ಕನ್ನಡ ಸುದ್ದಿ  /  ಕ್ರಿಕೆಟ್  /  ಬಿಸಿಸಿಐ ಕೊಟ್ಟ ಬಹುಮಾನದಲ್ಲಿ 2.5 ಕೋಟಿ ನಿರಾಕರಿಸಿದ ರಾಹುಲ್ ದ್ರಾವಿಡ್; ಸಮಬಾಳು-ಸಮಪಾಲು ಸಿದ್ಧಾಂತ ಪಾಲಿಸಿದ ಕನ್ನಡಿಗ

ಬಿಸಿಸಿಐ ಕೊಟ್ಟ ಬಹುಮಾನದಲ್ಲಿ 2.5 ಕೋಟಿ ನಿರಾಕರಿಸಿದ ರಾಹುಲ್ ದ್ರಾವಿಡ್; ಸಮಬಾಳು-ಸಮಪಾಲು ಸಿದ್ಧಾಂತ ಪಾಲಿಸಿದ ಕನ್ನಡಿಗ

Rahul Dravid: ಟಿ20 ವಿಶ್ವಕಪ್ ಗೆದ್ದ ನಂತರ ಬಿಸಿಸಿಐ ಘೋಷಿಸಿದ್ದ 5 ಕೋಟಿ ರೂಪಾಯಿ ಬಹುಮಾನ ಮೊತ್ತದಲ್ಲಿ 2.5 ಕೋಟಿಯನ್ನು ತಿರಸ್ಕರಿಸಿದ್ದಾರೆ. ಕಾರಣ ಏನಿರಬಹುದು? ಇಲ್ಲಿದೆ ವಿವರ.

ಬಿಸಿಸಿಐ ಕೊಟ್ಟ ಬಹುಮಾನದಲ್ಲಿ 2.5 ಕೋಟಿ ನಿರಾಕರಿಸಿದ ರಾಹುಲ್ ದ್ರಾವಿಡ್; ಸಮಬಾಳು-ಸಮಪಾಲು ಸಿದ್ಧಾಂತ ಪಾಲಿಸಿದ ಕನ್ನಡಿಗ
ಬಿಸಿಸಿಐ ಕೊಟ್ಟ ಬಹುಮಾನದಲ್ಲಿ 2.5 ಕೋಟಿ ನಿರಾಕರಿಸಿದ ರಾಹುಲ್ ದ್ರಾವಿಡ್; ಸಮಬಾಳು-ಸಮಪಾಲು ಸಿದ್ಧಾಂತ ಪಾಲಿಸಿದ ಕನ್ನಡಿಗ

2024ರ ಐಸಿಸಿ ಟಿ20 ವಿಶ್ವಕಪ್ (T20 World Cup 2024)​ ಜಯಿಸಿದ ಭಾರತ ತಂಡಕ್ಕೆ (Team India) 125 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಬಿಸಿಸಿಐ (BCCI) ಘೋಷಿಸಿದೆ. ಇದು ಭಾರತೀಯ ಆಟಗಾರರು ಮತ್ತು ಸಿಬ್ಬಂದಿಗೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಭಾರತೀಯ ಆಟಗಾರರಿಗೆ ಹಾಗೂ ಹೆಡ್​ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ತಲಾ 5 ಕೋಟಿ ನೀಡಲಾಗಿದೆ. ಉಳಿದ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಆದರೆ, ದ್ರಾವಿಡ್ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಮಾಜಿ ಹೆಡ್​ಕೋಚ್ ರಾಹುಲ್ ದ್ರಾವಿಡ್ ತಮಗೆ ಸಿಕ್ಕ 5 ಕೋಟಿ ರೂಪಾಯಿ ಬಹುಮಾನದ ಪೈಕಿ ಅರ್ಧ ಕೈಬಿಡಲು ನಿರ್ಧರಿಸಿದ್ದಾರೆ. ಹೌದು, ಸಿಬ್ಬಂದಿ ವರ್ಗದ ಭಾಗವಾದ ದ್ರಾವಿಡ್, ಈಗ ಹೆಚ್ಚುವರಿ ಬಹುಮಾನ ಮೊತ್ತವನ್ನು ಬಿಟ್ಟುಬಿಡಲು ನಿರ್ಧರಿಸಿದ್ದಾರೆ. ದ್ರಾವಿಡ್ ಹೊರತುಪಡಿಸಿ ಉಳಿದ ಸಿಬ್ಬಂದಿ ತಲಾ 2.5 ಕೋಟಿ ರೂ. ಪ್ರೈಜ್​ ಮನಿ ಪಡೆಯುತ್ತಾರೆ. ಹೀಗಾಗಿ, ನನಗೂ ಅವರಂತೆಯೇ 2.5 ಕೋಟಿ ರೂ ಪಡೆಯುತ್ತೇನೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

