ವೈಯಕ್ತಿಕ ದಾಖಲೆ ಬದಲಿಗೆ‌ ತಂಡದ ಗೆಲುವಿಗೆ ಮೊದಲು ಆದ್ಯತೆ ಕೊಡಿ: ಕೊಹ್ಲಿ ಶತಕದಾಟಕ್ಕೆ ಪೂಜಾರ ಗರಂ
ಕನ್ನಡ ಸುದ್ದಿ  /  ಕ್ರಿಕೆಟ್  /  ವೈಯಕ್ತಿಕ ದಾಖಲೆ ಬದಲಿಗೆ‌ ತಂಡದ ಗೆಲುವಿಗೆ ಮೊದಲು ಆದ್ಯತೆ ಕೊಡಿ: ಕೊಹ್ಲಿ ಶತಕದಾಟಕ್ಕೆ ಪೂಜಾರ ಗರಂ

ವೈಯಕ್ತಿಕ ದಾಖಲೆ ಬದಲಿಗೆ‌ ತಂಡದ ಗೆಲುವಿಗೆ ಮೊದಲು ಆದ್ಯತೆ ಕೊಡಿ: ಕೊಹ್ಲಿ ಶತಕದಾಟಕ್ಕೆ ಪೂಜಾರ ಗರಂ

Cheteshwar Pujara On Virat Kohli: ಕೊಹ್ಲಿ ಶತಕದ ಕುರಿತು ಮಾತನಾಡಿದ ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ್​ ಪೂಜಾರ, ವಿರಾಟ್​ ಶತಕ ಸಿಡಿಸಲಿ ಎಂಬುದು ನನ್ನ ಆಸೆಯೂ ಆಗಿತ್ತು. ಆದರೆ ತಂಡದ ಗೆಲುವಿಗೆ ಅವರು ಮೊದಲು ಆದ್ಯತೆ ನೀಡಬೇಕಿತ್ತು ಎಂದು ಬುದ್ದಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಶತಕದಾಟವನ್ನು ಟೀಕಿಸಿದ ಚೇತೇಶ್ವರ್ ಪೂಜಾರ.
ವಿರಾಟ್ ಕೊಹ್ಲಿ ಶತಕದಾಟವನ್ನು ಟೀಕಿಸಿದ ಚೇತೇಶ್ವರ್ ಪೂಜಾರ.

ಅಕ್ಟೋಬರ್ 21ರಂದು ಗುರುವಾರ ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಶತಕಕ್ಕೆ ಪ್ರಾಮುಖ್ಯತೆ ನೀಡುವ ತಂಡಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ಇದು ಸ್ವಾರ್ಥವನ್ನು ಸೂಚಿಸುತ್ತದೆ ಎಂದು ಭಾರತ ತಂಡದ ಟೆಸ್ಟ್ ಕ್ರಿಕೆಟಿಗ ಚೇತೇಶ್ವರ್ ಪೂಜಾರ (Cheteshwar Pujara) ತರಾಟೆ ತೆಗೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​​ನಲ್ಲಿ (ODI World Cup 2023) ಶತಕ ಸಿಡಿಸಿದ ಕೊಹ್ಲಿ ಅವರದ್ದು 48ನೇ ಏಕದಿನ ಶತಕವಾಗಿದೆ.

ಬಾಂಗ್ಲಾದೇಶ ತಂಡವನ್ನು 7 ವಿಕೆಟ್​​ಗಳಿಂದ ಮಣಿಸಿದ ಭಾರತ ತಂಡ, ಈಗ ನ್ಯೂಜಿಲೆಂಡ್ ಕದನಕ್ಕೆ ಸಿದ್ಧವಾಗಿದೆ. ಆದರೆ ಈ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಲು ಹೆಚ್ಚು ಒತ್ತು ನೀಡಿದ ಕಾರಣಕ್ಕೆ ಟೀಕೆಗಳು ಕೇಳಿ ಬಂದಿವೆ. ಅವರು ತಮ್ಮ ಶತಕವನ್ನು ಪೂರ್ಣಗೊಳಿಸಲು ಇದು ಸರಿಯಾದ ಕ್ರಮವಲ್ಲ ಎಂದು ಕ್ರಿಕೆಟ್​ ಐಕಾನ್​ಗಳೇ ಟೀಕಿಸಿದ್ದಾರೆ. ಪಂದ್ಯದ ನಂತರ ಸಿಂಗಲ್ಸ್​ ಪಡೆಯಬೇಡಿ. ತಾನೇ ಶತಕ ಗಳಿಸುವಂತೆ ಹೇಳಿರುವುದಾಗಿ ರಾಹುಲ್​ ಹೇಳಿದ್ದಾರೆ. ಆದರೂ ಟೀಕೆಗಳು ನಿಲ್ಲಿತ್ತಿಲ್ಲ.

