ಕನ್ನಡ ಸುದ್ದಿ  /  ಕ್ರಿಕೆಟ್  /  ಸೋಲಿನ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆ; ಗಾಯಾಳು ನಾಯಕ ಶಿಖರ್ ಧವನ್ ಚೇತರಿಕೆಗೆ ಬೇಕು ಇಷ್ಟು ದಿನ

ಸೋಲಿನ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆ; ಗಾಯಾಳು ನಾಯಕ ಶಿಖರ್ ಧವನ್ ಚೇತರಿಕೆಗೆ ಬೇಕು ಇಷ್ಟು ದಿನ

Shikhar Dhawan: ಪಂಜಾಬ್‌ ಕಿಂಗ್ಸ್‌ ನಾಯಕ ಶಿಖರ್ ಧವನ್ ಗಾಯಗೊಂಡಿದ್ದು, ಐಪಿಎಲ್ 2024ರ ಆವೃತ್ತಿಯ ಮುಂದಿನ ಕೆಲವು ಪಂದ್ಯಗಳಲ್ಲಿ ಪಿಬಿಕೆಎಸ್‌ ಪರ ಆಡುವುದು ಅನುಮಾನವಾಗಿದೆ. ನಾಯಕನ ಚೇತರಿಕೆಗೆ ಕೆಲವು ದಿನಗಳು ಬೇಕು ಎಂದು ತಂಡದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಗಾಯಾಳು ನಾಯಕ ಶಿಖರ್ ಧವನ್ ಚೇತರಿಕೆಗೆ ಬೇಕು ಇಷ್ಟು ದಿನ
ಗಾಯಾಳು ನಾಯಕ ಶಿಖರ್ ಧವನ್ ಚೇತರಿಕೆಗೆ ಬೇಕು ಇಷ್ಟು ದಿನ

ಐಪಿಎಲ್ 2024ರ ಆವೃತ್ತಿಯ ಮಧ್ಯದಲ್ಲೇ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಭುಜದ ಗಾಯದಿಂದಾಗಿ ತಂಡದ ನಾಯಕ ಶಿಖರ್‌ ಧವನ್ (Shikhar Dhawan) ರಾಜಸ್ಥಾನ್ ರಾಯಲ್ಸ್ ವಿರುದ್ಧದ (Punjab Kings vs Rajasthan Royals) ಪಂದ್ಯದ ವೇಳೆ ತಂಡದಿಂದ ಹೊರಗುಳಿದ್ದರು. ಧವನ್ ಅವರ ಅನುಪಸ್ಥಿತಿಯಲ್ಲಿ ಪಂಜಾಬ್ ತಂಡವನ್ನು ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಮುನ್ನಡೆಸಿದ್ದರು. ಇದೀಗ, ಮುಂದಿನ ಕೆಲವು ಪಂದ್ಯಗಳಿಗೂ ಆರಂಭಿಕ ಆಟಗಾರ ಅಲಭ್ಯರಾಗುವ ಸಾಧ್ಯತೆ ಇದೆ.

ಟ್ರೆಂಡಿಂಗ್​ ಸುದ್ದಿ

ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ರಾಜಸ್ಥಾನವು ಮೂರು ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿಯಿತು. ಅತ್ತ, ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಪಿಬಿಕೆಎಸ್, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿಯೇ ಉಳಿದಿದೆ. ತಂಡಕ್ಕೆ ಅನುಭವಿ ನಾಯಕ ಹಾಗೂ ಸ್ಥಿರ ಪ್ರದರ್ಶನ ನೀಡುವ ಆಟಗಾರನ ಅಗತ್ಯವಿದ್ದು, ಮುಂದಿನ ಪಂದ್ಯಗಳಿಂದಲೂ ಧವನ್‌ ಹೊರಗುಳಿದರೆ ತಂಡದ ಆತ್ಮವಿಶ್ವಾಸ ಕುಂದಲಿದೆ. ಸದ್ಯ, ಪ್ಲೇ ಆಫ್‌ ಪ್ರವೇಶಿಸುವ ಭರವಸೆಯಲ್ಲಿರುವ ತಂಡದ ಮುಂದಿನ ಕೆಲ ಪಂದ್ಯಗಳಿಂದ ಶಿಖರ್‌ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

ಪಂಜಾಬ್‌ ಕಿಂಗ್ಸ್‌ ತಂಡದ ಅಭಿವೃದ್ಧಿ ಮುಖ್ಯಸ್ಥರಾಗಿರುವ ಸಂಜಯ್ ಬಂಗಾರ್ ಅವರು, ಮುಂದಿನ 7ರಿಂದ 10 ದಿನಗಳವರೆಗೆ ನಾಯಕ ಆಟದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