2.5 ಕೋಟಿ ಬಹುಮಾನ ತಿರಸ್ಕರಿಸಿದ ದ್ರಾವಿಡ್

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​​ಗೆ ಹೋಲಿಸಿದರೆ ಹೆಡ್​​ಕೋಚ್ ದ್ರಾವಿಡ್ 2.5 ಕೋಟಿ ರೂಪಾಯಿ ನಗದು ಬಹುಮಾನ ಹೆಚ್ಚು ಪಡೆಯುತ್ತಾರೆ. ಆದರೆ ಇದನ್ನು ದ್ರಾವಿಡ್ ತಿರಸ್ಕರಿಸಿದ್ದಾರೆ. ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು 2.5 ಕೋಟಿ ಮಾತ್ರ ಪಡೆಯುತ್ತಾರೆ. ನನಗೂ ಅಷ್ಟೇ 2.5 ಕೋಟಿ ನೀಡುವಂತೆ ದ್ರಾವಿಡ್ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದ್ರಾವಿಡ್ ಜತೆಗೆ ಭಾರತ ತಂಡದ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ, ರಿಸರ್ವ್​ ಪ್ಲೇಯರ್​ಗಳಿಗೆ ತಲಾ 1 ಕೋಟಿ ನೀಡಲಾಗಿದೆ. ಹಾಗೆಯೇ ಸಹಾಯಕ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಈ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಖುದ್ಧು ರಾಹುಲ್ ದ್ರಾವಿಡ್ 2.5 ಕೋಟಿ ತಿರಸ್ಕರಿಸಿದ್ದಾರೆ. ಉಳಿದ ಸಿಬ್ಬಂದಿಯಂತೆ ನಾನೂ ಕೂಡ 2.5 ಕೋಟಿ ರೂಪಾಯಿ ಬಹುಮಾನ ಪಡೆಯುತ್ತೇನೆ ಎಂದು ಬಿಸಿಸಿಐ ಅಧಿಕಾರಿಗಳಿಗೆ ದ್ರಾವಿಡ್ ಹೇಳಿದ್ದಾರೆ ಎಂದು ವರದಿಯಾಗಿದೆ.

ದ್ರಾವಿಡ್ ನಡೆ ಮೆಚ್ಚುಗೆ

ಸಮಬಾಳು-ಸಮಪಾಲು ಸಿದ್ಧಾಂತ ಪಾಲಿಸಿದ ದ್ರಾವಿಡ್ ಈ ಹಿಂದೆ ಕೂಡ ಪಾಲಿಸಿದ್ದಾರೆ. 2018ರಲ್ಲಿ ಅಂಡರ್-19 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ​ ಜಯಿಸಿದ್ದಾಗ ದ್ರಾವಿಡ್ ಹೆಡ್​ಕೋಚ್ ಆಗಿದ್ದರು. ಅಂದು ಸಹ ಬಿಸಿಸಿಐ ಘೋಷಿಸಿದ್ದ ಬಹುಮಾನ ಮೊತ್ತದಲ್ಲಿ ಸಿಬ್ಬಂದಿಯಂತೆ ನನಗೂ ಅಷ್ಟೆ ಕೊಡಿ ಎಂದು ಹೇಳಿದ್ದರು. ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂಪಾಯಿ, ಇತರೆ ಸಿಬ್ಬಂದಿಗೆ 20 ಲಕ್ಷ ರೂಪಾಯಿ ಬಹುಮಾನ ನಿಗದಿಪಡಿಸಲಾಗಿತ್ತು.

ಆದರೆ, ದ್ರಾವಿಡ್ ತನ್ನ ಸೇರಿದಂತೆ ಪ್ರತಿಯೊಬ್ಬ ಕೋಚಿಂಗ್ ಸಿಬ್ಬಂದಿಗೆ 25 ಲಕ್ಷ ರೂಪಾಯಿ ಸಿಗುವಂತೆ ನೋಡಿಕೊಂಡಿದ್ದರು. ಇದೀಗ ಮತ್ತೆ ದ್ರಾವಿಡ್ ತಮ್ಮ ಬಹುಮಾನ ಮೊತ್ತ ಕಡಿತಗೊಳಿಸಿ ಸಮಪಾಲಿನ ಸಿದ್ಧಾಂತ ಪಾಲಿಸಿದ್ದಾರೆ. ಬಿಸಿಸಿಐ ಸೆಲೆಕ್ಟರ್​​ಗಳು, ಫಿಸಿಯೋ ಥೆರಪಿಸ್ಟ್​​ಗಳು, ಥ್ರೋಡೌನ್ ಸ್ಪೆಷಲಿಸ್ಟ್​ ಸೇರಿದಂತೆ ಹಲವರು ಸಹ ಬಹುಮಾನ ಪಡೆದಿದ್ದಾರೆ.