ರಾಹುಲ್ ಹೇಳಿದ್ದು ಹೀಗೆ..

ನಾನು ಸಿಂಗಲ್ಸ್​ ತೆಗೆದುಕೊಳ್ಳುವುದಿಲ್ಲ. ನೀವು ಶತಕ ಪೂರ್ಣಗಳಿಸಿ ಎಂದಿದ್ದೆ. ಆದರೆ ಕೊಹ್ಲಿ, ಹಾಗೆ ಮಾಡಿದರೆ, ನಾನು ವೈಯಕ್ತಿಕ ದಾಖಲೆಗೆ ಆಡುತ್ತಿದ್ದಾರೆ ಎಂದು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಗಾಗಿ ನೀನು ಕೂಡ ರನ್ ಗಳಿಸಬೇಕು ಎಂದು ಕೊಹ್ಲಿ, ನನಗೆ ಹೇಳಿದ್ದರು. ನಾವು ಹೇಗಿದ್ದರೂ ಪಂದ್ಯವನ್ನು ಗೆಲ್ಲುತ್ತೇವೆ. ಹಾಗಾಗಿ ಶತಕ ಗಳಿಸಿ, ನಾನು ಸಿಂಗಲ್ಸ್ ಪಡೆಯಲ್ಲ ಎಂದು ಕೊಹ್ಲಿಯನ್ನು ಒಪ್ಪಿಸಿದ್ದೆ ಎಂದು ರಾಹುಲ್​, ಶತಕದ ಗುಟ್ಟನ್ನು ಬಹಿರಂಗಪಡಿಸಿದ್ದರು.

ಕೊಹ್ಲಿಯನ್ನು ಟೀಕಿಸಿದ ಪೂಜಾರ ಟೀಕೆ

ಕೊಹ್ಲಿ ಶತಕದ ಕುರಿತು ಕ್ರಿಕ್​ಇನ್ಫೋ ಜೊತೆಗೆ ಮಾತನಾಡಿದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ವಿರಾಟ್​ ಶತಕ ಸಿಡಿಸಲಿ ಎಂಬುದು ನನ್ನ ಆಸೆಯೂ ಆಗಿತ್ತು. ಆದರೆ ತಂಡದ ಗೆಲುವಿಗೆ ಅವರು ಮೊದಲು ಆದ್ಯತೆ ನೀಡಬೇಕಿತ್ತು. ದ್ವಿಪಕ್ಷೀಯ ಸರಣಿಗಳಿಗೂ, ಐಸಿಸಿ ಟೂರ್ನಿಗಳಿಗೂ ತುಂಬಾ ವ್ಯತ್ಯಾಸ ಇದೆ. ಐಸಿಸಿ ಈವೆಂಟ್​ಗಳಲ್ಲಿ ನೆಟ್​ರನ್ ರೇಟ್​ ತುಂಬಾ ಮುಖ್ಯವಾಗುತ್ತದೆ. ವಿಶ್ವಕಪ್​​ನಲ್ಲಿ ಉತ್ತಮ ನೆಟ್​ ರನ್​ರೇಟ್ ಕಾಯ್ದುಕೊಂಡು ಸೆಮೀಸ್​ಗೆ ಜಾಗ ಭದ್ರಪಡಿಸಿಕೊಳ್ಳಬೇಕು ಎಂದರು.