7ರಿಂದ 10 ದಿನಗಳವರೆಗೆ ಧವನ್‌ ಆಡೋದು ಕಷ್ಟ

ಪಿಬಿಕೆಎಸ್ ಹಾಗೂ ಆರ್‌ಆರ್ ನಡುವಿನ ಪಂದ್ಯದ ನಂತರ ಮಾತನಾಡಿದ ಬಂಗಾರ್, “ದುರದೃಷ್ಟವಶಾತ್ ಭುಜದ ಗಾಯದಿಂದಾಗಿ ಶಿಖರ್ ಧವನ್ ಅವರು ಪಂದ್ಯದಲ್ಲಿ ಆಡಲು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಒಂದೆರಡು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ನಾನು ಹೇಳಬಲ್ಲೆ,” ಎಂದು ಹೇಳಿದರು.

“ಮುಂದೆ ಅವರು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಅಷ್ಟರಲ್ಲೇ ಕನಿಷ್ಠ 7ರಿಂದ 10 ದಿನಗಳವರೆಗೆ ಪಂದ್ಯದಿಂದ ಹೊರಗುಳಿಯಬಹುದು ಎಂದು ತೋರುತ್ತದೆ” ಎಂದು ಬಂಗಾರ್ ಹೇಳಿದರು.

ಇದನ್ನೂ ಓದಿ | ಕೊನೆಯಲ್ಲಿ ಹೆಟ್ಮೆಯರ್ ಅಬ್ಬರ; ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ರೋಚಕ ಗೆಲುವು

ಪಂಜಾಬ್‌ ತಂಡದ ಮುಂದಿನ ಪಂದ್ಯ ಏಪ್ರಿಲ್ 18ರಂದು ನಡೆಯಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಬಳಿಕ, ಏಪ್ರಿಲ್ 21ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಧವನ್‌ ಪಡೆ ಸೆಣಸಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಈ ಎರಡು ಪಂದ್ಯಗಳಿಂದ ಧವನ್ ಹೊರಗುಳಿಯಲಿದ್ದಾರೆ.‌ ಆ ನಂತರ ಏಪ್ರಿಲ್ 26ರಂದು ಕೆಕೆಆರ್ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.‌

ಸ್ಯಾಮ್‌ ಕರನ್‌ಗೆ ನಾಯಕತ್ವ ನೀಡಲು ಕಾರಣವೇನು?

ರಾಯಲ್ಸ್‌ ವಿರುದ್ಧ ಧವನ್‌ ಅನುಪಸ್ಥಿತಿಯಲ್ಲಿ ಸ್ಯಾಮ್‌ ಕರನ್‌ ತಂಡದ ನಾಯಕರಾಗಿದ್ದರು. ಟೂರ್ನಿಯ ಆರಂಭದಲ್ಲಿ ನಡೆದ ಫೋಟೋ ಶೂಟ್‌ ವೇಳೆ ಉಪನಾಯಕನಾಗಿ ಜಿತೇಶ್ ಶರ್ಮಾ ಹಾಜರಾಗಿದ್ದರು. ಹೀಗಾಗಿ ಕರನ್‌ಗೆ ನಾಯಕತ್ವ ನೀಡಿದ್ದು ವ್ಯಾಪಕ ಗೊಂದಲಗಳಿಗೆ ಕಾರಣವಾಯ್ತು. ಈ ಕುರಿತು ಸ್ಪಷ್ಟನೆ ನೀಡಿದ ಬಂಗಾರ್‌, ಜಿತೇಶ್ ಶರ್ಮಾ ಎಂದಿಗೂ ಪಿಬಿಕೆಎಸ್ ಉಪನಾಯಕನಾಗಿರಲಿಲ್ಲ ಎಂದು ತಿಳಿಸಿದರು. ಐಪಿಎಲ್ ಸಮಿತಿಯ ನಿರ್ದೇಶನದ ಪ್ರಕಾರ, ಚೆನ್ನೈನಲ್ಲಿ ನಡೆದ ಫೋಟೋಶೂಟ್‌ಗೆ ಒಬ್ಬ ಆಟಗಾರ ಹಾಜರಾಗಬೇಕಿತ್ತು. ಸ್ಯಾಮ್‌ ಕರನ್‌ ಯುಕೆಯಿಂದ ಬರುವುದು ತಡವಾದ್ದರಿಂದ ಜಿತೇಶ್ ಅವರನ್ನು ಕಳುಹಿಸಲಾಗಿತ್ತು. ಮುಂದೆ ಧವನ್‌ ಅನುಪಸ್ಥಿತಿಯಲ್ಲಿ ಕರನ್ ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿದೆ," ಎಂದು ಅವರು ಹೇಳಿದ್ದಾರೆ.

IPL_Entry_Point