟಿಸಬೇಕಿದೆ. ಮೇ 25ರೊಳಗೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಅವಕಾಶ ಪಡೆಯಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಐಪಿಎಲ್ ಮಧ್ಯದಲ್ಲೇ ಭಾರತ ತಂಡ ಪ್ರಕಟಗೊಳ್ಳಲಿದೆ.

ಆದರೆ, ವಿಶ್ವಕಪ್​ಗೆ ತಂಡವನ್ನು ಘೋಷಿಸಲು ಐಸಿಸಿ ಇನ್ನೂ ಅಂತಿಮ ದಿನಾಂಕ ನಿಗದಿಪಡಿಸಿಲ್ಲ. 2013ರಲ್ಲಿ ಕೊನೆಯದಾಗಿ ಐಸಿಸಿ ಟ್ರೋಫಿ ಗೆದ್ದಿದ್ದ ಭಾರತ ತಂಡ, 11 ವರ್ಷಗಳಿಂದ ಟ್ರೋಫಿ ಬರ ಎದುರಿಸುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ನೀಡಿದ ಮಾಹಿತಿಯಂತೆ ರೋಹಿತ್​ ಶರ್ಮಾ ಅವರೇ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ. 2023ರ ವಿಶ್ವಕಪ್ ಫೈನಲ್ ಸೋತಿರಬಹುದು. ಆದರೆ ರೋಹಿತ್​ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಇತ್ತೀಚೆಗೆ ಜಯ್ ಶಾ ಹೇಳಿದ್ದರು.

ಭಾರತ ತಂಡ ಪ್ರಕಟಿಸಲು ಚರ್ಚೆಗಳು ಆರಂಭ

ತಂಡವನ್ನು ಪ್ರಕಟಿಸಲು ಇನ್ನೂ ಸಾಕಷ್ಟು ಸಮಯವಿದ್ದರೂ ಈ ಬಗ್ಗೆ ಚರ್ಚೆಗಳು ಈಗಲೇ ಆರಂಭಗೊಂಡಿವೆ. ಯಾರಿಗೆ ಚಾನ್ಸ್ ನೀಡಬೇಕು? ಅನುಭವಿಗಳು ಬೇಕಾ? ಯುವ ಆಟಗಾರರು ಬೇಕಾ ಎಂಬ ಡಿಬೇಟ್​ಗಳು ನಡೆಯುತ್ತಿವೆ. ತಂಡದಲ್ಲಿ ಭಾರಿ ಬದಲಾವಣೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಆಯ್ಕೆದಾರರ ನಡೆ ಅಚ್ಚರಿ ಉಂಟು ಮಾಡಿದೆ. ಖಚಿತಗೊಂಡ ರೋಹಿತ್ ಜೊತೆಗೆ ಕೆಲವೊಂದಿಷ್ಟು ಆಟಗಾರರು ಕನ್ಫರ್ಮ್ ಆಗಿದ್ದಾರೆ. ಅವರು ಯಾರೆಂಬುದನ್ನು ನೋಡೋಣ ಮುಂದೆ.

ರೋಹಿತ್​ ಜೊತೆಗೆ ಯಶಸ್ವಿ ಜೈಸ್ವಾಲ್​, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್​ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆದರೆ, ಟಿ20 ಕ್ರಿಕೆಟ್​​ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಯುವ ಆಟಗಾರ ಶುಭ್ಮನ್ ಗಿಲ್ ಆಯ್ಕೆಯಾಗುವುದು ಅನುಮಾನ. ಒಂದ್ವೇಳೆ ಐಪಿಎಲ್​ನಲ್ಲಿ ಸಾಮರ್ಥ್ಯ ನಿರೂಪಿಸಿದರೆ ಆಡುವ ಅವಕಾಶ ಪಡೆಯುವುದು ಖಚಿತ. ಮೊಹಮ್ಮದ್ ಶಮಿ ಫಿಟ್​ ಆದರೆ ತಂಡವನ್ನು ಕೂಡಿಕೊಳ್ಳುವುದು ಖಚಿತ. ಇಲ್ಲವಾದರೆ ಮತ್ತೊಬ್ಬ ವೇಗಿ ಆಯ್ಕೆಯಾಗಲಿದ್ದಾರೆ.

ಟಿ20 ವಿಶ್ವಕಪ್​ಗೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್​) ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ.

ಭಾರತ ತಂಡದ ಟಿ20 ವಿಶ್ವಕಪ್ ವೇಳಾಪಟ್ಟಿ

ಜೂನ್ 5ರಿಂದ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9ರಂದು ಬದ್ಧವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಜೂನ್ 12 ರಂದು ಯುಎಸ್ಎ ವಿರುದ್ಧ, ಜೂನ್ 15ರಂದು ಕೆನಡಾ ವಿರುದ್ಧ ಭಾರತ ಸೆಣಸಾಟ ನಡೆಸಲಿದೆ.

IPL_Entry_Point