‘ನೆಟ್​ ರನ್​ರೇಟ್ ಮುಖ್ಯ’

ಶತಕಕ್ಕಾಗಿ ಸಮಯ ವ್ಯರ್ಥ ಮಾಡಿದ್ದನ್ನು ತಂಡವನ್ನು ಬೇಗ ಗೆಲ್ಲಿಸಿಕೊಡಲು ಪ್ರಯತ್ನಿಸಿದರೆ, ಇನ್ನಷ್ಟು ರನ್ ರೇಟ್​ ಬರುತ್ತಿತ್ತು. ಒಂದು ವೇಳೆ ಇದೇ ನೆಟ್​ರನ್​ ರೇಟ್ ತಂಡಕ್ಕೆ ತೊಂದರೆ ಉಂಟು ಮಾಡಿದರೆ ಆಗ ಪಶ್ಚಾತಾಪಪಡಬೇಕಾಗುತ್ತದೆ. ಇದೇ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಎಷ್ಟೋ ತಂಡಗಳು ಶ್ರೇಷ್ಠ ನೆಟ್​​ರನ್​ ರೇಟ್​ ಹೊಂದಿರದ ಕಾರಣ ಮುಂದಿನ ಹಂತಕ್ಕೆ ಅವಕಾಶ ಪಡೆಯದ ಉದಾಹರಣೆಗಳು ನಮ್ಮ ಮುಂದಿವೆ ಎಂದಿದ್ದಾರೆ ಟೆಸ್ಟ್ ಸ್ಪೆಷಲಿಸ್ಟ್.

‘ಕೆಲವೊಮ್ಮೆ ದಾಖಲೆಗಳನ್ನು ಬಲಿಕೊಡಬೇಕು’

ನನ್ನ ಪ್ರಕಾರ, ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ತಂಡದ ಗೆಲುವೇ ಪ್ರಮುಖವಾಗಬೇಕು. ಮೊದಲ ಆದ್ಯತೆಯೂ ಗೆಲುವಾಗಿರಬೇಕು. ಇಂತಹ ಸಂದರ್ಭದಲ್ಲಿ ವೈಯಕ್ತಿಕ ದಾಖಲೆಗಳನ್ನು ಬಲಿಕೊಡಲೇ ಬೇಕು. ಹಾಗಂತ ದಾಖಲೆಗಳು ಮುಖ್ಯ ಎಂದು ಹೇಳುತ್ತಿಲ್ಲ. ಆದರೆ ಅವುಗಳಿಂದ ತಂಡಕ್ಕೆ ನಷ್ಟವಾಗಬಾರದು ಎಂಬುದು ನನ್ನ ಆಸೆ. ನಿಜ ಶತಕ ಸಿಡಿಸಿದರೆ ಆ ಆಟಗಾರನ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. ಆದರೆ ಇದೆಲ್ಲವೂ ಆ ಆಟಗಾರನಿಗೆ ಬಿಟ್ಟದ್ದು ಎಂದು ಟೀಕಿಸಿದ್ದಾರೆ ಪೂಜಾರ.

ದೊಡ್ಡ ಹೊಡೆತಗಳಿಗೆ ಕೈಹಾಕಿದ ಕೊಹ್ಲಿ

ಬಾಂಗ್ಲಾ ವಿರುದ್ಧ 257 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಗೆಲುವಿಗೆ 20 ರನ್‌ಗಳ ಅವಶ್ಯ ಇತ್ತು. ಆ ವೇಳೆ ಕೊಹ್ಲಿ ಸೆಂಚುರಿಗೆ 19 ರನ್‌ಗಳು ಬೇಕಿತ್ತು. ಆದರೆ ಈ ಸಂದರ್ಭದಲ್ಲಿ ನಾನ್​ ಸ್ಟ್ರೈಕ್​ನಲ್ಲಿ ಕೆಎಲ್‌ ರಾಹುಲ್‌, ರನ್ ಪಡೆಯಲಿಲ್ಲ. ಆ ಮೂಲಕ ವಿರಾಟ್‌ ಶತಕಕ್ಕೆ ನೆರವಾದರು. ಅಲ್ಲದೆ, ಕೊಹ್ಲಿ ಸಹ ಸಿಂಗಲ್ಸ್‌ ಪಡೆಯದೆ ಸಾಧ್ಯವಾದಷ್ಟೂ ದೊಡ್ಡ ಹೊಡೆತಗಳಿಗೆ ಕೈ ಹಾಕಿದರು. ಆ ಮೂಲಕ 48ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು. ಅವರ ನಿಧಾನಗತಿಯ ಆಟದಿಂದ 40 ಓವರ್​ಗಳ ಒಳಗೆ ಮುಗಿಯಬೇಕಿದ್ದ ಪಂದ್ಯವು 41.3 ಓವರ್​​​ವರೆಗೂ ತಲುಪಿತು.

Whats_app_banner